Union Bank Recruitment 2022: ಯೂನಿಯನ್​ ಬ್ಯಾಂಕ್​ನಲ್ಲಿ 33 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India)ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಯೂನಿಯನ್ ಬ್ಯಾಂಕ್ ನಲ್ಲಿ 33 ಎಸ್ಟ್ರನಲ್ ಫ್ಯಾಕಲ್ಟಿ, ಇಂಡಸ್ಟ್ರಿ ಅಡ್ವೈಸರ್ಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಲ್ಲಿ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.

ಡಿಸೆಂಬರ್ 27, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಹೈದರಾಬಾದ್, ಬೆಂಗಳೂರಿನಲ್ಲಿ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಹುದ್ದೆಯ ಮಾಹಿತಿ

ಯುಎಲ್ಎ ಹೆಡ್ (ಡಿಜಿಟಲ್ ಟ್ರಾನ್ಸ್ಫರ್ಮೇಶನ್) 1
ಯುಎಲ್ಎ ಹೆಡ್ (ಸೇಲ್ಸ್ & ಮಾರ್ಕೆಟಿಂಗ್) 1
ಅಕಾಡೆಮಿಸಿಯನ್ಸ್ 4
ಇಂಡಸ್ಟ್ರಿ ಅಡ್ವೈಸರ್ಸ್ 9
ಎಸ್ಟ್ರನಲ್ ಫ್ಯಾಕಲ್ಟಿ 18

 

ವಿದ್ಯಾರ್ಹತೆ

ಯುಎಲ್ಎ ಹೆಡ್ (ಡಿಜಿಟಲ್ ಟ್ರಾನ್ಸ್ಫರ್ಮೇಶನ್) – ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ

ಯುಎಲ್ಎ ಹೆಡ್ (ಸೇಲ್ಸ್ & ಮಾರ್ಕೆಟಿಂಗ್) – ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ

ಅಕಾಡೆಮಿಸಿಯನ್ಸ್ – ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ

ಇಂಡಸ್ಟ್ರಿ ಅಡ್ವೈಸರ್ಸ್ – ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ

ಎಕ್ಸ್ಟರ್ನಲ್ ಫ್ಯಾಕಲ್ಟಿ – ಎಂ.ಫಿಲ್, ಸ್ನಾತಕೋತ್ತರ ಪದವಿ, ಪಿಎಚ್.ಡಿ

ಇದನ್ನೂ ಓದಿರಿ: IISc Recruitment 2022: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಯೋಮಿತಿ

ಯುಎಲ್ಎ ಹೆಡ್ (ಡಿಜಿಟಲ್ ಟ್ರಾನ್ಸ್ಫರ್ಮೇಶನ್) – 30 ರಿಂದ 60 ವರ್ಷ

ಯುಎಲ್ಎ ಹೆಡ್ (ಸೇಲ್ಸ್ & ಮಾರ್ಕೆಟಿಂಗ್)- 30 ರಿಂದ 60 ವರ್ಷ

ಅಕಾಡೆಮಿಸಿಯನ್ಸ್ – 28 ರಿಂದ 60 ವರ್ಷ

ಇಂಡಸ್ಟ್ರಿ ಅಡ್ವೈಸರ್ಸ್ -28 ರಿಂದ 60 ವರ್ಷ

ಎಸ್ಟ್ರನಲ್ ಫ್ಯಾಕಲ್ಟಿ – 28 ರಿಂದ 60 ವರ್ಷ

ಅರ್ಜಿ ಶುಲ್ಕ

ಎಸ್ಸಿ,ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು 150 ರೂಪಾಯಿಗಳನ್ನು ಮತ್ತು  ಒಬಿಸಿ, ಇಡಬ್ಲ್ಯೂಎಸ್, ಸಾಮಾನ್ಯ ವರ್ಗದವರು 750 ರೂಪಾಯಿಗಳನ್ನು ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ

ಮೊದಲಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶಾರ್ಟ್ಲಿಸ್ಟಿಂಗ್ ಮಾಡಲಾಗುವುದು. ನಂತರದಲ್ಲಿ ಲಿಖಿತ ಪರೀಕ್ಷೆ ನಡಸಲಾಗುವುದು. ಆನಂತರದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ವೇತನ ಶ್ರೇಣಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕನಿಷ್ಠ 25000/- ದಿಂದ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಯೂನಿಯನ್ ಬ್ಯಾಂಕ್ ನೇಮಕಾತಿ 2022 ಗೆ ಅರ್ಜಿ ಸಲ್ಲಿಸುವುದು ಹೇಗೆ ?

  • ಯೂನಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆ 2022 (Union Bank Recruitment 2022) ಅನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಲ್ಲಿ ನೀಡಲಾಗಿರುವ ಅರ್ಹತಾ ಮಾನದಂಡಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.
  • ನಂತರ ಯೂನಿಯನ್ ಬ್ಯಾಂಕ್ ನ ವೆಬ್ ಸೈಟ್ unionbankofindia.co.in ಗೆ ಭೇಟಿ ನೀಡಿ. ಅಥವಾ ನೇರವಾಗಿ ಕೆಳಗೆ ನೀಡಿರುವ ಜಾಬ್ ಅಪ್ಲೈ ಲಿಂಕ್ ಕ್ಲಿಕ್ ಮಾಡಿ.
  • ನಂತರ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಂದರೆ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಕೆಲಸದ ಅನುಭವವಿದ್ದರೆ ದಾಖಲೆಗಳು ಮತ್ತು ಇತರ ಅಗತ್ಯ ದಾಖಲಾತಿಗಳೊಂದಿಗೆ ಪೂರ್ಣಗೊಳಿಸಿ.
  • ನಂತರ ನಿಮ್ಮ ವರ್ಗಕ್ಕೆ ಸೂಚಿತವಾದ ಅರ್ಜಿ ಶುಲ್ಕವನ್ನು ಪಾವತಿಸಿ.
  • ಇದಾದ ಬಳಿಕ ನೀವು ಎಂಟರ್ ಮಾಡಿರುವ ಸಂಪೂರ್ಣ ಮಾಹಿತಿಗಳು ಸರಿಯಾಗಿವೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ. ಕೊನೆಯಲ್ಲಿ ಯೂನಿಯನ್ ಬ್ಯಾಂಕ್ ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಒತ್ತಿರಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 07/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27/12/2022

ಪ್ರಮುಖ ಲಿಂಕುಗಳು

ನೋಟಿಫಿಕೇಶನ್
ಅಧಿಕೃತ ವೆಬ್ ಸೈಟ್
ಅರ್ಜಿ ಸಲ್ಲಿಸಲು ಲಿಂಕ್

LEAVE A REPLY

Please enter your comment!
Please enter your name here