KSP Civil PC Exam New Date:454 ಪೊಲೀಸ್‌ ಕಾನ್ಸ್‌ಟೇಬಲ್ ಪರೀಕ್ಷೆಗೆ ಮತ್ತೊಮ್ಮೆ ದಿನಾಂಕ ಬದಲಾವಣೆ

KSP Civil PC Exam New Date

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ 454 ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ (KSP Civil PC Exam New Date) ಪರಿಷ್ಕೃತ ಪರೀಕ್ಷೆ ದಿನಾಂಕ ಬಿಡುಗಡೆ ಮಾಡಲಾಗಿದೆ. ನವೆಂಬರ್ 19 ರ ಬದಲಿಗೆ ಡಿಸೆಂಬರ್ 10 ರಂದು ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಒಂದು ವಾರ ಮುಂಚಿತವಾಗಿ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್ ಮಾಡಬಹುದು.

454 ಪೊಲೀಸ್‌ ಕಾನ್ಸ್‌ಟೇಬಲ್ ಹುದ್ದೆಗಳ ಪರೀಕ್ಷೆಯ ಪ್ರಮುಖ ಅಂಶಗಳು

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ 454 ಸಿವಿಲ್‌ (ಪುರುಷ ಮತ್ತು ಮಹಿಳಾ) (ತೃತೀಯ ಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಮತ್ತೊಮ್ಮೆ ಪರೀಕ್ಷೆ ದಿನಾಂಕ ಮುಂದೂಡಲಾಗಿದೆ.

ಮೊದಲಿಗೆ ನವೆಂಬರ್ 5 ಕ್ಕೆ ನಿಗದಿಪಡಿಸಿದ್ದ ಪರೀಕ್ಷೆಯನ್ನು ನವೆಂಬರ್ 19 ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ದಿನಾಂಕವನ್ನು ಮುಂದೂಡಲಾಗಿದೆ. ಈ ಹಿಂದಿನ ವೇಳಾಪಟ್ಟಿ ಬದಲು ದಿನಾಂಕ 10-12-2023 ರಂದು ಲಿಖಿತ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ.

ಈ ಹೊಸ ವೇಳಾಪಟ್ಟಿಯನ್ನು ಡಿಐಜಿಪಿ ನೇಮಕಾತಿ ಹಾಗೂ ಸಮನ್ವಯಾಧಿಕಾರಿ ಸಿಪಿಸಿ ನೇಮಕಾತಿ ಸಮಿತಿ, ಡೈರೆಕ್ಟರ್ ಜನರಲ್ ಆಫ್‌ ಪೊಲೀಸ್‌, ನೇಮಕಾತಿ ಬೆಂಗಳೂರು ರವರು ನಿಗದಿಪಡಿಸಿದ್ದು, ಹೊಸ ಪರೀಕ್ಷಾ ಕೇಂದ್ರಗಳ ವ್ಯವಸ್ಥೆಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

454 ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಪರೀಕ್ಷೆ ನಡೆಯುವ ಒಂದು ವಾರ ಮುಂಚಿತವಾಗಿ ಪ್ರವೇಶ ಪತ್ರ ಬಿಡುಗಡೆ ಮಾಡಲಿದ್ದು, ಅಪ್ಲಿಕೇಶನ್‌ ನಂಬರ್ ಹಾಗೂ ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್‌ ಆಗುವ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕರ್ನಾಟಕ ಪೊಲೀಸ್ ಇಲಾಖೆಯು 3064 ಸಶಸ್ತ್ರ ಮೀಸಲು ಪೊಲೀಸ್‌ ಕಾನ್ಸ್‌ಟೇಬಲ್‌ (ನಗರ ಸಶಸ್ತ್ರ ಮೀಸಲು / ಜಿಲ್ಲಾ ಸಶಸ್ತ್ರ ಮೀಸಲು) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯ ದಿನಾಂಕವನ್ನು ಸಹ ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆ ಇದೆ.

ಇದನ್ನು ಓದಿ: Social Welfare Department Scholarship:ಸಮಾಜ ಕಲ್ಯಾಣ ಇಲಾಖೆಯಿಂದ 35,000ದ ವರೆಗೆ ಸ್ಕಾಲರ್‌ಶಿಪ್‌ ಈಗಲೆ ಅರ್ಜಿ ಸಲ್ಲಿಸಿ

ಸಿವಿಲ್ (KSP Civil PC Exam New Date) ಪಿಸಿ ಲಿಖಿತ ಪರೀಕ್ಷೆ ಮಾದರಿ

100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ವಸ್ತುನಿಷ್ಠ ಮಾದರಿಯ ಬಹುವಿಧ ಆಯ್ಕೆ ಉತ್ತರಗಳ ಪರೀಕ್ಷೆ ಇದಾಗಿರುತ್ತದೆ. ಪ್ರತಿ ಸರಿ ಉತ್ತರಕ್ಕೆ 1.00 ಅಂಕಗವನ್ನು ನೀಡಲಾಗುತ್ತದೆ. ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ.

ಈ ಪರೀಕ್ಷೆ ಬರೆದವರನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ ಹುದ್ದೆ ಸಂಖ್ಯೆಗೆ ಅನುಗುಣವಾಗಿ 1:5 ಅಭ್ಯರ್ಥಿಗಳನ್ನು ಪಿಇಟಿ, ಪಿಎಸ್‌ಟಿ ಪರೀಕ್ಷೆಗೆ ಕರೆಯಲಾಗುತ್ತದೆ.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ ಅಂತಿಮ ಆಯ್ಕೆಪಟ್ಟಿ ಸಿದ್ಧತೆ ಹೇಗೆ?

ಲಿಖಿತ ಪರೀಕ್ಷೆ (KSP Civil PC Exam) ನಂತರ ನಡೆಸಲಾಗುವ ಸಹಿಷ್ಣುತೆ ಪರೀಕ್ಷೆ ಹಾಗೂ ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳಲ್ಲಿ, ಅಧಿಸೂಚಿಸಲಾದ ಹುದ್ದೆಗಳನುಸಾರ ಮೆರಿಟ್ ಹಾಗೂ ಮೀಸಲಾತಿಗನುಗುಣವಾಗಿ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ತಾತ್ಕಾಲಿಕ ಆಯ್ಕೆಪಟ್ಟಿಯ ಎಲ್ಲಾ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಕೆಳಗಿನ ಟೆಸ್ಟ್‌ಗಳನ್ನು ನಡೆಸಲಾಗುತ್ತದೆ.

ದೃಷ್ಟಿ ಪರೀಕ್ಷೆ: ದೂರ ದೃಷ್ಟಿ, ಸಮೀಪದ ದೃಷ್ಟಿ ಪರೀಕ್ಷೆ
ಶ್ರವಣ ಶಕ್ತಿ: ರಿನ್ನೇಸ್ ಪರೀಕ್ಷೆ, ವೆಬ್ಬರ್ ಪರೀಕ್ಷೆ, ವೆರ್ಟಿಗೋ ಪರೀಕ್ಷೆ.

ಇದನ್ನು ಓದಿ: India Post Recruitment 2023: ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ

ಬೇಕಾದ ಅರ್ಹತೆಗಳು

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ 454 ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ (KSP Civil PC Exam) ನಡೆಸಲಾಗುತ್ತಿರುವ ಪರೀಕ್ಷೆಗಳಲ್ಲಿ ಈ ಕೆಳಗಿನವು ಮಹತ್ವ ಪಡೆದುಕೊಂಡಿವೆ.

  • ಅಪಧಮನಿ ಊತ ಸಹ ಅನರ್ಹತೆ.
  • ಮಾತಿನಲ್ಲಿ ಅಡಚಣೆ ಸಹ ಅನರ್ಹತೆ.
  • ಎದೆಯ ಕ್ಷ-ಕಿರಣವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುವುದು.

ಈ ಮೇಲಿನ ವೈದ್ಯಕೀಯ ಪರೀಕ್ಷೆ ವರದಿಯನ್ನಾದರಿಸಿ ಪೊಲೀಸ್ ಇಲಾಖೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

LEAVE A REPLY

Please enter your comment!
Please enter your name here