ಇದನ್ನೂ ಓದಿರಿ : ಅಮರ ಯೋಧನ ಜೀವನಗಾಥೆ
ಶಮಂತ್ ಈಗ ಗ್ರೂಪ್ ಕಮಾಂಡರ್ ಆಗಿದ್ದ, ಮೊದಲಿಗಿಂತ ಹೆಚ್ಚು ಜವಾಬ್ದಾರಿ ಇತ್ತು ಅವನಿಗೆ ಅವನು ಅದನ್ನು ತುಂಬಾ ನಿಷ್ಠೆಯಿಂದ ಮಾಡುತ್ತಿದ್ದನು. ನಾವು ಬಂದು ಆರು ತಿಂಗಳಾಗಿತ್ತು. ಒಂದು ದಿನ ತಲೆಗೆ ಸುತ್ತು ಬಂದಂತಾಗಿ ನೆಲದಲ್ಲೇ ಕುಸಿದು ಬಿದ್ದೆ…(ಹಿಂದಿನ ಭಾಗದಿಂದ )
ಮುಂದುವರಿಯುವುದು….
ಪಕ್ಕದ ಕಾಟರ್ಸ್ನ ರೂಪಾ ಬೆಹೆನ್ ನನ್ನ ಜೊತೆ ಆಸ್ಪತ್ರೆಗೆ ಬಂದು ಅಕ್ಕನ ಹಾಗೆಯೇ ನನ್ನ ನೋಡಿಕೊಂಡರು. ನಾನು ತಾಯಿ ಆಗುತ್ತಿದ್ದೆನೆಂದು ತಿಳಿದು ತುಂಬಾ ಸಂಭ್ರಮ ಪಟ್ಟಿದ್ದೆ. ಶಮಂತನಿಗೆ ಹೇಳಬೇಕೆಂದು ಮನಸ್ಸು ಕುಣಿಯುತ್ತಿತ್ತು. ಆದರೆ ಅವನಿಗೆ ತುರ್ತಾಗಿ ತುಂಬಾ ಮಹತ್ವದ ಕೆಲಸವಿದ್ದುದರಿಂದ ಕರೆಯನ್ನು ಕೂಡ ಮಾಡಲಾಗುತ್ತಿರಲಿಲ್ಲ. ಎರಡು ದಿನದ ನಂತರ ಬಂದ ಅವನು ಸುದ್ದಿ ತಿಳಿದು ನನ್ನ ಸಂತಸದಿಂದ ಅಪ್ಪಿ ಮುದ್ದಾಡಿ ಸಂಭ್ರಮಪಟ್ಟಿದ್ದ. ಮನೆಯಲ್ಲಿಯೂ ಎಲ್ಲರು ತುಂಬಾ ಖುಷಿಯಲ್ಲಿದ್ದರು.
ಏಳುತಿಂಗಳು ಆಗುತ್ತಿದ್ದಂತೆ ಶಮಂತ್ ನನ್ನ ಊರಿಗೆ ಕಳಿಸಲು ಬಂದಿದ್ದನು. ಅವನಿಗೆ ಹತ್ತುದಿನಗಳ ರಜೆ ಇತ್ತು. ಅದನ್ನೂ ಮುಗಿಸಿ ಅವನು ಮತ್ತೆ ಕೆಲಸಕ್ಕೆ ಹೊರಟು ಹೋದನು. ನಾನೂ ಮಗುವಿನ ಆಗಮನದ ದಾರಿಕಾಯುತ್ತ ಎರಡೂ ಮನೆಗಳಲ್ಲಿ ಓಡಾಡಿಕೊಂಡಿದ್ದೇನು. ಸಮಯ ಸಿಕ್ಕಾಗಲೆಲ್ಲ ಅವನು ಮನೆಯವರೊಂದಿಗೆ ಮಾತಾಡುತ್ತಿದ್ದನು.
ನವಮಾಸ ತುಂಬಿ ಗಂಡು ಮಗು ಜನಿಸಿತು. ಶಮಂತ್ ಗೆ ಮರುದಿನ ಮಗುವಿನ ಜನನದ ಬಗೆಗೆ ತಿಳಿದಾಗ ಅವನ ಕಾಲು ನೆಲದಲ್ಲಿ ಇರಲಿಲ್ಲವಂತೆ. ಕೊನೆಗೂ ಮಗು ಜನಿಸಿ ಎರಡು ತಿಂಗಳಿನ ಮೇಲೆ ರಜೆ ಸಿಕ್ಕಿತು. ಮಗುವನ್ನು ಕೆಳಗೆ ಇಳಿಸದೆ ಮುದ್ದಾಡುತ್ತಿದ್ದನು ಶಮಂತ್. ಮಗು ಕೂಡ ಶಮಂತ್ ನನ್ನು ಬಿಟ್ಟು ಇರುತ್ತಿರಲಿಲ್ಲ. ರಜೆ ಮುಗಿದು ಎಂದಿನಂತೆ ಶಮಂತ್ ಹೊರಟು ನಿಂತ. ಮತ್ತೆ ನಾಲ್ಕು ತಿಂಗಳಿಗೆಲ್ಲ ನಾನು ಹೋಗುವಳಿದ್ದೆ. ಮಗುವಿಗೆ 5 ತಿಂಗಳಾಗಿತ್ತು ಎರಡು ದಿನಗಳಿಂದ ಶಮಂತ್ ಕಾಲ್ ಬಂದಿರಲಿಲ್ಲ. ನನಗೆ ಅದು ಸಾಮನ್ಯವಾಗಿದ್ದರೂ ಮನವೇಕೋ ತುಂಬಾ ಅಶಾಂತ ವಾಗಿತ್ತು. ಕೊನೆಗೆ ಬೆಟಲಿಯನ್ ಮೇಜರ್ ಕಾಲ್ ಬಂದಿತು. ನನ್ನ ಕೈಕಾಲೆಲ್ಲ ನಡಕ ಶುರುವಾಗಿತ್ತು, ಕಂಪಿಸುವ ಧ್ವನಿಯಲ್ಲಿ ಶಮಂತ್ ಉಗ್ರಗಾಮಿಗಳ ಹಠಾತ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವದನ್ನು ಕೇಳಿ ಮನ ತತ್ತರಿಸಿಹೋಯಿತು.
ನಾನು ಅಲ್ಲಿಗೆ ಹೋಗಬೇಕೆಂದು ನಿರ್ಧರಿಸಿ ಅದಕ್ಕೆ ಬೇಕಾದವರನ್ನು ಸಂಪರ್ಕಿಸಿ ನನಗೆ ಮತ್ತು ಅತ್ತೆ ಮಾವ ಮೂವರಿಗೂ ಟಿಕೆಟಿನ ವ್ಯವಸ್ತೆ ಮಾಡಿಕೊಂಡೆ ಎಳೆ ಮಗುವಿಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಸತತವಾಗಿ ಪ್ರಯಾನಮಾಡಿ ಅಲ್ಲಿಗೆ ಬಂದೆವು. ಶಮಂತ್ ಸ್ಥಿತಿ ತುಂಬಾ ಗಂಭೀರವಾಗಿತ್ತು. ಗುಂಡು ತುಂಬಾ ಹತ್ತಿರದಿಂದ ಹೋಗಿದ್ದರಿಂದ ಮೈಮೇಲೆ ಗಾಯವಾಗಿತ್ತು. ಡಾಕ್ಟರ್ ಸತತ ಪ್ರಯತ್ನ ದಿಂದ ಮುರುದಿನಗಳ ನಂತರ ಕಣ್ಣು ತೆಗೆದನು. ನಮ್ಮನ್ನೆಲ್ಲ ನೋಡಿ ಕಣ್ಣಲ್ಲಿ ನೀರು ಬಂತು. ಮಗುವನ್ನು ಮಲಗಿದಲ್ಲೇ ಅಪ್ಪಿ ಮುದ್ದಾಡಿದನು. ಸೈನಿಕರ ಚೈತನ್ಯ ಶಕ್ತಿ ನಿಜಕ್ಕೂ ವಿಸ್ಮಯಕಾರಿ. ಕೆಲವು ಫೌಜಿ ಭಾಯಿಗಳ ಕಣ್ಣು, ಕಾಲು, ಕೈ ಕಟ್ಟರಿಸಿದ್ದರೂ ಅವರ ದೇಶಪ್ರೇಮ ಒಂಚೂರು ಕಡಿಮೆಯಾಗಿರಲಿಲ್ಲ. ದೇಶಕ್ಕಾಗಿ ಕೆಚ್ಚದೆಯಿಂದ ಹೋರಾಡುವ ಅದಮ್ಯ ಕಿಚ್ಚು ಅವರಲ್ಲೆಲ್ಲ ಪ್ರಜ್ವಲಿಸುತ್ತಿತ್ತು. ಭಾರತ ಮಾತೆಯ ಸೇವೆಗೆ ಅವರು ತಮ್ಮ ಜೀವವನ್ನೇ ಪಣವಾಗಿಟ್ಟು ಹೋರಾಡುವರು. ಅವರ ಬಗ್ಗೆ ನೆನಸಿ ಕೊಂಡರೇನೆ ಎದೆ ಸಂತಸದಿಂದ ಉಬ್ಬಿಕೊಳ್ಳುತ್ತದೆ. ಶಮಂತ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಹದಿನೈದು ದಿನಗಳಲ್ಲಿ ಚೇತರಿಸಿಕೊಂಡು ಮೊದಲಿನಂತೆ ದೇಶಸೇವೆ ಮಾಡಲು ಅನುವಾದನು. ಅತ್ತೆ ಮಾವರಿಗೆ ಅಲ್ಲಿಯ ಅತೀವ ಚಳಿಯಿಂದಾಗಿ ತುಂಬಾ ತೊಂದರೆ ಆಗತೊಡಗಿತು ಅವರನ್ನು ವಾಪಸ್ಸು ಕಳಿಸಿ ಮಗುವಿನೋಡನೆ ನಾನೊಬ್ಬಳೆ ಉಳಿದುಕೊಂಡೆ.
ಹಾಗೆಯೇ ಎರಡು ವರ್ಷ ಕಳೆದು ಹೋಯಿತು ಪುಟ್ಟ ಸುಮಂತ್ ಈಗ ಎರಡೂವರೆ ವರ್ಷಗಳ ಮಗು. ಯಾವಾಗಲೂಗನ್ನು ಬೇಕು ಇಂಥದೇ ಡ್ರೆಸ್ ಬೇಕು ಅಂತ ಬಾಲ ಬಾಷೆಯಲ್ಲಿ ಅಪ್ಪನಿಗೆ ಡಿಮ್ಯಾಂಡ್ ಮಾಡುತ್ತಿದ್ದ ಆ ದಿನ ನನ್ನ ಮನಪಟಲದಲ್ಲಿ ಕರಾಳವಾಗಿ ಅಚ್ಚಒತ್ತಿದೆ. ಸುಮಂತ್ ಅಪ್ಪ ಕೊಡಿಸಿದ ಮಿಲ್ಟಿ ಸಮವಸ್ತ್ರದ ಡ್ರೆಸ್ ಹಾಕಿಕೊಂಡು ಗನ್ ಹಿಡಿದು ಡುಂ ಡುಂ ಅಂತ ಶಬ್ದ ಮಾಡುತ್ತಾ ಆಡುತ್ತಿದ್ದ, ನಾನು ಅವನಿಗಾಗಿ ಅನ್ನ ದಾಲ್ ತಯಾರಿಸುತ್ತಿದ್ದೆ, ಒಮ್ಮೆಲೇ ರುದ್ರ ಭಯಂಕರವಾದ ಶಬ್ದಗಳನ್ನು ಕೇಳಿ ಸುಮಂತ್ ಗನ್ ಬಿಸಾಕಿ ನನ್ನೆಡೆಗೆ ಓಡಿ ಬಂದ. ನಾನು ಕೂಡಾ ಅವನಪ್ಪಿಕೊಂಡು ಹಾಗೆಯೇ ನಿಂತಿದ್ದೆ. ಭಯದಿಂದ ತತ್ತರಿಸಿಹೋಗಿದ್ದೆ. ಪುಟ್ಟ ಮಗು ಗಾಬರಿಯಿಂದ ಸಿಕ್ಕಾಪಟ್ಟೆ ಅಳುತ್ತಾ ಇತ್ತು. ಭಯಂಕರ ಶಬ್ದಮಾತ್ರ ನಿಂತಿರಲಿಲ್ಲ, ಎದೆಯೇ ಒಡೆದು ಹೋಯಿತೇನೋ ಎಂದು ಅನಿಸತೊಡಗಿತ್ತು. ಹೇಳಿಕೊಳ್ಳಲಾರದಂಥ ಸಂಕಟವಾಗುತ್ತಿತ್ತು. ಶಮಂತನ ನೆನೆದು ಮನ ರೋಧಿಸುತ್ತಿತ್ತು. ಕೊನೆಗೂ ಶಬ್ದ ನಿಂತಿತು…
ಮಗು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು. ತುಂಬಾ ಹೊತ್ತಾದ ನಂತರ ಓರ್ವ ಆಫೀಸರ್ ಮತ್ತಿಬ್ಬರು ನಮ್ಮ ಕಾಟರ್ಸ್ ಕಡೆಗೆ ಬಂದರು. ಮನವು ಶಂಕೆಗಳ ಬೀಡಾಗಿತ್ತು. ಶಮಂತನ ಕುರಿತು ಮನ ಕಲವಳಿಸುತ್ತಿತ್ತು. ಮೇಜರ್ ಪ್ರತಾಪ್ ತುಂಬಾ ಗಂಭೀರ ದ್ವನಿಯಲ್ಲಿ ಸಿಸ್ಟರ್ “ಆಯ್ ಆಮ್ ರಿಯಲಿ ವೆರಿ ವೆರಿ ಸಾರಿ .. ಆಯ್ ಹ್ಯಾವ್ ಬ್ಯಾಡ ನ್ಯೂಸ್ ಫೋರ್ ಯು..ವಿ ಲಾಸ್ಟ್ ಅವರ್ ಬ್ರೆವ ಲೆಪ್ಟಿನೆಂಟ್ ಕರ್ನಲ್ ಶಮಂತ್..ಶಮಂತ್… ಶಹೀದ್ ಹೊಗಯೇ” ಅಂತ ಹೇಳಿ ತಮ್ಮ ಕ್ಯಾಪ್ ತೆಗೆದರು. ನನಗೆ ಏನಾಗುತ್ತಿದೆ ಅಂತ ಗೊತ್ತಾಗತಾ ಇರಲಿಲ್ಲ. ಕೊಡಲಿಯಿಂದ ಕಡಿದ ಮರ ನೆಲಕ್ಕುರುಳಿದಂತೆ ನೆಲಕ್ಕೆ ಬಿದ್ದೆ. ಎಚ್ಚರಾದಾಗ ಹಾಸ್ಪಿಟಲ್ನ ಬೆಡ್ ನಲ್ಲಿ ನನ್ನ ಮಗ ಪಿಳಿ ಪಿಳಿ ಕಣ್ಣು ಬಿಡುತ್ತಾ ಗಾಬರಿಯಿಂದ ನನ್ನನ್ನೇ ನೋಡುತ್ತಾ ಕುಳಿತಿದ್ದ. ಸುದ್ದಿ ತಿಳಿದು ಅತ್ತೆ ಮಾವರ ಸ್ಥಿತಿ ಗಂಬೀರ ವಾಗಿತ್ತು, ಭಯೋತ್ಪಾದಕರ ಹೇಯ ಕೃತ್ಯಕ್ಕೆಅವರ ಒಬ್ಬನೇ ಒಬ್ಬ ಮಗನ ಜೀವ ಬಲಿಯಾಗಿತ್ತು. ನಾನು ನನ್ನ ಸರ್ವಸ್ವವು ಆಗಿದ್ದ ನನ್ನ ಗೆಳೆಯ, ಪತಿ ನನ್ನ ಮಗನ ಮುದ್ದಿನ ತಂದೆ ಯನ್ನು ಕಳೆದುಕೊಂದಿದ್ದೆ. ಆ ಕ್ಷಣ…ನೆನಸಿ ಕೊಂಡರೆ ಈಗಲೂ ಹಲವು ಜ್ವಾಲಾಮುಖಿಗಳು ಒಮ್ಮೆಲೇ ಸ್ಪೋಟಿಸಿದ ಅನುಭವವಾಗುತ್ತದೆ. ಅಂದು ಪಾಕ್ ಪ್ರೇರಿತ ಉಗ್ರರು ಕದನವಿರಾಮ ವನ್ನು ಉಲ್ಲಂಘಿಸಿ ಶಕ್ತಿಶಾಲಿ ಬಾಂಬ್ ಗಳಿಂದ ದಾಳಿ ಮಾಡಲಾರಂಭಿಸಿದ್ದರು. ಶಮಂತನ ಬೆಟಾಲಿಯನ್ ಕೂಡ ಪ್ರತಿ ದಾಳಿ ನಡಿಸ ಹತ್ತು ಉಗ್ರರನ್ನು ಹೊಡೆದು ಉರುಳಿಸಿದ್ದರು. ಆದರೆ ಸಡನ್ನಾಗಿ ಆದ ಸ್ಪೋಟದಿಂದ ಮೂವರು ಸೈನಿಕರು ಮತ್ತು ಒಬ್ಬ ಮೇಜರ್ ಮತ್ತೆ ಶಮಂತ್ ನನ್ನು ಷಹೀದ್ ರನ್ನಾಗಿ ಮಾಡಿತ್ತು. ಎಲ್ಲ ದೇಹಗಳು ಗೊತ್ತು ಕೂಡ ಸಿಗದಂತೆ ಛಿದ್ರ ಛಿದ್ರ ವಾಗಿದ್ದವು. ಅವರ ಮೈಮೇಲಿನ ಅವರ ಹೆಸರಿನ ಬ್ಯಾಚ್ ದಿಂದ ಯಾರು ಎಂದೂ ತಿಳಿಯಬೇಕಷ್ಟೇ.
ಆ ದುಃಖವನ್ನು ಅದು ಹೇಗೆ ನಿಭಾಯಿಸಿದೆನೋ ಈಗಲೂ ಗೊತ್ತಿಲ್ಲ. ಸುದ್ದಿ ತಿಳಿದ ವಿಜಯ ನ್ಯೂಡೆಲ್ಲಿಗೆ ಬಂದಿದ್ದ. ನಾವಿರುವ ಪ್ರದೇಶಕ್ಕೆ ಬರಲು ಅಸಾಧ್ಯವಾಗಿತ್ತು ಅವನಿಗೆ ಸಿಯಾಚಿನ್ ದಿಂದ ದೆಹಲಿಗೆ ಶಮಂತನ ದೇಹದೊಂದಿಗೆ ನಾನೊಬ್ಬಳೇ ಸೇನಾ ವಿಮಾನದಲ್ಲಿ ಬಂದೆ ದೆಹಲಿಯಲ್ಲಿ ಬೇರೆ ಸೇನಾ ಹೆಲಿಕಾಪ್ಟರ್ ಮೂಲಕ ಅವನುರಿಗೆ ಬರಬಕಿತ್ತು. ವಿಜಯ ನಮಗಾಗಿ ಅಲ್ಲಿ ಕಾಯುತ್ತಿದ್ದ. ವಿಜಯನ ನೋಡುತ್ತಲೇ ನನ್ನ ದುಃಖದ ಕಟ್ಟೆ ಒಡೆಯಿತು. ಅವನು ನಮ್ಮೊಂದಿಗೆ ಹೆಲಿಕಾಪ್ಟರ್ನಲ್ಲಿ ಬಂದನು. ಮನೆಯಲ್ಲಿ ಎಲ್ಲರ ಸಂಕಟ ಹೇಳತಿರದ್ದು. ಎಲ್ಲ ಅಮರ ಯೋಧರ ಮನೆಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅತ್ತೆ ಮಾವ, ಅಮ್ಮ ಅಪ್ಪರನ್ನು ನಿಭಾಯಿಸುವದೇ ಕಷ್ಟವಾಗಿತ್ತು. ನಾನಂತೂ ಮಾತೇ ಬಾರದ ಮೂಕಿಯಂತಾಗಿದ್ದೆ. ಪುಟ್ಟ ಸುಮಂತ್ ಅಪ್ಪನ ದಾರಿ ಕಾಯುತ್ತಿದ್ದ. ಪಪ್ಪ ಎಲ್ಲಿ ತೋರಿಸು ಅಂತ ಪದೇ ಪದೇ ಕೇಳತಾ ಇದ್ದ. ಸಕಲ ಸರ್ಕಾರಿ ಗೌರವಗಳೊಂದಿಗೆ ನನ್ನ ಶಮಂತನ ಅಂತ್ಯಕ್ರಿಯೆ ಆಯಿತು. ಮರಣೋತ್ತರ ಪರಮವೀರ ಚಕ್ರ ಪ್ರಶಸ್ತಿ ದೊರೆಯಿತು. ಆ ಪ್ರಶಸ್ತಿಯನ್ನು ಅವನ ಪರವಾಗಿ ತೆಗೆದುಕೊಳ್ಳುವಾಗ ಶಮಂತ್ ಅಲ್ಲೇ ನಿಂತುಕೊಂಡು ನೋಡುತ್ತಿರುವನಂತೆ ಅನಿಸುತ್ತಿತ್ತು.
ನನ್ನ, ಪುಟ್ಟ ಸುಮಂತ್ ಮುಂದಿನ ಭವಿಷ್ಯದ ಬಗೆಗೆ ಅಪ್ಪ ಅಮ್ಮ ,ಅತ್ತೆ ಮಾವರು ಯೋಚಿಸತೊಡಗಿದರು. ವಿಜಯ್ ಎಲ್ಲ ಹಿರಿಯರಿಗೆ ತಾನು ಅಂಕಿತಾಳನ್ನು ಮದುವೆಯಾಗಬೇಕೆಂಬ ತನ್ನ ಅಭಿಲಾಷೆಯನ್ನು ಹೇಳಿದನು. ಮಗನನ್ನು ಕಳೆದುಕೊಂಡ ನಿಮಗೆ ನಿಮ್ಮ ಮಗನಾಗಿ, ಪುಟ್ಟ ಸುಮಂತ್ ಗೆ ಪ್ರೀತಿಯ ಅಪ್ಪನಾಗಿ, ಅಂಕಿತಾಳಿಗೆ ಬಾಳ ಸಂಗಾತಿಯಾಗಿ ನಿಮ್ಮ ಜೊತೆ ಇರಬೇಕು ಅಂತ ಆಸೆ ಅಂತ ಸುರಿಯುವ ಕಂಬನಿಗಳಿಂದ ಹೇಳಿದನು. ವಿಜಯ ತಂದೆ ತಾಯಿಯಿಂದ ಎಲ್ಲರಿಗೂ ಅವನ ನಿರ್ಧಾರ ಸರಿ ಎಣಿಸಿತು. ಎಲ್ಲರೂ ನನ್ನನ್ನು ಒಪ್ಪಿಸಲು ತೊಡಗಿದರು. ಸ್ವಲ್ಪ ಸಮಯಾವಕಾಶ ಪಡೆದು ಎಲ್ಲರ ಅಭಿಲಾಷೆಯಂತೆ ವಿಜಯನನ್ನು ಮದುವೆಯಾದೆ. ವಿಜಯ ನನ್ನ ತುಂಬಾ ಪ್ರೀತಿ ವಿಶ್ವಾಸಗಳಿಂದ ನೋಡಿಕೊಂಡ. ಅತ್ತೆಮಾವರಿಗೆ ಮಗನೇ ಆದ, ಪುಟ್ಟ ಸುಮಂತ್ ಮುದ್ದಿನ ಅಪ್ಪನಾದ. ಶಮಂತ್ ಅಲ್ಲೆಲ್ಲೋ ದೂರದಲ್ಲಿ ನಿಂತುಕೊಂಡು ಎಲ್ಲಾ ನೋಡುತ್ತಿರುವನೇನೋ ಎಂದು ಪ್ರತಿಸಲವು ಅನ್ನಿಸುತ್ತಿತ್ತು.
ಅಂಕಿತಾ… ಅಂಕಿತಾ… ಎಂಬ ಕರೆಗೆ ನನ್ನ ಭೂತಕಾಲದ ನಿನಪಿನಿಂದ ಹೊರಬಂದೆ. ಅದೂ ವಿಜಯನ ದ್ವನಿಯಾಗಿತ್ತು. ನೀನಿಲ್ಲಿದ್ದಿಯಾ.. ಅಂತ ಹತ್ತಿರಕ್ಕೆ ಬಂದು ನನ್ನ ಕಂಬನಿಯನ್ನೂ ಕಂಡು ಅವನೂ ಭಾವುಕನಾದನು. ಪ್ರಾಣ ಸ್ನೇಹಿತನ ನಿನಪಿನಿಂದ ಅವನ ಧ್ವನಿಯು ಕಂಪಿಸಿತು. ನೋಡು ಅಂಕು, ನಮ್ಮನ್ನೆಲ್ಲ ಅಳಿಸಿ ನೋಡು ಹೇಗೆ ನಗುತ್ತಿದ್ದಾನೆ ನೋಡು..ಇವತ್ತಿಗೆ ಮೂರು ವರ್ಷ ವಾಯಿತಲ್ಲ.. ನಾನೂ ಕೂಡಾ ಮೌನವಾಗಿ ಶಮಂತನ ಫೋಟೋವನ್ನೇ ದೃಷ್ಟಿಸುತ್ತಿದ್ದೆ. ಅಂಕು ಅಯ್ಯೋ ಮರೆತೇ ಬಿಟ್ಟೆ.. ನೆನಪಿಲ್ವಾ ನಿನಗೆ ಸುಮಂತ್ ಸ್ಕೂಲ್ನಲ್ಲಿ ಇವತ್ತು ಆನಿವಲ್ ಡೇ ಇದೆ. ನಿನ್ನ ಮಗನನ್ನು ಇಂಥದೇ ಮಿಲ್ಟಿ ಯುನಿಫಾರ್ಮ್ನಲ್ಲಿ ಸೈನಿಕರ ಬಗಗೆ ಕಿರುನಾಟಕ ಮಾಡಿದ್ದಾನಲ್ಲ ಅದನ್ನು ನೋಡೋಕ್ಕೆ ಹೋಗಲು ನಿನ್ನ ಹುಡುಕುತ್ತ ಬಂದಿರುವದು. ಲೇಟ್ ಆದರೆ ನನ್ನ ಮಗನಿಗೆ ಸಿಟ್ಟು ಬರುತ್ತದೆ. ನನ್ನ ಜೊತೆಗೆ ಟೂ ಬಿಡತಾನೆ ಅವನೂ. ಬೇಗ ಬಾ ಅಂದಾಗ ನಾನೂ ರೆಡಿ ಇದ್ದೀನಿ ನಡೆ ಅಂತ ಮಗನ ಶಾಲೆಯ ಕಡೆ ನಡೆದೆವು…
** ಮುಕ್ತಾಯ **
(ಈ ಕಥೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಸಾತಾರಾ ಸೈನಿಕ ಸ್ಕೂಲನಲ್ಲಿ ಓದಿದ ವೀರ
ಯೋಧನ ಜೀವನದ ಗಾಥೆಯನ್ನು ಕಥೆಯ ಮೂಲಕ ನಿರೂಪಿಸಿದ್ದೇನೆ. ನನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಪುರಸ್ಕಾರ ದೊರೆಯುತ್ತದೆ ಎಂದು ಬಾವಿಸಿದ್ದೇನೆ.)
— ಪ್ರೇರಣಾ ಕುಲಕರ್ಣಿ
************************************************************************
ಈ ಕಥೆ ನಿಮಗೆ ಇಷ್ಟವಾಗಿದೆ ಅಂತ ತಿಳ್ಕೊತೀವಿ, ಇಂತಹ ಇನ್ನೂ ಅನೇಕ ಕಥೆಗಳನ್ನ ಇಲ್ಲಿ ಓದಬೇಕು ಅಂತ ಬಯಸಿದರೆ YES ಅಂತ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ,
ಇಂತಹ ಕಥೆ, ಲೇಕನಗಳು ಪ್ರಕಟವಾದ ತಕ್ಷಣ ತಿಳಿಯಲು ನಮ್ಮ ವೆಬ್ ಸೈಟ್ ನ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ. ಆಮೂಲಕ ನಮ್ಮಲ್ಲಿ ಹೊಸ ಲೇಖನ ಪ್ರಕಟವಾದ ಸೂಚನೆಯನ್ನು ಪಡೆಯಿರಿ…
SPONSORED CONTENT