ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲರೂ ಇಷ್ಟಪಟ್ಟು ಸೇವಿಸುವ ಹಣ್ಣುಗಳಲ್ಲಿ ಒಂದಾಗಿದೆ. ಇದರಲ್ಲಿ ಅನೇಕ ರೀತಿಯ ಪೌಷ್ಟಿಕ ಸತ್ವಗಳು ಇರುವುದರಿಂದ ನಮ್ಮ ದೇಹಕ್ಕೆ ಅತ್ಯುತ್ತಮವಾಗಿದೆ. ಆದರೆ ನಾವು ಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಏಕೆಂದರೆ ನಮ್ಮೆಲ್ಲರ ದೃಷ್ಟಿಯಿಂದ ಇದು ನಿರುಪಯುಕ್ತ ಎಂಬ ಅಭಿಪ್ರಾಯ ನಮ್ಮಲ್ಲಿ ನೆಲೆಯೂರಿದೆ. ಆದರೆ ನಾವೆಲ್ಲಾ ತಿಳಿದಿರುವುದು ನಿಜವಲ್ಲ ಎಂಬ ಸತ್ಯವನ್ನು ನಾವಿಂದು ತಿಳಿಸಲು ಬಯಸುತ್ತೇವೆ. ಬಾಳೆಹಣ್ಣಿನ ಸಿಪ್ಪೆಯು ವಿಟಮಿನ್ ಬಿ-6, ಮೆಗ್ನೆಷಿಯಂ, ಪೊಟ್ಯಾಷಿಯಂ, ನಾರಿನಂಶಗಳನ್ನು ಹೇರಳವಾಗಿ ಹೊಂದಿದೆ. ಹಾಗಾದರೆ ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳನ್ನು ಪಡೆಯುವುದು ಹೇಗೆ ಮತ್ತು ಅದರಿಂದ ಉಂಟಾಗುವ ಪ್ರಯೋಜನಗಳೇನು ಎನ್ನುವುದನ್ನು ನಾವಿಂದು ತಿಳಿಯೋಣ..
ಬಾಳೆಹಣ್ಣಿನ ಸಿಪ್ಪೆಯನ್ನು ತಿನ್ನುವುದು
ಮೊದಲೇ ಹೇಳಿರುವಂತೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ತುಂಬಿಕೊಂಡಿವೆ. ಹಾಗಾಗಿ ಸಾಧ್ಯವಾದಷ್ಟು ಹಣ್ಣಿನ ಜೊತೆಗೆ ಸಿಪ್ಪೆಯನ್ನು ತಿನ್ನಲು ಪ್ರಯತ್ನಿಸಿ. ಬಾಳೆಹಣ್ಣು ಉತ್ತಮವಾಗಿ ಹಣ್ಣಾದಷ್ಟು (ಮಾಗಿದಷ್ಟು) ಅದರ ಸಿಪ್ಪೆಯು ಮೃದು ಮತ್ತು ಸಿಹಿಯಾಗುತ್ತದೆ. ಇದರಿಂದ ಹಣ್ಣಿನಲ್ಲಿರುವ ಸಂಪೂರ್ಣ ಪೋಷಕಾಂಶ ದೊರೆತಂತಾಗುತ್ತದೆ. ಸಿಪ್ಪೆಯ ಸಮೇತ ಹಣ್ಣನ್ನು ತಿನ್ನುವ ಮೊದಲು ಹಣ್ಣನ್ನು ಉತ್ತಮವಾಗಿ ತೊಳೆದುಕೊಳ್ಳಿ. ಏಕೆಂದರೆ ಕೀಟನಾಶಕಗಳು ಮತ್ತು ಸೂಕ್ಷ್ಮಾಣುಗಳು ಸಿಪ್ಪೆಗೆ ಅಂಟಿಕೊಂಡಿರಬಹುದು.
ಬಿಳಿಯಾದ ಹಲ್ಲುಗಳನ್ನು ಪಡೆಯಲು
ಬಾಳೆಹಣ್ಣಿನ ಸಿಪ್ಪೆಗಳನ್ನು ಎಸೆಯುವ ಬದಲು ಅವುಗಳನ್ನು ತೆಗೆದುಕೊಂಡು ಸಿಪ್ಪೆಯ ಒಳಬಾಗದಿಂದ, ಹಳದಿಗಟ್ಟಿದ ನಿಮ್ಮ ಹಲ್ಲುಗಳ ಮೇಲೆ ಚೆನ್ನಾಗಿ ತಿಕ್ಕಿರಿ. ಈ ರೀತಿ ಒಂದು ವಾರಗಳ ಕಾಲ ಮಾಡುವುದರಿಂದ ನಿಮ್ಮ ಹಲ್ಲುಗಳು ಬಿಳಿಯಾಗಿ ಪಳ ಪಳ ಹೊಳೆಯುತ್ತವೆ. ಸುಮ್ಮನೆ ಎಸೆಯುವುದಕ್ಕಿಂತ ಅದರಿಂದ ಪ್ರಯೋಜನಗಳನ್ನು ಪಡೆದುಕೊಳ್ಳಿ.
ಇದನ್ನೂ ಓದಿರಿ: ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ ?
ಮೊಡವೆಗಳನ್ನುತೊಲಗಿಸಿ
ಹಲವರು ಮೊಡವೆಗಳಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ. ಇವುಗಳನ್ನು ತೊಲಗಿಸಲು ಮನೆಮದ್ದುಗಳನ್ನು ಹುಡುಕುತ್ತಿದ್ದರೆ ಬಾಳೆಹಣ್ಣಿನ ಸಿಪ್ಪೆ ನಿಮಗೆ ಸಹಾಯ ಮಾಡುತ್ತದೆ. ಸಿಪ್ಪೆಯನ್ನು ತೆಗೆದುಕೊಂಡು ಮೊಡವೆಗಳ ಮೇಲೆ ನಿಧಾನವಾಗಿ ತಿಕ್ಕಿ ಮಸಾಜ್ ಮಾಡಿ. ನಂತರ 10-15 ನಿಮಿಷಗಳ ಸಮಯ ಬಿಟ್ಟು ಮತ್ತೊಮ್ಮೆ ಇದೇ ರೀತಿ ಮಾಡುತ್ತಾ, ನಂತರ 15 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳಿ. ದಿನದಲ್ಲಿ ಎರಡು ಮೂರೂ ಬಾರಿ ಈ ವಿಧಾನವನ್ನು ಮಾಡುವುದರಿಂದ ಒಂದು ವಾರದಲ್ಲಿ ಕಲೆಗಳು ಮತ್ತು ಮೊಡವೆಗಳು ಮಾಯವಾಗುತ್ತವೆ.
ಸುಕ್ಕನ್ನು ನಿವಾರಿಸಿಕೊಳ್ಳಿ
ಕೆಲವೊಮ್ಮೆ ಮುಖದ ಮೇಲೆ ಸುಕ್ಕುಗಳು ಉಂಟಾಗಿ ನಮ್ಮನ್ನು ಚಿಂತೆಗೀಡು ಮಾಡುತ್ತವೆ. ಇದರ ನಿವಾರಣೆಯನ್ನು ಬಾಳೆಹಣ್ಣಿನ ಸಿಪ್ಪೆ ಉಪಯೋಗಿಸಿಕೊಂಡು ದೂರಮಾಡಬಹುದಾಗಿದೆ. ಸುಕ್ಕುಗಟ್ಟಿರುವ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ತಿಕ್ಕಿ ಮಸಾಜ್ ಮಾಡುತ್ತಾ ಇರಬೇಕು. ಇದರಿಂದಾಗಿ ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭ್ಯವಾಗಿ ನಿಧಾನವಾಗಿ ಸುಕ್ಕುಗಳು ದೂರವಾಗುತ್ತವೆ.
ನೋವು ನಿವಾರಣೆ
ಬಾಳೆಹಣ್ಣಿನ ಸಿಪ್ಪೆಯಿಂದ ನೋವುಗಳ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ. ಗಾಯಗಳು ಉಂಟಾದ ಪ್ರದೇಶವನ್ನು ಸ್ವಚ್ಛವಾಗಿ ತೊಳೆದು ಶುಭ್ರಗೊಳಿಸಿಕೊಳ್ಳಬೇಕು. ನಂತರ ಈ ಸಿಪ್ಪೆಯನ್ನು ತೆಗೆದುಕೊಂಡು ಆ ಗಾಯವಿರುವ ಜಾಗಕ್ಕೆ ಬಟ್ಟೆಯ ಸಹಾಯದಿಂದ ಕಟ್ಟಬೇಕು. ಈ ರೀತಿ ಮಾಡುವುದರಿಂದ ನೋವು ಶೀಘ್ರವೇ ನಿವಾರಣೆಯಾಗುತ್ತದೆ. ಇದಲ್ಲದೇ ಕೀಟಗಳು ಮತ್ತು ಸೊಳ್ಳೆಗಳು ಕಚ್ಚಿದ ಜಾಗಕ್ಕೆ ಸಿಪ್ಪೆಯ ಒಳಬಾಗದಿಂದ ಮಸಾಜ್ ಮಾಡುವುದರಿಂದ ಬೇಗನೆ ನೋವು ದೂರವಾಗುತ್ತದೆ.
ಇದನ್ನೂ ಓದಿರಿ: ಡಾರ್ಕ್ ಸರ್ಕಲ್ ಹಾಗೂ ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸುವುದು ಹೇಗೆ..?
ಈ ಎಲ್ಲ ವಿಧಾನಗಳನ್ನು ಮಾಡುವುದರಿಂದ ನಾವು ವ್ಯರ್ಥವಾಗಿ ಎಸೆಯುವ ಬಾಳೆಹಣ್ಣಿನ ಸಿಪ್ಪೆಯಿಂದಲೂ ಆರೋಗ್ಯಕರವಾದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲ ವಿಧಾನಗಳು ನಿಮಗೆ ಉಪಯುಕ್ತವಾಗಿವೆ ಎಂದು ಭಾವಿಸುತ್ತೇವೆ.
ಇಂತಹ ಉಪಯುಕ್ತ ಮಾಹಿತಿಗಳನ್ನು ನೇರವಾಗಿ ತಿಳಿದುಕೊಳ್ಳಲು ನಮ್ಮ ವಾರ್ತಾವಾಣಿ ನ್ಯೂಸ್ ಪೋರ್ಟಲ್ ನ ನೋಟಿಫಿಕೇಶನ್ ಬಟನನ್ನು ಒತ್ತಿ ಚಾಲು ಮಾಡಿಕೊಳ್ಳಿ.. ಇಲ್ಲವೇ ನಮ್ಮ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಳ್ಳಲು ಸಾಮಾಜಿಕ ಖಾತೆಗಳಲ್ಲಿ ಫೋಲೋ ಮಾಡಿ…