AAICLAS Recruitment 2023: 436 ಅಸಿಸ್ಟೆಂಟ್‌ ಹುದ್ದೆಗಳಿಗೆ ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಿ

AAICLAS Recruitment 2023

ಏರ್‌ಪೋರ್ಟ್‌ ಅಥಾರಟಿ ಆಫ್‌ ಇಂಡಿಯಾ ಕಾರ್ಗೋ ಲಾಜಿಸ್ಟಿಕ್ಸ್‌ & ಅಲೈಡ್‌ ಸರ್ವಿಸ್‌ ಕಂಪೆನಿ ಲಿಮಿಟೆಡ್‌ನಲ್ಲಿ (AAICLAS Recruitment 2023) ಖಾಲಿ ಇರುವ 36 ಅಸಿಸ್ಟೆಂಟ್‌ ಹುದ್ದೆಗಳ ಭರ್ತಿಗೆ ಸಂಸ್ಥೆಯು ಅರ್ಜಿಯನ್ನು ಆಹ್ವಾನಿಸಿದೆ.

ದೇಶಾದ್ಯಂತ ಖಾಲಿ ಇರುವ 436 ಅಸಿಸ್ಟೆಂಟ್‌ (ಸೆಕ್ಯೂರಿಟಿ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ನವೆಂಬರ್‌ ಆಗಿರುತ್ತದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ಮಾಡಿಕೊಳ್ಳಲು ಸಂಸ್ಥೆಯು ನಿರ್ಧರಿಸಿದೆ.

ಈ ಹುದ್ದೆಗಳಿಗೆ ಆಯ್ಕೆಯಾದ (AAICLAS Recruitment 2023) ಅಭ್ಯರ್ಥಿಗಳನ್ನು ಎಎಐ ಘಟಕಗಳಾದ – ಚೆನ್ನೈ, ಕೋಲ್ಕತ್ತ, ಕೋಜಿಕೋಡೆ, ವಾರಣಾಸಿ, ಶ್ರೀನಗರ, ವಡೋದರಾ, ತಿರುಪತಿ, ವೈಜಾಗ್, ಮಧುರೈ, ತ್ರಿಚಿ, ರಾಯ್‌ಪುರ್, ರಾಂಚಿ, ಭುಬನೇಶ್ವರ್, ಅಗರ್ತಲಾ, ಅಮೃತ್‌ಸರ್, ಲೇಹ್, ಡೆಹರಾಡೂನ್, ಪುಣೆ, ಇಂದೋರ್, ಸೂರತ್ ನಲ್ಲಿ ನೇಮಕ ಮಾಡಿಕೊಳ್ಳಲು ಯೋಜಿಸಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಂದೆ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ನೋಟಿಫಿಕೇಶನ್ ಸಹ ಒದಗಿಸಲಾಗಿದ್ದು, ಸರಿಯಾಗಿ ಮತ್ತೊಮ್ಮೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರೆ ತಪ್ಪದೇ ನಮ್ಮ ಟೆಲಿಗ್ರಾಮ್ ಚಾನಲ್ ಹಾಗೂ ವಾಟ್ಸಾಪ್ ಚಾನಲ್ ಗಳಿಗೆ ತಾವು ಜಾಯಿನ್ ಆಗಬಹುದು.(Followers phone numbers are not revealed)

ಉದ್ಯೋಗ ನೀಡುತ್ತಿರುವ ಸಂಸ್ಥೆ ಏರ್‌ಪೋರ್ಟ್‌ ಅಥಾರಿಟಿ ಇಂಡಿಯಾದ ಕಾರ್ಗೊ ಲಾಜಿಸ್ಟಿಕ್ಸ್‌ ಅಂಡ್ ಅಲೈಡ್ ಸರ್ವೀಸೆಸ್ ಕಂಪನಿ ಲಿಮಿಟೆಡ್‌
ಹುದ್ದೆಯ ಹೆಸರುಅಸಿಸ್ಟಂಟ್ (ಸೆಕ್ಯೂರಿಟಿ)
ಒಟ್ಟು ಹುದ್ದೆಗಳು 436
ಮಾಸಿಕ ವೇತನ ರೂಪಾಯಿ 21,500/- ರಿಂದ 22,500/-
ಅರ್ಜಿ ಸಲ್ಲಿಸಲು ಕೊನೆ ದಿನಾಂಕ15 ನವೆಂಬರ್ 2023

ವಿದ್ಯಾರ್ಹತೆ

ಏರ್‌ಪೋರ್ಟ್‌ ಅಥಾರಿಟಿ ಇಂಡಿಯಾದ ಕಾರ್ಗೊ ಲಾಜಿಸ್ಟಿಕ್ಸ್‌ ಅಂಡ್ ಅಲೈಡ್ ಸರ್ವೀಸೆಸ್ ಕಂಪನಿ ಲಿಮಿಟೆಡ್‌ ನ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯ / ಸಂಸ್ಥೆಯಿಂದ 12ನೇ ತರಗತಿ ತೇರ್ಗಡೆಯಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಶೇ. 60 ಮತ್ತು ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ ಶೇ. 55ರಷ್ಟು ಅಂಕ ಕಡ್ಡಾಯ. ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ಭಾಷೆಯನ್ನು ಓದುವ / ಮಾತನಾಡುವ ಸಾಮರ್ಥ್ಯ ಹೊಂದಿರುವವರು ಅರ್ಜಿ ಸಲ್ಲಿಸಿ.

ಇದನ್ನು ಓದಿ: KLE KVK Recruitment 2023:ಚಾಲಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ವಯೋಮಿತಿ

ಈ ಹುದ್ದೆಗಳಿಗೆ (AAICLAS Recruitment 2023) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01-10-2023 ಕ್ಕೆ ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ಇನ್ನು ಮೀಸಲಾತಿಗೆ ಅನುಗುಣವಾಗಿ ರಿಯಾಯಿತಿ ಲಭ್ಯವಿದೆ. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಇರುತ್ತದೆ.

ಅರ್ಜಿ ಶುಲ್ಕ

AAICLAS Recruitment 2023 ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು 500 ರೂ. ಮತ್ತು ಎಸ್‌ಸಿ/ ಎಸ್‌ಟಿ/ ಎಕ್ಸ್‌ ಸರ್ವಿಸ್‌ ಮ್ಯಾನ್‌/ ಮಹಿಳೆಯರು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಮತ್ತು ವೇತನ

ಪ್ರಿಲಿಮಿನರಿ ಇಂಗ್ಲಿಷ್ ಟೆಸ್ಟ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 21,500-22,500 ರೂ. ತಿಂಗಳ ವೇತನ .

AAICLAS Recruitment 2023 ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ?

  • AAICLAS Assistant (Security) ನೋಟಿಫಿಕೇಷನ್‌ ಮೇಲೆ ಕ್ಲಿಕ್‌ ಮಾಡಿ
  • ಅಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.
  • ಕೆಳಗೆ ನೀಡಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಕೇಳಿರುವ ಮಾಹಿತಿಗಳನ್ನು ಸರಿಯಾಗಿ ಒದಗಿಸಿ ಅರ್ಜಿ ತುಂಬಿ ಮತ್ತು ಅರ್ಜಿ ಶುಲ್ಕ ಪಾವತಿಸಿ.
  • ಮತ್ತೊಮ್ಮೆ ಅರ್ಜಿಯಲ್ಲಿ ನೀವು ನೀಡಿರುವ ಎಲ್ಲ ಮಾಹಿತಿಗಳು ಸರಿಯಾಗಿವೆಯೇ ಪರಿಶೀಲಿಸಿ.
  • ನಂತರ Submit ಆಯ್ಕೆ ಕ್ಲಿಕ್‌ ಮಾಡಿ.

ಇದನ್ನು ಓದಿ: AAI Junior Executive Recruitment 2023:ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20 ಅಕ್ಟೋಬರ್ 2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15 ನವೆಂಬರ್ 2023

ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಚಾನಲ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಚಾನಲ್ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here