ಈ ಒಂದು ಟ್ಯಾಬ್ಲೆಟ್ ನಿಂದ ನಿಮ್ಮ ಮೊಡವೆಗಳಿಗೆ ಹೇಳಿ ಗುಡ್ ಬೈ..!

get-rid-of-pimples-overnight-with-the-use-aspirin

ಮೊಡವೆಗಳು ನಮ್ಮ ಮುಖವನ್ನು ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ ನಂತರ ಕಲೆಗಳನ್ನು ಉಳಿಸಿ ಹೋಗುತ್ತವೆ. ಈ ಮೊಡವೆಗಳು ಸಾಮಾನ್ಯವಾಗಿ ಎಣ್ಣೆಯುಕ್ತ ಚರ್ಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಮೊಡವೆಗಳು ಮುಖದ ಮೇಲೆ ಉಂಟಾದರೆ ಹೊರಹೋಗಲು ಚಿಂತೆಯಾಗುತ್ತದೆ. ಇಂತಹ ಮೊಡವೆಗಳ ನಿವಾರಣೆಗೆ ನಾವಿಂದು ಸುಲಭವಾಗಿ ನಿವಾರಿಸಿಕೊಳ್ಳಬಲ್ಲ ಒಂದು ವಿಧಾನವನ್ನು ತಿಳಿಸಿಕೊಡುತ್ತೇವೆ. 

ಈ ವಿಧಾನದ ಮೂಲಕ ನಿಮ್ಮ ಮೊಡವೆಗಳನ್ನು, ರಿಂಕಲ್ಸ್ ಮತ್ತು ಫೆಸ್ ಟೈಟಿಂಗ್ ಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದಾಗಿದೆ. ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಈ ಫೆಸ್ ಪ್ಯಾಕನ್ನು ತಯಾರಿಸಿಕೊಳ್ಳಬದಾಗಿದೆ. ಆದರೆ ಈ ಫೆಸ್ ಪ್ಯಾಕನ್ನು ಬಳಸುವ ಮುನ್ನ ಯಾವುದೇ ಮೊಡವೆಗಳಿಂದ ರಕ್ತ ಅಥವಾ ಕೀವು ಸೋರುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ಉತ್ತಮ.

ಮೊದಲಿಗೆ ನೀವು ಸೌಂದರ್ಯ ವರ್ಧಕಗಳ ಚಿಕಿತ್ಸೆಗೆ ಬಳಸುವ ಆಸ್ಪರಿನ್ (Aspirin tablet) ಎಂಬ ಹೆಸರಿನ ಟ್ಯಾಬ್ಲೆಟ್ಸ್ ತೆಗೆದುಕೊಳ್ಳಬೇಕು. ಇವುಗಳು ಸುಲಭವಾಗಿ ಔಷಧ ಅಂಗಡಿಗಳಲ್ಲಿ ಕೇವಲ ಐದು ರೂಪಾಯಿಗಳಿಗೆ ಹತ್ತು ಗುಳಿಗೆಗಳು ದೊರೆಯುತ್ತದೆ. ಇವುಗಳಲ್ಲಿ ಕೇವಲ ಎರಡು ಮಾತ್ರೆಗಳನ್ನು ತೆಗೆದುಕೊಂಡು ಒಂದು ತಟ್ಟೆಯಲ್ಲಿ ಹಾಕಿಕೊಳ್ಳಬೇಕು. ಇದಕ್ಕೆ 3-4 ಹನಿಗಳಷ್ಟು ನಿಂಬೆ ರಸವನ್ನು ಹಾಕಿಕೊಂಡು ಉತ್ತಮವಾಗಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ. ಕೆಲವು ಸೆನ್ಸಿಟಿವ್ ಸ್ಕಿನ್ ಹೊಂದಿರುವವರಿಗೆ ನಿಂಬೆ ರಸವು ಆಗದಿದ್ದರೆ ಕೇವಲ ಮಾತ್ರೆಗಳ ಜೊತೆಗೆ ನೀರನ್ನು ಬೇರೆಸಿಕೊಳ್ಳಬಹುದು. 

ಇದನ್ನು ಓದಿರಿ: ಈ ಸ್ಕ್ರಬ್ ಮನೆಯಲ್ಲಿಯೇ ತಯಾರಿಸಿಕೊಂಡು ನಿಮ್ಮ ಮುಖದ ಕಲೆಗಳನ್ನು ತೊಲಗಿಸಿ

ಮುಖಕ್ಕೆ ಫೆಸ್ ಪ್ಯಾಕ್ ಹಚ್ಚಿಕೊಳ್ಳುವುದಕ್ಕೂ ಮೊದಲು ಶುಭ್ರವಾಗಿ ತೊಳೆದುಕೊಳ್ಳಿ. ನಂತರ ಸಂಪೂರ್ಣ ಮುಖಕ್ಕೆ ಈ ಮೊದಲೇ ತಯಾರಿಸಿಕೊಂಡ ಪೇಸ್ಟನ್ನು ಹಚ್ಚಿಕೊಳ್ಳಿ. ಸಂಪೂರ್ಣ ಹಚ್ಚಿಕೊಂಡು 2 ರಿಂದ 3 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ನಂತರ ಅಲೋವೆರಾ ಜೆಲ್ ನ ಹಚ್ಚಿ ಮಸಾಜ್ ಮಾಡಬೇಕು. 

ಈ ವಿಧಾನವನ್ನು ರಾತ್ರಿಯ ಸಮಯದಲ್ಲಿ ಅನುಸರಿಸುವುದು ಉತ್ತಮ. ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಮಾಡಿ ನೋಡಿ, ಶೀಗ್ರದಲ್ಲಿ ನಿಮ್ಮ ಮುಖದ ಮೇಲಿನ ಮೊಡವಡಗಳು, ಕಲೆಗಳು ಮತ್ತು ವಯಸ್ಸಿನ ಲಕ್ಷಣಗಳು ನಿವಾರಣೆ ಆಗುತ್ತವೆ. ಈ ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳಲು ಕೆಳಗಿನ ವಿಡಿಯೋ ನೋಡಿ..

LEAVE A REPLY

Please enter your comment!
Please enter your name here