ಈಗೀನ ವಾತಾವರಣವೇ ಹಾಗೆ ಒಂದೆಡೆ ಕೊರೊನಾ ಭಯ, ಮತ್ತೊಂದೆಡೆ ಜೋರಾದ ಮಳೆ. ಹೀಗಾಗಿ ಆರೋಗ್ಯದಲ್ಲಿ ಬದಲಾವಣೆ ಸಹಜ. ಈ ಎಲ್ಲ ಬದಲಾವಣೆಗಳಿಗೆ ಆಯುರ್ವೇದದಲ್ಲಿ ಉತ್ತಮ ಪರಿಹಾರಗಳಿವೆ. ಸದ್ಯ ಉಂಟಾಗಿರುವ ಕೊರೊನಾ ಸಮಸ್ಯೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೊಂದೇ ಪರಿಹಾರ ಎನ್ನುವ ಸ್ಥಿತಿಗೆ ನಾವೆಲ್ಲಾ ತಲುಪಿದ್ದೇವೆ. ಸುಲಭವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲರೂ ಆಯುರ್ವೇದದ ಕಷಾಯಗಳ ಕಡೆಗೆ ತಿರುಗಿದ್ದಾರೆ. ಅಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಒಂದು ಕಷಾಯದ ಕುರಿತಾಗಿ ನಾವಿಂದು ತಿಳಿಸಿಕೊದಲಿದ್ದೇವೆ ಮುಂದೆ ಓದಿ…
ನಾವಿಂದು ತಿಳಿಸಿಕೊಡುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಷಾಯಕ್ಕೆ ಅರಿಶಿನ, ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ, ಶುಂಟಿ, ಲಿಂಬು, ತುಳಸಿ, ಬೆಲ್ಲ ಮತ್ತು ಪುದೀನಾ ಎಲೆಗಳನ್ನು ಬಳಸಿ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ನೋಡೋಣ…
ನಾವು ಕಷಾಯವನ್ನು ಮಾಡಲು ಮೊದಲಿಗೆ 2 ಗ್ಲಾಸ್ ನಷ್ಟು ನೀರನ್ನು ತೆಗೆದುಕೊಂಡು ಬಿಸಿಯಾಗಲು ಗ್ಯಾಸ್ ಮೇಲೆ ಇಟ್ಟುಕೊಳ್ಳೋಣ… ನಂತರ ಅದಕ್ಕೆ ಅರಿಶಿನದ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ ಇವುಗಳನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿಕೊಳ್ಳಿ. ಈ ಪುಡಿಯನ್ನು ಬಿಸಿಯಾಗಿರುವ ನೀರಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
ಇದನ್ನೂ ಓದಿರಿ: ಬಂಗು, ಕಪ್ಪುಕಲೆಗಳು, ಮೊಡವೆ ಕಲೆಗಳಿಗೆ ಇಲ್ಲಿದೆ ಸುಲಭವಾದ ಮನೆಮದ್ದು
ನಂತರ ಚಿಕ್ಕ ತುಂಡು ಶುಂಟಿ, ತುಳಸಿ ಮತ್ತು ಪುದೀನಾ ಸೇರಿಸಿ ಚೆನ್ನಾಗಿ ಕುಟ್ಟಿ ಅವುಗಳನ್ನು ಕಷ್ಯಾಯದ ನೀರಿಗೆ ಹಾಕಿಕೊಂಡು ಚೆನ್ನಾಗಿ ಕುದಿಯಲು ಬಿಡಬೇಕು. ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ. ಚೆನ್ನಾಗಿ ಕುದಿದು ಒಂದು ಗ್ಲಾಸ್ ಆಗುತ್ತಿದ್ದಂತೆ ಈ ಕಷಾಯವನ್ನು ಇಳಿಸಿ ಸೋಸಿಕೊಳ್ಳಿ. ಈ ಕಷಾಯವನ್ನು ಕುಡಿಯುವುದಕ್ಕೂ ಮುನ್ನ ಸ್ವಲ್ಪ ಲಿಂಬೆ ಹುಳಿಯನ್ನು ಹಾಕಿಕೊಂಡು ಕುಡಿಯಿರಿ.
ಈ ಕಷಾಯಕ್ಕೆ ಬಳಸಿದ ಪ್ರತಿಯೊಂದು ಪದಾರ್ಥಗಳು ಆಯುರ್ವೇದದ ಪ್ರಕಾರ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವುಗಳನ್ನು ಕುಡಿಯುವುದರಿಂದ ಯಾವುದೇ ರೋಗಗಳ ವಿರುದ್ಧ ನಾವು ಯಶಸ್ವಿಯಾಗಿ ಹೋರಾಡಬಹುದು. ಇದರಿಂದ ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ನಮ್ಮನ್ನು ಪದೇ ಪದೆ ಕಾಡುವುದಿಲ್ಲ. ಕಷಾಯ ಮಾಡುವ ವಿಧಾನವನ್ನು ನೋಡಲು ಕೆಳಗಿನ ವಿಡಿಯೋ ನೋಡಿ..