IOCL Apprentice Recruitment 2023: ಇಂಡಿಯನ್ ಆಯಿಲ್‌ ಕಂಪನಿಯಲ್ಲಿ 1720 ಅಪ್ರೆಂಟಿಸ್‌ ಹುದ್ದೆಗಳು

IOCL Apprentice Recruitment 2023

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation Limited) ಸಂಸ್ಥೆಯು 1720 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. IOCL Apprentice Recruitment 2023 ನ ಅಪ್ರೆಂಟಿಸ್ ಹುದ್ದೆಗಳಿಗೆ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊರಳಾಗಿದ್ದು, ನವೆಂಬರ್ 20 ರ ಒಳಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಈ ಲೇಖನದಲ್ಲಿ, ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

(ಇದು ಜಾಹಿರಾತು ಆಗಿರುತ್ತದೆ)
ಜಾಹಿರಾತು ನೀಡಲು ವಾಟ್ಸಾಪ್ ಮಾಡಿ 8762044187

ನೋಂದಣಿ ಪ್ರಕ್ರಿಯೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಕರೆದಿರುವ ಒಟ್ಟು 1720 ಹುದ್ದೆಗಳ ಭರ್ತಿಗೆ ಅರ್ಜಿ ಸ್ವೀಕಾರ ಅಕ್ಟೋಬರ್ 21 ರಂದು ಪ್ರಾರಂಭವಾಗಿದೆ ಮತ್ತು 2023ರ ನವೆಂಬರ್ 20 ರಂದು ಕೊನೆಗೊಳ್ಳುತ್ತದೆ.

ಈ ಉದ್ಯೋಗ ಮಾಹಿತಿಯನ್ನೂ ನೋಡಿ: UAS Dharwad Recruitment 2023:ಲೈಬ್ರರಿ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

IOCL Apprentice Recruitment 2023 ರ ಅರ್ಹತೆಯ ಮಾನದಂಡ

ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು 12 ನೇ ತರಗತಿ / ಪದವೀಧರ / ಡಿಪ್ಲೊಮಾ ಹೊಂದಿರುವವರಾಗಿದ್ದು, ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ ಸಂಬಂಧಿತ ವ್ಯಾಪಾರ / ವಿಭಾಗದಲ್ಲಿ ನಿಯತ ಪೂರ್ಣ ಸಮಯದ ಕೋರ್ಸ್ ಮಾಡಿರಬೇಕು. ಕನಿಷ್ಠ 50 ಶೇಕಡಾ ಅಂಕ ಗಳಿಸಿರಬೇಕು.

( ಒಟ್ಟಾರೆಯಾಗಿ ಎಸ್‌ಸಿ / ಎಸ್‌ಟಿ ಮತ್ತು ಪಿಡಬ್ಲ್ಯುಬಿಡಿ ವರ್ಗದ ಅಭ್ಯರ್ಥಿಗಳಿಗೆ ಶೇಕಡಾ 45 ಮೀಸಲು). ವಯೋಮಿತಿಯು 2023ರ ಅಕ್ಟೋಬರ್ 31 ರಂತೆ 18 ವರ್ಷದಿಂದ 24 ವರ್ಷಗಳ ನಡುವೆ ಇರಬೇಕು. ಎಸ್‌ಸಿ/ ಎಸ್‌ಟಿ / ಒಬಿಸಿ (ಎನ್‌ಸಿಎಲ್‌)/ ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ಗರಿಷ್ಠ ವಯಸ್ಸಿನ ಮಿತಿ ವಿನಾಯಿತಿಯು ಹೀಗಿದೆ.

ಈ ಉದ್ಯೋಗ ಮಾಹಿತಿಯನ್ನೂ ನೋಡಿ: Intelligence Bureau Recruitment 2023: ವಿವಿಧ 677 ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಹಾಕಿ

ಇಂಡಿಯನ್ ಆಯಿಲ್ ಅಪ್ರೆಂಟಿಸ್‌ಗೆ ಆಯ್ಕೆ ಪ್ರಕ್ರಿಯೆ

ಇಂಡಿಯನ್ ಆಯಿಲ್ ಅಪ್ರೆಂಟಿಸ್‌ಗೆ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಒಂದು ಸರಿಯಾದ ಆಯ್ಕೆಯೊಂದಿಗೆ ನಾಲ್ಕು ಆಯ್ಕೆಗಳನ್ನು ಒಳಗೊಂಡಿರುವ ಆಬ್ಜೆಕ್ಟಿವ್ ಟೈಪ್ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳೊಂದಿಗೆ (MCQs) ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 40 ಪ್ರತಿಶತ ಅಂಕಗಳನ್ನು ಗಳಿಸಬೇಕು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಐಒಸಿಎಲ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

IOCL Apprentice Recruitment 2023 ರ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

  • ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ.
  • ನೇಮಕಾತಿ 2023 ಮೇಲೆ ಕ್ಲಿಕ್ ಮಾಡಿ. (ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ )
  • ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
  • ಕೊನೆಗೆ ಅರ್ಜಿ ಸಲ್ಲಿಕೆ ಪ್ರಿಂಟ್ ತೆಗೆದುಕೊಳ್ಳಿ.

ಪ್ರಮುಖ ಲಿಂಕುಗಳು

ಅಧಿಕೃತ ವೆಬ್ ಸೈಟ್ : iocl.com

ಅಧಿಕೃತ ನೋಟಿಫಿಕಶನ್ : ಕ್ಲಿಕ್ ಮಾಡಿ

ಆನ್ ಲೈನ್ ನಲ್ಲಿ ಅಪ್ಲಯ್ ಮಾಡಿ : ಕ್ಲಿಕ್ ಮಾಡಿ

ಇನ್ನೂ ಹೆಚ್ಚಿನ ಉದ್ಯೋಗ ಸುದ್ದಿಗಾಗಿ ಕ್ಲಿಕ್ ಮಾಡಿ …..

LEAVE A REPLY

Please enter your comment!
Please enter your name here