DRDO CABS Recruitment 2023: 16 ಜೂನಿಯರ್ ರಿಸರ್ಚ್ ಫೆಲೋಶಿಪ್ ಪೋಸ್ಟ್‌ಗಳಿಗೆ ಅರ್ಜಿ ಅಹ್ವಾನ

DRDO CABS Recruitment 2023

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (DRDO CABS Recruitment 2023) ಒಟ್ಟು 16 ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ ಜೂನಿಯರ್ ರಿಸರ್ಚ್ ಫೆಲೋಶಿಪ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಡಿಆರ್‌ಡಿಒ ಸಿಎಬಿಎಸ್ ಅಧಿಕೃತ ಅಧಿಸೂಚನೆ ಅಕ್ಟೋಬರ್ 2023 ರ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಹಾಗೂ ಡಿ ಆರ್ ಡಿ ಓ ನಲ್ಲಿ ಉದ್ಯೋಗ ಮಾಡುವ ಆಸಕ್ತಿ ಇಟ್ಟುಕೊಂಡಿರುವವರು ಈ ಅವಕಾಶವನ್ನು ಬಳಸಿಕೊಳ್ಳಿ. DRDO ನ ಜೂನಿಯರ್ ರಿಸರ್ಚ್ ಫೆಲೋಶಿಪ್ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು 15 ನವೆಂಬರ್ 2023 ರ ಒಳಗೆ ಇಮೇಲ್ ಕಳುಹಿಸಲು ತಿಳಿಸಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಂದೆ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ನೋಟಿಫಿಕೇಶನ್ ಸಹ ಒದಗಿಸಲಾಗಿದ್ದು, ಸರಿಯಾಗಿ ಮತ್ತೊಮ್ಮೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರೆ ತಪ್ಪದೇ ನಮ್ಮ ಟೆಲಿಗ್ರಾಮ್ ಚಾನಲ್ ಹಾಗೂ ವಾಟ್ಸಾಪ್ ಚಾನಲ್ ಗಳಿಗೆ ತಾವು ಜಾಯಿನ್ ಆಗಬಹುದು.(Followers phone numbers are not revealed)

ಈ ಉದ್ಯೋಗ ಮಾಹಿತಿಯನ್ನೂ ಓದಿರಿ:Intelligence Bureau Recruitment 2023: ವಿವಿಧ 677 ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಹಾಕಿ

ಉದ್ಯೋಗ ನೀಡುವ ಸಂಸ್ಥೆಯ ಹೆಸರುಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ (DRDO)
ಹುದ್ದೆಗಳ ಸಂಖ್ಯೆ16
ಉದ್ಯೋಗ ಸ್ಥಳಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರುಜೂನಿಯರ್ ರಿಸರ್ಚ್ ಫೆಲೋಶಿಪ್ (JRF)
ಸ್ಟೈಪೆಂಡ್ರೂ.37000/- ಪ್ರತಿ ತಿಂಗಳು

ಹುದ್ದೆಯ ಮಾಹಿತಿ

  • ಏರೋನಾಟಿಕಲ್ ಇಂಜಿನಿಯರಿಂಗ್- 1
  • ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್- 9
  • ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್- 5
  • ಎಲೆಕ್ಟ್ರಿಕಲ್ ಇಂಜಿನಿಯರಿಂಗ್- 1

ವಿದ್ಯಾರ್ಹತೆ

DRDO CABS ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು B.E ಅಥವಾ B.Tech, M.E ಅಥವಾ M.Tech ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.

ವಯೋಮಿತಿ

ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ ನೇಮಕಾತಿ ಅಧಿಸೂಚನೆಯ (DRDO CABS Recruitment 2023) ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 15 ನವೆಂಬರ್ 2023 ರಂತೆ 28 ವರ್ಷಗಳು.

ಇನ್ನುಳಿದಂತೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ OBC (NCL) ಅಭ್ಯರ್ಥಿಗಳಿಗೆ 03 ವರ್ಷಗಳು ಮತ್ತು SC/ST ಅಭ್ಯರ್ಥಿಗಳಿಗೆ 05 ವರ್ಷಗಳು ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಿದ್ದಾರೆ.

ಈ ಉದ್ಯೋಗ ಮಾಹಿತಿಯನ್ನೂ ಓದಿರಿ: IOCL Apprentice Recruitment 2023: ಇಂಡಿಯನ್ ಆಯಿಲ್‌ ಕಂಪನಿಯಲ್ಲಿ 1720 ಅಪ್ರೆಂಟಿಸ್‌ ಹುದ್ದೆಗಳು

ಅರ್ಜಿ ಶುಲ್ಕ

ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ

DRDO CABS Recruitment 2023 ಅಧಿಸೂಚನೆಯ ಹುದ್ದೆಗೆ ಆಯ್ಕೆ ಮಾಡಲು ಗೇಟ್ ಸ್ಕೋರ್, ಮೆರಿಟ್ ಲಿಸ್ಟ್ ಮತ್ತು ನೇರ ಸಂದರ್ಶನ ವಿಧಾನಗಳನ್ನು ಅನುಸರಿಸಲಾಗುತ್ತಿದೆ.

DRDO CABS Recruitment 2023 (ಜೂನಿಯರ್ ರಿಸರ್ಚ್ ಫೆಲೋಶಿಪ್) ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, jrf.rectt.cabs@gov.in ಗೆ 15 ನವೆಂಬರ್ 2023 ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.

ಪ್ರಮುಖ ದಿನಾಂಕಗಳು

  • ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 25 ಅಕ್ಟೋಬರ್ 2023
  • ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 15 ನವೆಂಬರ್ 2023

ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here