ನಮ್ಮ ಅಡುಗೆಯ ಅವಿಭಾಜ್ಯ ಅಂಗ. ಅದನ್ನು ಹಲವಾರು ಅಡುಗೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದು ಕೇವಲ ಅಡುಗೆಯ ರುಚಿಯನ್ನು ಮಾತ್ರ ಹೆಚ್ಚಿಸುವುದಲ್ಲ, ನಮ್ಮ ಆರೋಗ್ಯಕ್ಕೂ ಅನೇಕ ಪ್ರಯೋಜನಗಳನ್ನು ಮಾಡುತ್ತದೆ. ಅಂತಹ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳುವುದರಿಂದ ಅಗತ್ಯ ಸಮಯದಲ್ಲಿ ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದಾಗಿರುತ್ತದೆ. ಅಂತಹ ಉಪಯೋಗ ತಿಳಿಸುವ ಉದ್ದೇಶ ಹೊತ್ತು ನಾವಿಂದು ಬಂದಿದ್ದೇವೆ. ಈ ಮಾಹಿತಿ ಉಪಯುಕ್ತ ಎನಿಸಿದರೆ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಶೇರ್ ಮಾಡಿ…
ಕಜ್ಜಿ ಮತ್ತು ಇಸುಬು ಸಮಸ್ಯೆಯಿಂದ ಬಳಲುತ್ತಿರುವವರು ಇಂಗಿನಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಶುದ್ದವಾದ ಕೊಬ್ಬರಿ ಎಣ್ಣೆಯಲ್ಲಿ ಇಂಗಿನ ಪುಡಿಯನ್ನು ಕಲೆಸಿ ಕಜ್ಜಿಗಳ ಮೇಲೆ ತಪ್ಪದೇ ಹಚ್ಚಿಕೊಳ್ಳುವುದರಿಂದ ನಿವಾರಣೆ ಕಾಣಬಹುದು.
ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗೆ ಇಂಗು ಪರಿಣಾಮಕಾರಿ ಔಷಧವಾಗಿದೆ. ಕಡೆದ ತಿಳಿ ಮಜ್ಜಿಗೆಗೆ ಇಂಗು ಮತ್ತು ಉಪ್ಪನ್ನು ಸೇರಿಸಿ ಸೇವನೆ ಮಾಡುವುದರಿಂದ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾಗುವ ಉದರ ಬೇನೆಗೆ ತಕ್ಷಣ ಪರಿಹಾರ ದೊರೆಯುತ್ತದೆ.
ಹೊಟ್ಟೆಹುಳ, ಜಂತುಹುಳ ಸಮಸ್ಯೆಯಿಂದ ಬಳಲುತ್ತಿರುವವರು ಇಂಗಿನಿಂದ ಪರಿಹಾರ ಪಡೆದುಕೊಳ್ಳಬಹುದು. ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಒಂದು ಚಮಚ ಇಂಗಿನ ಪುಡಿಯನ್ನು ಬೇವಿನ ರಸದೊಂದಿಗೆ ಸೇವನೆ ಮಾಡುವುದರಿಂದ ಶೀಗ್ರವಾಗಿ ಪರಿಹಾರ ದೊರೆಯುತ್ತದೆ.
ತಲೆನೋವು, ಹೊಟ್ಟೆನೋವು ಸಮಸ್ಯೆಗಳಿಗೂ ಸಹ ಇಂಗಿನ ಸೇವನೆಯಿಂದ ಪರಿಹಾರ ದೊರೆಯುತ್ತದೆ. ಇಂಗನ್ನು ತೆಂಗಿನ ಎಣ್ಣೆಯಲ್ಲಿ ತಳೆದು (ಅರೆದು) ಹಣೆಗೆ ಹಚ್ಚುವುದರಿಂದ ತಲೆನೋವು ನಿವಾರಣೆ ಆಗುತ್ತದೆ.
ಈ ಮಾಹಿತಿ ಉಪಯುಕ್ತ ಎನಿಸಿದರೆ ನಿಮ್ಮ ಪರಿವಾರ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.. ಆರೋಗ್ಯಯುತ ಸಮಾಜಕ್ಕೆ ಶ್ರಮಿಸೋಣ ..