ಬಂಗು, ಕಪ್ಪುಕಲೆಗಳು, ಮೊಡವೆ ಕಲೆಗಳಿಗೆ ಇಲ್ಲಿದೆ ಸುಲಭವಾದ ಮನೆಮದ್ದು

home-remedy-for-pigmentation

ಮಹಿಳೆಯರು ತಮ್ಮ ಸೌಂದರ್ಯದ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಮುಖದಲ್ಲಿ ಏನಾದರೂ ಒಂದು ಸಮಸ್ಯೆ ಉಂಟಾದರೆ ತಕ್ಷಣ ಬ್ಯೂಟಿ ಪಾರ್ಲರ್ ಗೆ ಓಡುತ್ತಾರೆ. ಇಲ್ಲವೇ ಯಾವುದಾದರು ಜಾಹಿರಾತನ್ನು ನೋಡಿ ಅದನ್ನು ತಮ್ಮ ಮುಖದ ಮೇಲೆ ಪ್ರಯೋಗ ಮಾಡಿಕೊಳ್ಳುತ್ತಾರೆ. ಇದರಿಂದ ಹಲವಾರು ತೊಂದರೆಗಳಿಗೆ ಒಳಗಾಗುವುದನ್ನು ನಾವು ನೋಡಿರುತ್ತೇವೆ. ಆದರೆ ಅಂತಹ ತೊಂದರೆಗಳು ಉಂಟಾಗಬಾರದು ಎನ್ನುವ ಉದ್ದೇಶದಿಂದ ನಾವು ಇಲ್ಲಿ ನಿಮಗೆ ನೈಸರ್ಗಿಕವಾದ ಪರಿಹಾರಗಳೊಂದಿಗೆ ಬರುತ್ತೇವೆ. 

ಮುಖದಲ್ಲಿ ಕಪ್ಪು ಕಳೆಗಲಾಗುವುದು, ಬಿಸಿಲಿನಿಂದ ಸುಟ್ಟು ಕಲೆಗಲಾಗಿರುವುದು, ಮೊಡವೆಗಳಿಂದ ಉಂಟಾದ ಕಲೆಗಳ ಮತ್ತು ಬಂಗು ನಿವಾರಣೆಗೆ ನಾವಿಂದು ಉತ್ತಮ ಮನೆ ಮದ್ದನ್ನು ತಿಳಿಸಿಕೊಡಲಿದ್ದೇವೆ. ಕೆಲವರಿಗೆ ಕೆನ್ನೆಗಳ ಮೇಲೆ ಮತ್ತು ಮೂಗಿನ ಮೇಲೆ ಅಥವಾ ಹಣೆಯ ಮೇಲೆ ಕಲೆಗಳು ಉಂಟಾಗಿರುತ್ತವೆ.  ಇವುಗಳ ನಿವಾರಣೆಗೆ ನಾವಿಂದು ತಿಳಿಸುವ ಮನೆಮದ್ದಿನಿಂದ ಪರಿಹಾರ ದೊರೆಯುತ್ತದೆ. 

ಇದನ್ನೂ ಓದಿರಿ: ಬೆನ್ನು ನೋವು ನಿವಾರಣೆಗೆ ಇಲ್ಲಿದೆ ಮನೆಮದ್ದು

ಬೇಕಾಗುವ ಪದಾರ್ಥಗಳು 

  • ಒಂದು ಆಲೂಗಡ್ಡೆ
  • ಜೇನುತುಪ್ಪ
  • ನಿಂಬೆ ಹುಳಿ

ಈ ಮನೆಮದ್ದನ್ನು ಹೇಗೆ ತಯಾರಿಸಿಕೊಳ್ಳುವುದು ಮತ್ತು ಅದರ ಉಪಯೋಗ ಹಾಗೆಯೇ ಅದರಲ್ಲಿರುವ ಉಪಯುಕ್ತ ಸತ್ವಗಳೆನು ತುಳಿದುಕೊಳ್ಳೋಣ..

ಮೊದಲಿಗೆ ಆಲುಗಡ್ಡೆಯ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಚಿಕ್ಕದಾಗಿ ತುರಿದುಕೊಳ್ಳಬೇಕು. ತುರಿದ ನಂತರ ಅದರಿಂದ ಜ್ಯೂಸ್ ತೆಗೆಯಬೇಕು. ಈ ಜ್ಯೂಸ್ ಗೆ ಅರ್ಧ ಸ್ಪೂನ್ ನಷ್ಟು ಜೇನುತುಪ್ಪವನ್ನು ಸೇರಿಸಿ. ಇದಕ್ಕೆ ನಾಲ್ಕರಿಂದ ಐದು ಹನಿಗಳಷ್ಟು ನಿಂಬೆ ರಸವನ್ನು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಕೆಲವರಿಗೆ ನಿಂಬೆ ರಸವು ಅಳರ್ಜಿಯನ್ನು ಉಂಟುಮಾಡುತ್ತದೆ. ಅಂತವರು ಆಲೋವೆರಾ ಜೆಲ್ ಮಿಶ್ರಣ ಮಾಡಿಕೊಳ್ಳಬೇಕು. ಈ ರೀತಿಯಲ್ಲಿ ತಯಾರಾದ ಮಿಶ್ರಣವನ್ನು ಒಂದು ಕಾಟನ್ ಬಟ್ಟೆಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಬೇಕು. ಬಂಗು ಉಂಟಾಗು ತೊಂದರೆ ಅನುಭವಿಸುತ್ತಿರುವವರು ಈ ಮಿಶ್ರಣವನ್ನು ವಾರದಲ್ಲಿ ಎರಡು ಬಾರಿ ಉಪಯೋಗಿಸಬೇಕು. ಈ ಮಿಶ್ರಣವನ್ನು ಬಳಸಿಕೊಂಡು ಫೆಸ್ ಪ್ಯಾಕ್ ಆಗಿ ಕೂಡ ಮಾಡಿಕೊಳ್ಳಬಹುದು ಅಥವಾ ಐಸ್ ಕ್ಯೂಬ್ ತರ ಮಾಡಿ ಕೂಡ ಬಳಸಬಹುದು. ಈಗ ಮುಖವನ್ನು ಚೆನ್ನಾಗಿ ಐದರಿಂದ ಎಂಟು ನಿಮಿಷ ಮಸಾಜ್ ಮಾಡಿ ನಂತರ ಹದಿನೈದು ನಿಮಿಷ ಬಿಟ್ಟು ನಾರ್ಮಲ್ ವಾಟರ್ ಅಲ್ಲಿ ಮುಖವನ್ನು ತೊಳೆದುಕೊಳ್ಳಿರಿ.

ಈ ಮಿಶ್ರಣವನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಹಚ್ಚುತ್ತ ಬರುವುದರಿಂದ ಮುಖದ ಮೇಲೆ ಉಂಟಾದ ಕಪ್ಪು ಕಲೆಗಳು, ಬಿಸಿಲಿನಿಂದ ಸುಟ್ಟ ಕಲೆಗಳು, ಬಂಗು ಮತ್ತು ಮೊಡವೆಕಲೆಗಳೂ ಸಹ ನಿವಾರಣೆಯಾಗುತ್ತದೆ. ಆಲುಗಡ್ಡೆಯಲ್ಲಿ ವಿಟಮಿನ್- ಬಿ ಕಾಂಪ್ಲಾಕ್ಸ್, ಮೆಗ್ನೆಶಿಯಂ, ಜಿಂಕ್ ಸತ್ವಗಳು ಇರುವುದರಿಂದ ಇವುಗಳು ಜೀವಕೋಶಗಳ ನವೀಕರಣಕ್ಕೆ ಸಹಾಯ ಮಾಡುತ್ತದೆ. ಇನ್ನು ನಿಂಬೆಯಲ್ಲಿರುವ ವಿಟಮಿನ್-ಸಿ ಅಂಶದಿಂದಾಗಿ ಮುಖದ ಕಲೆಗಳೆಲ್ಲ ನಿವಾರಣೆಯಾಗುತ್ತದೆ. ಜೇನುತುಪ್ಪ ಸಹ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ಹೊಸ ಜೀವಕೋಶಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದಾಗಿ ಚರ್ಮಗಳಲ್ಲಿ ಕಲೆಗಳು ನಿವಾರಣೆಯಾಗಿ ಹೊಳಪು ಕಂಡುಬರುತ್ತದೆ. 

ನೀವು ಎರಡು ಮೂರು ಬಾರಿ ಹಚ್ಚಿ ಏನೂ ಪ್ರಯೋಜನ ಆಗಲಿಲ್ಲ ಅಂದರೆ ಅದು ತಪ್ಪು, ಏಕೆಂದರೆ ಯಾವುದೇ ಮನೆ ಮದ್ದು ತಕ್ಷಣ ಅದರ ರಿಸಲ್ಟ್ ಕೊಡೋದಿಲ್ಲ ಸತತವಾಗಿ ಹಚ್ಚುತ್ತಾ ಬಂದರೆ ಕ್ರಮೇಣ ಅದರ ಪರಿಣಾಮ ನಿಮಗೆ ಗೊತ್ತಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ ಹಾಗೇನೇ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡೋದನ್ನು ಮರೆಯಬೇಡಿ.