ಕರ್ನಾಟಕ ಯುನಿವರ್ಸಿಟಿಯ ಅಧೀನ ಶಾಲೆಗಳಲ್ಲಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ

ಕರ್ನಾಟಕ ಯುನಿವರ್ಸಿಟಿಯ ಅಧೀನದ ಮಾಧ್ಯಮಿಕ ಶಾಲೆಗಳಲ್ಲಿ ಅಸಿಸ್ಟಂಟ್ ಟೀಚರ್‌ಗಳ ಹುದ್ದೆಯ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು, ಅವಶ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿ ಒಳಪಡುವ ಮಾಧ್ಯಮಿಕ ಶಾಲೆಯಲ್ಲಿ ಖಾಲಿ ಇರುವ ಸಹಾಯಕ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು (ಸಂಗೀತ, ಶಿಕ್ಷಕರು, ಸಹಾಯಕ ಹೌಸ್ ಮಾಸ್ಟರ್ ಕಂ ಸಹಾಯಕ ಶಿಕ್ಷಕರು ಮತ್ತು ಸಹಾಯಕ ಹೌಸ್ ಮಾಸ್ಟರ್, ವಿವಿ ಪ್ರಾಯೋಗಿಕ) ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಖಾಲಿ ಇರುವ ಸಹಾಯಕ ಶಿಕ್ಷಕರು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವವರು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಮಾಹಿತಿಗಳು ಈ ಕೆಳಗಿನಂತಿವೆ.

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಂದೆ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ನೋಟಿಫಿಕೇಶನ್ ಸಹ ಒದಗಿಸಲಾಗಿದ್ದು, ಸರಿಯಾಗಿ ಮತ್ತೊಮ್ಮೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳ ವಿವರ

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಸಹಾಯಕ ಶಿಕ್ಷಕರು9
ಸಂಗೀತ ಶಿಕ್ಷಕರು1
ಸಹಾಯಕ ಹೌಸ್ ಮಾಸ್ಟರ್ ಕಂ ಸಹಾಯಕ ಶಿಕ್ಷಕ1
ಸಹಾಯಕ ಹೌಸ್ ಮಾಸ್ಟರ್1
ಸಹಾಯಕ ಶಿಕ್ಷಕರು (ಪ್ರಾಯೋಗಿಕ ಪ್ರಾಥಮಿಕ ಕನ್ನಡ ಶಾಲೆ 01 – 05ನೇ ತರಗತಿಯವರೆಗೆ)2

ವೇತನ ಶ್ರೇಣಿ

  • ಸಹಾಯಕ ಶಿಕ್ಷಕರು: ರೂಪಾಯಿ 33450/- ರಿಂದ 62600/-.
  • ಸಂಗೀತ ಶಿಕ್ಷಕರು : ರೂಪಾಯಿ 27650/- ರಿಂದ 52650/-.
  • ಸಹಾಯಕ ಹೌಸ್ ಮಾಸ್ಟರ್ ಕಂ ಸಹಾಯಕ ಶಿಕ್ಷಕ : ರೂಪಾಯಿ 33450 ರಿಂದ 62600/-.
  • ಸಹಾಯಕ ಹೌಸ್ ಮಾಸ್ಟರ್ : ರೂಪಾಯಿ 30350-58250.
  • ಸಹಾಯಕ ಶಿಕ್ಷಕರು (ಪ್ರಾಯೋಗಿಕ ಪ್ರಾಥಮಿಕ ಕನ್ನಡ ಶಾಲೆ 01 – 05ನೇ ತರಗತಿಯವರೆಗೆ): ರೂಪಾಯಿ 25,800 ರಿಂದ 51404/-.

ಇದನ್ನೂ ಓದಿರಿ: RailTel Recruitment 2023: ರೈಲ್ವೆ ಇಲಾಖೆಯಲ್ಲಿ ಡೆಪ್ಯುಟಿ ಮ್ಯಾನೇಜರ್ ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ

ಕರ್ನಾಟಕ ಯುನಿವರ್ಸಿಟಿಯ ಅಧೀನದ ಮಾಧ್ಯಮಿಕ ಶಾಲೆಗಳಲ್ಲಿ ಅಸಿಸ್ಟಂಟ್ ಟೀಚರ್‌ಗಳ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಯಸುವ ಆಸಕ್ತರು, ಬಿಎ, ಬಿ.ಇಡಿ, ಬಿ.ಪಿ.ಇಡಿ ಪಾಸ್ ಜತೆಗೆ ಟಿಇಟಿ ಅರ್ಹತೆ ಹೊಂದಿರಬೇಕು.

ವಯೋಮಿತಿ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 42 ವರ್ಷ ಗರಿಷ್ಠ ವಯೋಮಿತಿ ಮೀರಬಾರದು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ವಯೋಮಿತಿ ಮೀರಬಾರದು.
ಎಸ್‌ಸಿ / ಎಸ್‌ಟಿ / ಪ್ರವರ್ಗ-1/ ವಿಶೇಷ ಚೇತನವುಳ್ಳ ಅಭ್ಯರ್ಥಿಗಳಿಗೆ 47 ವರ್ಷ ಗರಿಷ್ಠ ವಯೋಮಿತಿ ಮೀರಬಾರದು.

ಅರ್ಜಿ ಶುಲ್ಕ

ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಯಸುವ ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.625.
ಇತರೆ ವರ್ಗಗಳ ಅಭ್ಯರ್ಥಿಗಳಿಗೆ ರೂ.1250.

ಕರ್ನಾಟಕ ಯುನಿವರ್ಸಿಟಿಯ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ www.kud.ac.in ಗೆ ಭೇಟಿ ನೀಡುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಗಳನ್ನು – ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇಲ್ಲಿಗೆ ದಿನಾಂಕ 18-11-2023 ರ ಸಾಯಂಕಾಲ 06-00 ಗಂಟೆಯ ಒಳಗಾಗಿ ಅರ್ಜಿಯನ್ನು ನೊಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್‌ ಮೂಲಕ ತಲುಪಿಸಬಹುದು.

ಇದನ್ನೂ ಓದಿರಿ: ಎಸ್‌ಎಸ್‌ಬಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ, ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಬೇಕಾದ ವಿಳಾಸ

ಕುಲಸಚಿವರು ,
ಸಿ.ಆ.ಸು.ವಿಭಾಗ,
ಕರ್ನಾಟಕ ವಿಶ್ವವಿದ್ಯಾಲಯ,
ಪಾವಟೆನಗರ, ಧಾರವಾಡ- 580003.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನ: 18/11/ 2023

LEAVE A REPLY

Please enter your comment!
Please enter your name here