ಕರ್ನಾಟಕ ಬ್ಯಾಂಕ್ ತನ್ನ ಖಾಲಿಯಿರುವ ಹುದ್ದೆಗಳ (Karnataka Bank Recruitment 2023) ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, 37 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ 37 ಪ್ರೊಬೆಷನರಿ ಆಫೀಸರ್, ಪ್ರಾಡೆಕ್ಟ್ ಮ್ಯಾನೇಜರ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್, ನೆಟ್ ವರ್ಕ್ ಅಡ್ಮಿನಿಸ್ಟ್ರೇಟರ್, ಪ್ರಾಡೆಕ್ಟ್ ಪ್ರೋಸೆಸ್ ಮ್ಯಾನೇಜರ್, ರಿಸ್ಕ್ ಮ್ಯಾನೇಜರ್ ಮತ್ತು ಫೈರ್ವಾಲ್ ಅಡ್ಮಿನಿಸ್ಟ್ರೇಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಂದೆ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ನೋಟಿಫಿಕೇಶನ್ ಸಹ ಒದಗಿಸಲಾಗಿದ್ದು, ಸರಿಯಾಗಿ ಮತ್ತೊಮ್ಮೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
ಈ ಉದ್ಯೋಗ ಮಾಹಿತಿಯನ್ನೂ ಓದಿರಿ: ಬೀದರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ
ಹುದ್ದೆಯ ಮಾಹಿತಿ
ಕರ್ನಾಟಕ ಬ್ಯಾಂಕ್ (Karnataka Bank Recruitment 2023)ನಲ್ಲಿ ಉದ್ಯೋಗ ಮಾಡಲು ಆಸಕ್ತರಾಗಿರುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ನೀವು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೊದಲು ನೀಡಲಾಗಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಉತ್ತಮ.
ಉದ್ಯೋಗ ನೀಡುವ ಸಂಸ್ಥೆಯ ಹೆಸರು | ಕರ್ನಾಟಕ ಬ್ಯಾಂಕ್ (Karnataka Bank) |
ಹುದ್ದೆಗಳ ಹೆಸರು | ಪ್ರೊಬೆಷನರಿ ಆಫೀಸರ್, ಪ್ರಾಡೆಕ್ಟ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 37 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31 ಅಕ್ಟೋಬರ್ 2023 |
ವಿದ್ಯಾರ್ಹತೆ
ಕರ್ನಾಟಕ ಬ್ಯಾಂಕ್ ಭರ್ತಿ ಮಾಡಿಕೊಳ್ಳಲು ಸಿದ್ಧವಾಗಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್/ಎಂಸಿಎ/ಎಂಬಿಎ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ/ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. ಕನಿಷ್ಠ 2 ವರ್ಷಗಳ ವೃತ್ತಿ ಅನುಭವನ್ನು ಹೊಂದಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ವಯೋಮಿತಿ
ಕರ್ನಾಟಕ ಬ್ಯಾಂಕ್ (Karnataka Bank) ತನ್ನ ಸಂಸ್ಥೆಗೆ ಆಯ್ದುಕೊಳ್ಳಲಿರುವ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿಯನ್ನು ಮೀರಿರಬಾರದು ಎಂದು ಸೂಚಿಸಿದೆ.
ವೇತನಶ್ರೇಣಿ
ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಬ್ಯಾಂಕ್ ನ ನೇಮಕಾತಿ ನಿಯಮಾನುಸಾರ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ
ಕರ್ನಾಟಕ ಬ್ಯಾಂಕ್ (Karnataka Bank Recruitment 2023) ತನ್ನ ಅಧಿಸೂಚನೆಯ ಪ್ರಕಾರ ಪ್ರೊಬೆಷನರಿ ಆಫೀಸರ್, ಪ್ರಾಡೆಕ್ಟ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲಿಸಲು ಪ್ರಾರಂಭ ದಿನಾಂಕ – 23 ಅಕ್ಟೋಬರ್ 2023
ಅರ್ಜಿ ಸಲಿಸಲು ಕೊನೆಯ ದಿನಾಂಕ – 31 ಅಕ್ಟೋಬರ್ 2023
ಪ್ರಮುಖ ಲಿಂಕುಗಳು
ಅಧಿಕೃತ ಅಧಿಸೂಚನೆ : ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ : ಕ್ಲಿಕ್ ಮಾಡಿ