ಮೂಲಂಗಿಯಿಂದ ಎಷ್ಟೆಲ್ಲಾ ಲಾಭ ಇದೆ, ಗೊತ್ತಾದ್ರೆ ಮಿಸ್ ಮಾಡದೆ ತಿನ್ನೋದು ಗ್ಯಾರಂಟೀ..!

Benefets of Radish

ಮೂಲಂಗಿ ಎಂದರೆ ಹಲವರು ಇಷ್ಟಪಡುವುದಿಲ್ಲ. ಏಕೆಂದರೆ ಅದರ ವಾಸನೆ ಎಲ್ಲರಿಗೂ ಹಿಡಿಸುವುದಿಲ್ಲ. ಹೀಗಾಗಿ ಮೂಲಂಗಿ ತಿನ್ನುವುದೆಂದರೆ ಮುಖವನ್ನು ಸಿಂಡರಿಸುತ್ತಾರೆ. ಆದರೆ ಇದರ ಸೇವನೆಯಿಂದ ಆರೋಗ್ಯಕ್ಕೆ ಬಹಳ ಉಪಯೋಗಗಳು ಉಂಟಾಗುತ್ತದೆ. ಅವುಗಳನ್ನು ತಿಳಿದುಕೊಂಡರೆ ನೀವು ಕಂಡಿತ ಮಿಸ್ ಮಾಡದೆ ತಿನ್ನೋದು ಗ್ಯಾರಂಟೀ..!

ಈ ಮೂಲಂಗಿಯಲ್ಲಿ ವಿಟಮಿನ್-ಎ, ವಿಟಮಿನ್-ಬಿ ಮತ್ತು ವಿಟಮಿನ್-ಸಿ ಅಂಶಗಳು ಇರುವುದರಿಂದ ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗಕಾರಿಯಾಗಿವೆ. ಇಂತಹ ಆರೋಗ್ಯಪೂರ್ಣ ಆಹಾರವನ್ನು ಸೇವಿಸುವುದರಿಂದ ಹಲವಾರು ರೋಗಗಳು ವಾಸಿಯಾಗುವುದರೊಂದಿಗೆ ಆರೋಗ್ಯವೂ ಉತ್ತಮವಾಗುತ್ತದೆ.

ಇದನ್ನೂ ಓದಿರಿ: ನಿಮಗೆ ಸರಿಯಾಗಿ ನಿದ್ರೆ ಬರ್ತಾ ಇಲ್ವಾ ? ಹಾಗಾದರೆ ಇಲ್ಲಿದೆ ನಿಮ್ಮ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ

  • ಮೂಲಂಗಿ ಸೇವನೆಯಿಂದ ಮೂಲವ್ಯಾಧಿಯ ಸಮಸ್ಯೆಯೂ ದೂರವಾಗುವುದು. ಮೂಲವ್ಯಾಧಿ ಇರುವವರು ತಮ್ಮ ಆಹಾರದಲ್ಲಿ ನಿಯಮಿತವಾಗಿ ಸೇವನೆ ಮಾಡಬೇಕು.
  • ಮೂಲಂಗಿ ಗಡ್ಡೆಯ ರಸವನ್ನು ತೆಗೆದು ತಲೆಗೆ ಹಚ್ಚಿಕೊಳ್ಳುತ್ತಾ ಬಂದರೆ ಕೂದಲಿನ ಮತ್ತು ತಲೆಹೊಟ್ಟಿನ ಸಮಸ್ಯೆಗಳು ದೂರವಾಗುತ್ತವೆ. ಇದರಿಂದ ಕೂದಲು ಉದುರುವಿಕೆಯು ನಿಯಂತ್ರಣಕ್ಕೆ ಬಂದು ಹೊಸ ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ.
  • ಮೂಲಂಗಿಯ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಒಣ ಚರ್ಮದ ಸಮಸ್ಯೆ, ಮೊಡವೆ ಮತ್ತು ಕಲೆಗಳಿಂದ ನಿವಾರನೆಯು ಶೀಗ್ರವೇ ದೊರೆಯುತ್ತದೆ.
  • ಮೂತ್ರಕೋಶದ ಸೋಂಕು, ಮೂತ್ರದ ಸಮಸ್ಯೆಯಿಂದ ಬಳಲುವವರು ಪ್ರತಿದಿನ ಕಾಲಿ ಹೊಟ್ಟೆಯಲ್ಲಿ ಮೂಲಂಗಿ ರಸವನ್ನು ಕುಡಿಯುವುದರಿಂದ ಪರಿಹಾರವಾಗುತ್ತದೆ. ಇದರಿಂದ ಮೂತ್ರಪಿಂಡ ಶುದ್ಧಗೊಂಡು ತನ್ನ ಕಾರ್ಯವನ್ನು ಉತ್ತಮಗೊಳಿಸುತ್ತದೆ.
  • ಮೂಲಂಗಿಯು ಕಾಮಾಲೆ ರೋಗದ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡಿ, ಯಕೃತ್ತಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.
  • ಕಣ್ಣು, ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಗಳಿಗೆ ಮೂಲಂಗಿಯ ಸೇವನೆ ಉತ್ತಮ ಪರಿಹಾರವನ್ನು ನೀಡುತ್ತದೆ. ಪ್ರತಿದಿನ ಹಿತ-ಮಿತವಾಗಿ ಸೇವಿಸಿ ಇದರಿಂದ ಹಲವಾರು ಪ್ರಯೋಜನಗಳಿವೆ.
  • ಮೂಲಂಗಿ ಸೊಪ್ಪನ್ನು ಸೇವಿಸುವುದರಿಂದ ಮತ್ತು ಸೊಪ್ಪಿನಿಂದ ಜ್ಯೂಸ್ ಮಾಡಿ ಕುಡಿಯುವುದರಿಂದ ಮೂತ್ರ ಕಟ್ಟಿಕೊಳ್ಳುವ ಸಮಸ್ಯೆಯು ದೂರವಾಗುತ್ತದೆ.

ಈ ಎಲ್ಲ ಪ್ರಯೋಜನಗಳನ್ನು ನೋಡಿದ ಮೇಲೆ ನೀವು ಕಂಡಿತವಾಗಿ ಮೂಲಂಗಿಯನ್ನು ಅಸಡ್ಡೆಯಿಂದ ನೋಡುವುದಿಲ್ಲ ಎಂದು ಭಾವಿಸುತ್ತೇವೆ. ಇದರ ಆರೋಗ್ಯ ಪ್ರಯೋಜನಗಳನ್ನು ಅರಿತು ಇದರ ಸೇವನೆಯನ್ನು ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದದ್ದಗಿದೆ.

ಇದನ್ನೂ ಓದಿರಿ: ಪಿತ್ತ ದೋಷ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

LEAVE A REPLY

Please enter your comment!
Please enter your name here