AAI Junior Executive Recruitment 2023:ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ

AAI Junior Executive Recruitment 2023

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ (AAI Junior Executive Recruitment 2023) ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತಿಯನ್ನು ಹೊಂದಿರುವವವರು ಆನ್ ಲೈನ್ ಮೂಲಕ ನವೆಂಬರ್ 01, 2023 ರಿಂದ ಪ್ರಾರಂಭವಾಗಲಿದ್ದು, ಅರ್ಜಿಯನ್ನು ಸಲ್ಲಿಸಬಹುದು. 496 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಅಕ್ಟೋಬರ್ 14, 2023 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಭಾರತೀಯ ವಿಮಾನಯಾನ ಪ್ರಾಧಿಕಾರ ಇತ್ತೀಚಿಗೆ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಾಸಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಖುಷಿ ನೀಡಿದೆ. ವಾಯುಯಾನ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಬಯಸುವವರು ಇದೇ ನವೆಂಬರ್ 1 ರಿಂದ ಆರಂಭವಾಗಲಿರುವ ಅರ್ಜಿ ಸ್ವೀಕಾರ ಪ್ರಕ್ರಿಯೆ ಖುಷಿಯನ್ನು ನೀಡಲಿದೆ.

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಂದೆ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ನೋಟಿಫಿಕೇಶನ್ ಸಹ ಒದಗಿಸಲಾಗಿದ್ದು, ಸರಿಯಾಗಿ ಮತ್ತೊಮ್ಮೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ಹುದ್ದೆಯ ಮಾಹಿತಿ

AAI ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದ್ದು, ಈ ಹುದ್ದೆಯ ಕುರಿತು ಹುದ್ದೆಯ ಹೆಸರು ಮತ್ತು ಲಭ್ಯವಿರುವ ಹುದ್ದೆಗಳ ವಿವರ ಈ ಕೆಳಗಿನಂತೆ ಇರುತ್ತದೆ.

ಹುದ್ದೆ ನೀಡುವ ಸಂಸ್ಥೆಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI)
ಹುದ್ದೆ ಹೆಸರು ಕಿರಿಯ ಕಾರ್ಯನಿರ್ವಾಹಕರು
ಖಾಲಿಯಿರುವ ಹುದ್ದೆಗಳು496
ವೇತನ ರೂಪಾಯಿ 40,000 ದಿಂದ 140000 ರೂಪಾಯಿ
ಅರ್ಜಿ ಸಲ್ಲಿಸುವ ಬಗೆಆಫ್ ಲೈನ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ನವೆಂಬರ್ 2023

ಈ ಸುದ್ದಿಯನ್ನೂ ಓದಿರಿ: Intelligence Bureau Recruitment 2023: ವಿವಿಧ 677 ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಹಾಕಿ

ವಿದ್ಯಾರ್ಹತೆ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾಲಯಗಳಿಂದ B.Sc with Physics and Mathematics. ಅಥವಾ Degree in Engineering ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ವಯೋಮಿತಿ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯಲ್ಲಿ (AAI Junior Executive Recruitment 2023) ತಿಳಿಸಿದ ಪ್ರಕಾರ ಅಭ್ಯರ್ಥಿಯು 30.11.2023 ರಂತೆ ಗರಿಷ್ಠ ವಯಸ್ಸು 27 ವರ್ಷಗಳನ್ನ ಒಳಗೆ ಇರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ.

ಅರ್ಜಿ ಶುಲ್ಕ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯ (AAI Junior Executive Recruitment 2023) ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸ ಬಯಸುವ ಸಾಮಾನ್ಯ ಅಭ್ಯರ್ಥಿಗಳಿಗೆ – 1000 ರೂಪಾಯಿ ಮತ್ತು ಪ.ಜಾತಿ/ಪ.ಪಂ/PWD ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಈ ಸುದ್ದಿಯನ್ನೂ ಓದಿರಿ: CEPT Recruitment 2023:38 ಹುದ್ದೆಗಳು ಕಾಲಿಯಿದ್ದು ಇಂದೇ ಅರ್ಜಿ ಸಲ್ಲಿಸಿ

ವೇತನ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 40,000 ದಿಂದ 1,40,000/- ವರೆಗೆ ನಿಯಮಾನುಸಾರ ನೀಡಲಾಗುವುದು ಎಂದು ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ ಎಂದು ಮಾಹಿತಿ ನೀಡಲಾಗಿದೆ.

  • ಆನ್‌ಲೈನ್ ಲಿಖಿತ ಪರೀಕ್ಷೆ (CBT)
  • ಧ್ವನಿ ಪರೀಕ್ಷೆ
  • ಸೈಕೋಆಕ್ಟಿವ್ ಸಬ್ಸ್ಟೆನ್ಸ್ ಟೆಸ್ಟ್
  • ಮಾನಸಿಕ ಮೌಲ್ಯಮಾಪನ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • ಹಿನ್ನೆಲೆ ಪರಿಶೀಲನೆ
  • ದಾಖಲಾತಿ ಪರಿಶೀಲನೆ

ಈ ಸುದ್ದಿಯನ್ನೂ ಓದಿರಿ: ಎಸ್‌ಎಸ್‌ಬಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ, ಇಂದೇ ಅರ್ಜಿ ಸಲ್ಲಿಸಿ

AAI Junior Executive Recruitment 2023 ರ ಅಧಿಸೂಚನೆಯಲ್ಲಿ ಕರೆದಿರುವ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಕೆಳಗೆ ಅಧಿಕೃತ ವೆಬ್ ಸೈಟ್ ಲಿಂಕ್ ನೀಡಲಾಗಿದೆ.
  • ನಂತರ “Login/New User” ಕ್ಲಿಕ್ ಮಾಡಿ.
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ.
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  • ಮತ್ತೊಮ್ಮೆ ನೀವು ನೀಡಿರುವ ಮಾಹಿತಿಗಳು ಸರಿಯಾಗಿವೆಯೇ ಪರಿಶೀಲಿಸಿಕೊಳ್ಳಿ.
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ.

AAI Junior Executive Recruitment 2023 ರ ಪ್ರಮುಖ ದಿನಾಂಕಗಳು

ಅರ್ಜಿ ಸಲಿಸಲು ಪ್ರಾರಂಭ ದಿನಾಂಕ – 1 ನವೆಂಬರ್ 2023
ಅರ್ಜಿ ಸಲಿಸಲು ಕೊನೆಯ ದಿನಾಂಕ – 3೦ ನವೆಂಬರ್ 2023

ಪ್ರಮುಖ ಲಿಂಕುಗಳು

ಅಧಿಕೃತ ವೆಬ್ ಸೈಟ್ – ಕ್ಲಿಕ್ ಮಾಡಿ

ಅಧಿಕೃತ ನೋಟಿಫಿಕೇಶನ್ – ಕ್ಲಿಕ್ ಮಾಡಿ

ಹುದ್ದೆಗೆ ಅಪ್ಲಯ್ ಮಾಡಲು – ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here