ಗುಪ್ತಚರ ಇಲಾಖೆ (Intelligence Bureau) ಇಲಾಖೆಯು ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವವರು ಕೂಡಲೇ ಅರ್ಜಿ ಹಾಕುವಂತೆ ಕೋರಲಾಗಿದೆ.
ಗುಪ್ತಚರ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 677 ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್ಪೋರ್ಟ್ ಸೇರಿ ಹಲವು ಹುದ್ದೆಗಳ ನೇಮಕಾತಿ (Intelligence Bureau Recruitment 2023) ಮಾಡಿಕೊಳ್ಳಲು ನಿಶ್ಚಯಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಇದೇ ನವೆಂಬರ್ 13 ಕೊನೆ ದಿನವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಂದೆ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ನೋಟಿಫಿಕೇಶನ್ ಸಹ ಒದಗಿಸಲಾಗಿದ್ದು, ಸರಿಯಾಗಿ ಮತ್ತೊಮ್ಮೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
(ಇದು ಜಾಹಿರಾತು ಆಗಿರುತ್ತದೆ)
ಜಾಹಿರಾತು ನೀಡಲು ವಾಟ್ಸಾಪ್ ಮಾಡಿ 8762044187
ಹುದ್ದೆಯ ಮಾಹಿತಿ
ಹುದ್ದೆಯನ್ನು ನೀಡುತ್ತಿರುವ ಸಂಸ್ಥೆ | ಕೇಂದ್ರ ಗುಪ್ತಚರ ಇಲಾಖೆ |
ಹುದ್ದೆಯ ಹೆಸರು | ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್ಪೋರ್ಟ್ ಎಂಟಿಎಸ್ |
ಖಾಲಿ ಹುದ್ದೆಗಳ ಸಂಖ್ಯೆ | 677 |
ಮಾಸಿಕ ವೇತನ | 21,700 ರಿಂದ 69,100 ರೂಪಾಯಿ |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 13 ನವೆಂಬರ್ |
ಇದನ್ನೂ ಓದಿರಿ: ಎಸ್‌ಎಸ್‌ಬಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ, ಇಂದೇ ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ
ಗುಪ್ತಚರ ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ ಎಂದು ಗುಪ್ತಚರ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದೆ.
ವಯೋಮಿತಿ
Intelligence Bureau Recruitment 2023 ನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್ಪೋರ್ಟ್ ಹುದ್ದೆಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಜನರಲ್ ಹುದ್ದೆ ಸೇರುವವರಿಗೆ 18ರಿಂದ 25 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಇನ್ನೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ PwD ಅಭ್ಯರ್ಥಿಗಳಿಗೆ ಒಟ್ಟು ಹತ್ತು ವರ್ಷ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ
ಗುಪ್ತಚರ ಇಲಾಖೆ ಅಧಿಸೂಚನೆ ಹೊರಡಿಸಿರುವ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್ಪೋರ್ಟ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವೆಂದು 50 ರೂಪಾಯಿ, ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂಪಾಯಿ ನಿಗದಿ ಮಾಡಲಾಗಿದೆ.
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಜನರಲ್ ಹುದ್ದೆಗಳಿಗೆ ಅರ್ಜಿ ಹಾಕುವ PwD ಅಭ್ಯರ್ಥಿಗಳು 450 ರೂ., ಸಾಮಾನ್ಯ/ಓಬಿಸಿ/EWS ಪುರುಷ ಅಭ್ಯರ್ಥಿಗಳು 500 ರೂ. ನಿಗದಿ ಮಾಡಲಾಗಿದೆ. ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್ಪೋರ್ಟ್ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳು 500 ರೂ. ನಿಗದಿ ಮಾಡಲಾಗಿದೆ. ಈ ಶುಲ್ಕವನ್ನು ಆನ್‌ಲೈನ್ ಮೂಲಕಪಾವತಿಸಬೇಕು.
ಇದನ್ನೂ ಓದಿರಿ: RailTel Recruitment 2023: ರೈಲ್ವೆ ಇಲಾಖೆಯಲ್ಲಿ ಡೆಪ್ಯುಟಿ ಮ್ಯಾನೇಜರ್ ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಅರ್ಜಿ ಆಹ್ವಾನ
ವೇತನ
ಗುಪ್ತಚರ ಇಲಾಖೆ ಕರೆದಿರುವ ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್ಪೋರ್ಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಕ್ರಮವಾಗಿ 21,700 ರಿಂದ 69,100 ವೇತನ ಮತ್ತು 18,000 ರಿಂದ 56,900 ರೂಪಾಯಿ ವೇತನ ಸಿಗಲಿದೆ.
ಆಯ್ಕೆ ಪ್ರಕ್ರಿಯೆ
ಗುಪ್ತಚರ ಇಲಾಖೆ ಅಧಿಸೂಚನೆ ಹೊರಡಿಸಿರುವ ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್ಪೋರ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಲಾಗುವುದು. ನಂತರ ಮೋಟಾರ್ ಮೆಕ್ಯಾನಿಸಂ, ಡ್ರೈವಿಂಗ್ ಟೆಸ್ಟ್ಡಿಸ್ಕ್ರಿಪ್ಟಿವ್ ಟೆಸ್ಟ್ ನಡೆಸಿ ನಂತರ ಸಂದರ್ಶನ ಮಾಡಲಾಗುವುದು. ಆಯ್ಕೆ ಆಗುವವರಿಗೆ ಭಾರತದಲ್ಲಿ ಎಲ್ಲಿಯಾದರೂ ಪೋಸ್ಟಿಂಗ್ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9986640811 ಗೆ ಕರೆ ಮಾಡುವಂತೆ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/10/2023
ಅರ್ಜಿ ಸಲ್ಲಿಸಲು ಕೊನೆಯ ದಿನ: 13/11/ 2023
ಪ್ರಮುಖ ಲಿಂಕುಗಳು
ಅಧಿಕೃತ ಅಧಿಸೂಚನೆ : ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿ ಸಲ್ಲಿಸಲು : ಕ್ಲಿಕ್ ಮಾಡಿ