ಪುನರ್ ಮಿಲನ – ಕಥೆ

ಪುನರ್ ಮಿಲನ - ಕಥೆ
ಪ್ರಥಮ್ ದಾವಣಗೆರೆಯ ಶ್ರೀಮಂತ ಮನೆತನದ ಕರುಳ ಕುಡಿ, ತಂದೆ ಯಶವಂತ್ ರಾವ್ ಬಾಪುಜಿ ಡೆಂಟಲ್ ನಲ್ಲಿ ಫೇಮಸ್ ವೈದ್ಯ, ತಾಯಿ ಎಂಜಿನಿಯರ್ ಕಾಲೇಜ್ ಲೆಕ್ಚರ್, ಅಮ್ಮನ ಪ್ರೀತಿ, ಅಪ್ಪನ ಶಿಸ್ತಿನಲ್ಲಿ ಮೆಡಿಕಲ್ ಕೋರ್ಸ್ ಮುಗಿಸಿದ ಪ್ರಥಮ್ ಮೌನಿ, ತಾನಾಯಿತು ತನ್ನ ಓದಾಯಿತು ಎಂದಿರುವವನು. ಮುಂದಿನ ಪ್ರಾಕ್ಟೀಸ್ ಗೆ ಮಗನನ್ನು ವಿದೇಶಕ್ಕೆ ಕಳಿಸಲು ಸಿದ್ಧತೆ ನಡೆಸಿದ್ದರು, ಆದರೆ ಅಮ್ಮನನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ನಿನ್ನ ಒಬ್ಬ ಉತ್ತಮ ಕಣ್ಣಿನ ವೈದ್ಯನಾಗಿ ನೋಡೊ ಆಸೆ ನನಗೆ, ಎರಡು ವರ್ಷ ಅಷ್ಟೆ ಅಂತಾ ಮಗನಿಗೆ ಮುದ್ದು ಮಾಡಿ ಅಮ್ಮ ಒಪ್ಪಿಸಿದ್ದಕ್ಕೆ ಪ್ರಥಮ್ ಒಲ್ಲದ ಮನಸ್ಸಲ್ಲಿ ಹೊರತಿದ್ದ..
ಅಮೆರಿಕಾಗೆ ಬಂದ ಪ್ರಥಮ್ಗೆ ಏಕಾಂತತೆ ಕಾಡಿತು, ನಾನು ಇಲ್ಲಿ ಎರಡು ವರ್ಷ ಹೇಗೆ ಇರೊದು ? ಈ ಹೊರಗಿನ ಊಟಾ, ಈ ಬಾಷೆ, ತುಂಡು ಬಟ್ಟೆಯ ಹುಡುಗಿಯರು, ಅಪ್ಪಿಕೊಂಡೆ ಪರಿಚಯ ಮಾಡ್ಕೊಳೊ ರೀತಿ ಸ್ವಲ್ಪನೂ ಅವನಿಗೆ ಹಿಡಿಸುತ್ತಿರಲಿಲ್ಲ. ಯಾರಾದರೂ ನನ್ನ ದೇಶದವರು ಸಿಕ್ತಾರೆನೋ ಅಂತಾ ಹೊಟೆಲ್ ನಲ್ಲಿ ಕುಂತು ಸುತ್ತಲು ನೋಡ್ತಿದ್ದ…
****

ಹೀಗೆ ಒಂದು ದಿನ ಹೊಟಲ್ ಹತ್ತಿರ ಪಾರ್ಕಿಂಗ್ ನಲ್ಲಿ ಕಾರ್ ಪಾರ್ಕ್ ಮಾಡಬೇಕಾದರೆ ಕೇಳಿದ ಸ್ವರ ಮನಸ್ಸಿಗೆ ಹಿತ ಅನಿಸಿತು, ಆ ಧ್ವನಿ ಬಂದ ಕಡೆ ನೋಡಿದಾಗ ಬಟ್ಟಲು ಕಂಗಳ, ಹಾಲುಗೆನ್ನೆಯ ಮೋಗದಲ್ಲಿ ಹುಸಿ ಕೋಪ, “ಅಮ್ಮ ಎರಡು ವರ್ಷಗಳಿಂದ ಇದನ್ನೆ ಹೆಳ್ತಿದ್ದಾಳೆ, ಅಪ್ಪಾ ನೀವಾದರೂ ಹೇಳಿ ಅಮ್ಮನಿಗೆ ಇನ್ನೂ ಎರಡು ವರ್ಷ ಓದು ಮುಗಿಯೊದರೊಳಗೆ ಅಮ್ಮನ ಉಪದೇಶ ಕೇಳಿ ಕೇಳಿ ನನ್ನ ಕಿವಿ ತುತಾಗಿಬಿಡುತ್ತೆ” ಅಂತಾ ಹುಸಿ ಮುನಿಸು ತೊರಿದಾಗ, “ಆಯ್ತು ಮಗಳೆ ನಿಮ್ಮಮ್ಮ ಹಾಗೆ ನೀನಗೆ ತಡ ಆಗುತ್ತೆನೋ ಕ್ಲಾಸ್ ಗೆ” ಅಂತಾ ಫೋನ್ ಕಟ್ ಮಾಡಿದರು. ಅಪ್ಪನ ಮಾತು ಕೇಳಿ ನಗ್ತಾ ಹೊರಳಿದವಳಿಗೆ ಪ್ರಥಮ್ ನನ್ನು ನೋಡಿ ಆಶ್ಚರ್ಯ..!
ಇದಾರೂ…? ಕೆಂಪು ಕೋತಿಗಳು ಇರುವ ಈ ದೇಶದಲ್ಲಿ ಅಂದದ ಕೋತಿ ಅಂತಾ ಹಾಯ್ ಅಂದಳು…
ಹಾಯ್ ಮೇಡಂ ನೀವು ಕನ್ನಡದವರಾ?
ಕನ್ನಡ ಮಾತು ಕೇಳಿ ಖುಷಿ, ಇವಳಿಗೆ ಭಾರತದವರು ಪರಿಚಯ ಆಗಿದ್ರು ಕನ್ನಡಿಗರು ಈ ಎರಡು ವರ್ಷ ಸಿಕ್ಕಿರಲಿಲ್ಲ,
ಹೌದು ನಾನು ಹುಬ್ಬಳ್ಳಿಯವಳು. ನೀವು?
ನನ್ನದು ದಾವಣಗೆರೆ ಎನ್ನುತ್ತಾ ತನ್ನ ಹೆಸರು, ಕುಟುಂಬದ ಬಗ್ಗೆ ಪರಿಚಯ ಮಾಡಿಕೊಂಡ.
ನನ್ನ ಹೆಸರು ಮಾನ್ಯ, ಬಂದು ಎರಡು ವರ್ಷ ಆಯ್ತು. ಬಿ.ಇ. ಸ್ಟಡಿ ಮಾಡ್ತಿದೆನೆ. ಅಪ್ಪ ಅಮ್ಮ ಅಣ್ಣಾ ಎಲ್ಲ ಹುಬ್ಬಳ್ಳಿಯಲ್ಲಿ, ನಾನೊಬ್ಬಳೆ ಇಲ್ಲಿ ಅಂದಾಗ ಅವಳ ಮಾತಿನಲ್ಲಿ ವಿಷಾದ ಇತ್ತು. ಅವಳ ಅಚ್ಚ ಕನ್ನಡ ಕೇಳ್ತಾ ತಾನಿರೋದು ವಿದೇಶದಲ್ಲಿ ಅನ್ನೋದೇ ಆ ಕ್ಷಣ ಮರೆತ ಪ್ರಥಮ್. ಹಾಕಿರೊದು ಪ್ಯಾಂಟ್ ಶರ್ಟ್ ಆದರೂ ಎಲ್ಲೂ ಅಸಭ್ಯವಾಗಿ ಧರಿಸಿಲ್ಲ, ಹಣೆಗೊಂದು ಪುಟ್ಟ ಬಿಂದಿ, ಕಣ್ಣಿಗೆ ಕಾಡಿಗೆ, ಕಂಡು ಕಾಣದಂತಿರುವ ಮೂಗುತಿ, ಕಿವಿಯಲ್ಲಿ ಹೊಳೆವ ಕಿವಿಯೊಲೆ, ವಿದೇಶದಲ್ಲಿ ಇದ್ದರು ಕನ್ನಡ ಸಂಸ್ಕೃತಿ ಪ್ರಥಮ್ ನನ್ನು ಮಂತ್ರ ಮುಗ್ದನನ್ನಾಗಿಸಿತು. ಮೊದಲ ಪರಿಚಯದಲ್ಲೆ ಸ್ನೇಹಿತರಾಗಿ ತಮ್ಮ ಫೋನ್ ನಂಬರ್ ವಿನಿಮಯ ಮಾಡಿಕೊಂಡರು…
ಒಂದೆ ದೇಶ
ಒಂದೆ ಬಾಷೆ
ಕೂಡಿಸಿತ್ತು ವಿದೇಶ
ಮರೆತಿತ್ತು ಕ್ಷಣ ಸ್ವದೇಶ…
ಇಬ್ಬರ ಸ್ನೇಹ ಸಲುಗೆಯಾಗಿ ರಜಾ ದಿನದಲ್ಲಿ ಪಾರ್ಕು, ಶಾಪಿಂಗ್ ಅಂತಾ ಸುತ್ತಾಟ ನಡೆಸಿದರು. ಸ್ನೇಹದ ಎಲ್ಲೆ ಮೀರದಂತೆ ಇದ್ದರು. ತಮ್ಮ ತಮ್ಮ ಓದಿನಲ್ಲು ಅಷ್ಟೆ ಗಮನ ಹರಿಸಿದರು…
ಪ್ರಥಮನ ನಡೆ ನುಡಿ, ಮಾನ್ಯಳ ಮನಸ್ಸನ್ನು ಗೆದ್ದಿತ್ತು. ಒಂದು ದಿನ ಪ್ರಥಮ್ ಸಿಗಲಿಲ್ಲ ಅಂದ್ರು ಮಾನ್ಯಳಿಗೆ ಏನೊ ಕಳೆದುಕೊಂಡ ಭಾವನೆ, ಬುಕ್ ಕೈಯಲ್ಲಿ ಇದ್ರು ಯಾಕೆ ಇವತ್ತು ಫೋನ್ ಮಾಡ್ಲಿಲ್ಲ ಅಂತಾ ಯೋಚನೆ. ಗೆಳತಿಯರೆಲ್ಲ ಏನು ಲವ್ವಾ ಅಂತಾ ರೇಗಿಸಿದಾಗ, ಇಲ್ಲ ಹಾಗೇನಿಲ್ಲ ಅಂತಿದ್ದವಳಿಗೆ, “ಈಗ ಹೌದು ನಾನು ಪ್ರಥಮ್ ನನ್ನು ಲವ್ ಮಾಡ್ತಿದಿನಿ, ಆದರೆ ಪ್ರಥಮ್ ಒಪ್ತಾನಾ, ಶ್ರೀಮಂತರ ಮಗ, ಅವರ ಮನೆಯಲ್ಲಿ ಒಪ್ತಾರಾ..? ನನ್ನ ಅಮ್ಮ ಮೊದಲೆ ಹೇಳಿದಾಳೆ ಹೋಗಿರೊದು ಓದೊಕೆ ಲವ್ ಅಂತಾ ಓದು ಹಾಳು ಮಾಡಿಕೊಂಡು ನೋಡಿದವರು ನಗೊ ಹಾಗೆ ಮಾಡ್ಬೆಡಾ ಅಂತಾ , ಫೋನ್ ನಲ್ಲಿ ಅದನ್ನೆ ಅಲ್ವಾ ಹೇಳೊದು, ಬೇಡ ಈ ಪ್ರೀತಿ ಪ್ರೇಮ, ಹೀಗೆ ಸ್ನೇಹಿತರಾಗಿ ಇರೊಣ, ಪ್ರಥಮ್ ಪ್ರೀತಿಯನ್ನ ಒಪ್ಪಲಿಲ್ಲ ಅಂದ್ರೆ ಒಬ್ಬ ಆತ್ಮೀಯ ಗೆಳೆಯನನ್ನು ಕಳೆದುಕೊಂಡ ಹಾಗೆ ಆಗುತ್ತೆ” ಅಂದುಕೊಂಡಳು.
ಮನಸ್ಸು ಹಿಡಿದಿದೆ ಹಠ
ಹೇಳಲಾಗದು ದಿಟ…

ಮಾನ್ಯ ಬಿಇ ಮುಗಿಸಿ ಮುಂದಿನ ಪ್ಲಾನ್ ಏನು? ಇಲ್ಲೆ ಮುಂದೆ ಓದುವದಾ..? ಅಥವಾ ಇಲ್ಲಿಯೇ ಜಾಬ್ ಮಾಡೊ ಪ್ಲಾನ್ ಇದೆಯಾ?
ಇಲ್ಲ ಪ್ರಥಮ್ ಓದು ಮುಗಿಸಿ ಯಾವಾಗ ನನ್ನ ದೇಶಕ್ಕೆ ಹೋಗ್ತಿನೊ ಅಂತಾ ಕಾಯ್ತಿದೆನೆ. ಎಲ್ಲ ಇದ್ದು ಯಾರು ಇಲ್ಲದವರ ತರ ಇಲ್ಲಿ ಇರೊದಿಕ್ಕೆ ಆಗ್ತಿಲ್ಲ, ಸಾಕು ಈ ದೇಶದ ಸಹವಾಸ, ಹೋಗಿ ಬಿಡಬೇಕು ನನ್ನ ದೇಶಕ್ಕೆ ಅಂತಾ ಯೋಚಿಸ್ತಾ ಇರಬೇಕಾದರೆ ನೀನು ಸಿಕ್ಕಿದೆ, ಏನೋ.. ನನ್ನ ದೇಶದವರೂ ಅಂದಾಗ ಆತ್ಮೀಯತೆ ಮೂಡಿತು, ಒಂಟಿತನ ದೂರಾಯ್ತ…
ಹೌದು ಮಾನ್ಯ ನಮ್ಮ ದೇಶದಲ್ಲಿ ಇದ್ದಾಗ ನಮಗೆ ಗೊತ್ತಾಗಲ್ಲ, ಬಿಟ್ಟು ಬಂದ ಮೇಲೆ ನಮ್ಮ ದೇಶ, ನಮ್ಮ ಭಾಷೆಯ ಬೆಲೆ ಗೊತ್ತಾಗೊದು, ಮೊದಲು ಇಲ್ಲಿ ಕನ್ನಡ ಧ್ವನಿ ಕೇಳಿದಾಗ ಮರುಭೂಮಿಯಲ್ಲಿ ನೀರು ಸಿಕ್ಕಷ್ಟು ಖುಷಿ ಆಯ್ತು…
ಅಮ್ಮನ ಕೈ ತುತ್ತು, ಅಮ್ಮ ಮಾಡುವ ಎಣ್ಣೆ ಮಸಾಜ್, ಅಮ್ಮನ ಮಡಿಲ ಜೋಗುಳ ಎಲ್ಲ ಮಿಸ್ ಮಾಡಿಕೊಳ್ತಾ ಇದೆನೆ, ಅಲ್ಲಿ ಅಪ್ಪ ತುಂಬಾ ಸ್ಟ್ರಿಕ್ ಅಂತಿದ್ದೆ ಈಗ ಅಪ್ಪ ತುಂಬಾ ನೆನಪಾಗ್ತಾ ಇದಾರೆ ಅಂತಾ ಭಾವುಕನಾದ….
ಏಯ್ ಇದೇನೋ ಬಂದು ಆರು ತಿಂಗಳು ಆಯ್ತು, ಇಗಲೆ ಹೀಗೆ ಮುಂದೆ…? ಹೀಗೆ ಹೆಣ್ಣು ಮಕ್ಕಳ ತರ ಕಣ್ಣೀರು ಹಾಕೊಂಡ ಇರ್ತಿಯಾ ಹಾ ಹಾ…
ಯಾಕೆ ಮಾನ್ಯ ಗಂಡಿಗೆ ಹೃದಯ ಇಲ್ವಾ? ಅವನ ಮನಸ್ಸಿನಲ್ಲಿ ಭಾವನೆಗಳಿರಲ್ವಾ? ಕಣ್ಣೀರೆನು ಹೆಣ್ಣಿನ ಸ್ವತ್ತೆನು…?
ದೇಹ ಇಲ್ಲಿ
ಮನಸ್ಸು ಅಲ್ಲಿ
ಹೆತ್ತವರ ಕನಸು
ನನಸು ಮಾಡಲು ನಾನಿಲ್ಲಿ …
ಪ್ರಥಮ್ ನಿನ್ನ ಮಾತು ಕೆಳ್ತಾ ಇದ್ದರೆ, ಅಪ್ಪನ ನೆನಪು ಬರುತ್ತೆ. ಅಪ್ಪನದು ನಿನ್ನ ಹಾಗೆ ಹೆಂಗರಳು, ನನಗೆ ಇಲ್ಲಿ ಓದೊಕೆ ಅವಕಾಶ ಸಿಕ್ಕಾಗ ನಾನು ಖುಷಿಯಿಂದ ಕುಣಿದಾಡಿದೆ. ಅಪ್ಪ ಅಮ್ಮನ ಬಿಟ್ಟು ಹೋಗ್ತಿನಿ ಅನ್ನೋ ನೋವು ಕಾಡಲೆ ಇಲ್ಲ, ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ನನಗೆ ವಿದೇಶ ಅನ್ನೋದು ಕನಸು. ಅಪ್ಪ ಸ್ಟೇಟ್ ಬ್ಯಾಂಕ್ ನಲ್ಲಿ ನೌಕರ, ತಾಯಿ ಗೃಹಿಣಿ. ಅಮ್ಮನಿಗೆ ಚಿಕ್ಕ ವಯಸ್ಸನಲ್ಲಿ ಬಿಪಿ, ಅಸ್ತಮಾ ಸೇರಿಕೊಂಡು ಜರ್ನಿ ಅಂದರೆ ಆಗ್ತಿರಲಿಲ್ಲ. ಹಾಗಾಗಿ ರಜೆಯಲ್ಲಿ ಟ್ರೀಪ್ ಅಂತಾ ಹೋಗಿದ್ದೂ ಕಡಿಮೆ, ಅಪ್ಪ ಕೂಡಿಟ್ಟ ಹಣ ಅಣ್ಣನ ಮೆಡಿಕಲ್ ಓದೊಕೆ ಖರ್ಚು ಆಯ್ತು. ಇಂತಾದರಲ್ಲಿ ನನ್ನ ಪ್ರತಿಭೆಗೆ ವಿದೇಶದಲ್ಲಿ ಅವಕಾಶ ಸಿಕ್ಕಾಗ ಸ್ವರ್ಗ ಸಿಕ್ಕಷ್ಟು ಖುಷಿ, ಅಣ್ಣನು ಕಳಿಸೊಕೆ ಏರ್ಪಾಡು ಮಾಡಿದಾಗ ಸ್ವರ್ಗಕ್ಕೆ ಮೂರೆ ಗೇಣು. ಅಪ್ಪ ಅಮ್ಮ ಅಳುತ್ತಿದ್ದರೂ ನನಗೇನು ಅನ್ನಿಸಲೆ ಇಲ್ಲ. ವಿದೇಶಕ್ಕೆ ಹೋಗಿ ಹಾಳಾಗಬೇಡ ಅಂತಾ ಅಮ್ಮ ಹೇಳಿದರೆ, ಅಪ್ಪ ತಬ್ಬಿಕೊಂಡು ಅತ್ತು ಬಿಟ್ಟರು. ವಿಲಾಸ್ ಅಣ್ಣಾ ಓದಿನ ಕಡೆ ಗಮನ ಕೋಡು ಅಂತಾ ಹೇಳಿ ನನ್ನ ಇಲ್ಲಿಗೆ ಕಳಿಸಿದ. ಈ ಸ್ವರ್ಗಕ್ಕೆ ಬಂದ ಕೆಲವೇ ದಿನಗಳಲ್ಲಿ ಗೊತ್ತಾಯ್ತು, ನಾನು ಎಂತಹ ಸ್ವರ್ಗ ಮಿಸ್ ಮಾಡ್ಕೊಂಡೆ ಅಂತಾ. ನಂತರ ಮನೆಯವರನ್ನು ನೆನಸಿಕೊಳ್ಳದ ದಿನಾನೆ ಇಲ್ಲ. ಅಮ್ಮನ ಬೈಗುಳ, ಅಣ್ಣನೊಂದಿಗೆ ಜಗಳ, ಏನು ಮಾಡಿದರು ನನ್ನ ಬೆಂಬಲಿಸೊ ಅಪ್ಪ ತುಂಬಾ ನೆನಪಾಗ್ತಾರೆ…
ಮಾನ್ಯ ಹೀಗೆನಾ ಎಲ್ಲರೂ…. ತಮ್ಮವರೆನ್ನೆಲ್ಲ ಬಿಟ್ಟು ಓದೊಕೆ, ದುಡಿಯೊಕೆ ಬಂದಿರುವವರ ಜೀವನಾ…
ಅಷ್ಟರಲ್ಲಿ ಮಾನ್ಯಳ ಫೋನ್ ರಿಂಗಾಯ್ತ, ನೋಡಿದಳು ವಿಲಾಸ್ ಫೋನ್ ಮಾಡಿದ್ದಾ, ರಿಸೀವ್ ಮಾಡಿ, ಅಣ್ಣಾ ಏನಾದ್ರು ಕನಸು ಬಿತ್ತಾ ಇಷ್ಟೊತ್ತಿನಲ್ಲಿ ನೆನಪು ಮಾಡಿಕೊಂಡು ಫೋನ್ ಮಾಡಿದಿಯಾ..?
ಮಾನ್ಯ ಆದಷ್ಟು ಬೇಗ ಫ್ಲೈಟ್ ಬುಕ್ಕಿಂಗ್ ಮಾಡಿಸಿ ಹೊರಟು ಬಾ….
ಅಣ್ಣಾ ಏನಾಯ್ತು, ಮನೆಯಲ್ಲಿ ಎಲ್ಲರೂ ಆರೊಗ್ಯ ತಾನೆ? ಮಾನ್ಯ ಅದೆಲ್ಲ ಏನು ಆಗಿಲ್ಲ, ಬೇಗ ಹೊರಡು… ಇವಳು ಅಣ್ಣಾ ಅಣ್ಣಾ ಅಂತಿದ್ದರೆ, ಫೋನ್ ಕಟ್ ಅಗಿತ್ತು….
ಮಾನ್ಯಳ ಮಾತಲ್ಲೆ ಏನೋ ಆಗಿದೆ ಅಂತಾ ಉಹಿಸಿ, ನಡೆ ಮಾನ್ಯ ಏರ್ ಪೋರ್ಟ್ ಗೆ ಡ್ರಾಪ್ ಕೊಡ್ತಿನಿ…
ಪ್ರಥಮ್ ಸಡನ್ನಾಗಿ ಟಿಕೆಟ್ ಬುಕ್ ಮಾಡಬೇಕು ಎಂದು ಮಾನ್ಯ ಅಳಲು ಪ್ರಾರಂಭಿಸಿದಳು.
ನನ್ನ ರೂಮ್ ಮೇಟ್ ಒಬ್ಬನ ತಂದೆ ಅಲ್ಲಿ ಜಾಬ್ ಮಾಡ್ತಿದಾರೆ, ಅವರಿಗೆ ಪರಿಸ್ಥಿತಿ ತಿಳಿಸಿ, ಹೆಚ್ಚು ಹಣ ಆದರೂ ಪರವಾಗಿಲ್ಲ ಬುಕ್ಕಿಂಗ್ ಮಾಡಿಸೋಣ ನಡೆ ಹೋಗೋಣ, ಮಾನ್ಯ ಅಳಬೇಡ ಅಮ್ಮನ ಬಿಪಿ ಶುಗರ್ ಹೆಚ್ಚು ಕಡಿಮೆ ಆಗಿರಬಹುದು ಅಷ್ಟೆ….
ಅಷ್ಟೆ ಅಲ್ವಾ ಪ್ರಥಮ್ ಏನು ಆಗಿರಲ್ಲ ಅಲ್ವಾ ಅಂತಾ ಅಳ್ತಾ ಎದೆಗೊರಗಿದವಳಿಗೆ, ಏನೂ ಆಗಿರಲ್ಲ ಮಾನ್ಯ ತುಂಬಾ ದಿನ ಆಯ್ತು ನೋಡಬೇಕು ನಿನ್ನ ಅನ್ಸಿರಬಹುದು, ಆರೊಗ್ಯ ಸರಿ ಇಲ್ಲ ಅಂತಾ ಕರಿತಿದಾರೆ ಅಂತಾ ತಲೆ ನೇವರಿಸಿ ಸಮಾಧಾನ ಮಾಡಿ ಏರ್ ಪೋರ್ಟ್ ಗೆ ಕರೆದುಕೊಂಡು ಬಂದ…
ಅಂದು ಕೊಂಡ ಹಾಗೆ ಫ್ಲೈಟ್ ಬುಕ್ಕಿಂಗ್ ಆಯ್ತು, ಅಳುತಿದ್ದ ಮಾನ್ಯಳಿಗೆ ಬಲವಂತ ಮಾಡಿ ಊಟ ಮಾಡಿಸಿದ, ಫ್ಲೈಟ್ ಬರುವ ಸಮಯ ಹತ್ತಿರ ಆಗತಿದ್ದಂತೆ ಚೆಕ್ಕಿಂಗ್ ರೂಮ್ ಕಡೆ ಹೊರಟ ಮಾನ್ಯಳಿಗೆ ಧೈರ್ಯ ಹೇಳಿ ಭಾರವಾದ ಮನಸ್ಸಿನಿಂದ ಕಳಿಸಿ ಕೊಟ್ಟ…..
*****

ಅಣ್ಣನಿಗೆ ಬರುತ್ತಿರುವ ವಿಷಯ ತಿಸಿದಳು, ವಿಮಾನದ ಅಂದಿನ ಪ್ರಯಾಣ ಒಂದು ಯುಗದಂತೆ ಅನ್ನಿಸ್ತಿದೆ ಮಾನ್ಯಳಿಗೆ. ಯಾರಿಗೆ ಎನಾಗಿದೆಯೊ ಗೊತ್ತಾಗ್ತಿಲ್ಲ, ಅವಳನ್ನು ಸಮಾಧಾನ ಮಾಡೊಕೂ ಯಾರು ಇಲ್ಲ, ಕ್ಷಣ ಕ್ಷಣ ಭಯ ಕಾಡ್ತಿದೆ. ತುಂಬಾ ಏಕಾಂತತೆ ಕಾಡ್ತಿದೆ…..
ಮಾನ್ಯ ಮನೆಯಲ್ಲಿ ಏನಾದರೂ ಸಮಸ್ಯೆ ಎದುರಾಗಿದೆಯೇ ..? ತಾಯಿಯ ಬಿಪಿ ಏರುಪೇರಾಗಿರಬಹುದೇ..?
ಏನಾಗಿರಬಹುದು..?
(ಮುಂದುವರೆಯುವುದು…)
ಸುಮಾ ಉಮೇಶ್

LEAVE A REPLY

Please enter your comment!
Please enter your name here