the-wing-commander-abhinandan-raised-the-mig-21-again
ANI News
ಆರು ತಿಂಗಳ ವಿಶ್ರಾಂತಿಯ ಬಳಿಕ ಸೋಮವಾರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಕೆಲಸಕ್ಕೆ ಹಾಜರಾದರು. ಈ ಸಂಧರ್ಭದಲ್ಲಿ ಪಠಾಣ್‌ಕೋಟ್ ವಾಯುಪಡೆ ನಿಲ್ದಾಣದಿಂದ ಹಿರಿಯ ಅಧಿಕಾರಿ ಧನೋವಾ ಮತ್ತು ಅಭಿನಂದನ್ ಅವರು ಮಿಗ್ -21 ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
the-wing-commander-abhinandan-raised-the-mig-21-again
ANI NEWS
ವಿಶೇಷವೆಂದರೆ, ಫೆಬ್ರವರಿ 27 ರಂದು ನಡೆದ ವಾಯು ದಾಳಿಯ ಸಮಯದಲ್ಲಿ, 36 ವರ್ಷದ ವಾಯುಪಡೆಯ ಪೈಲಟ್ ಅಭಿನಂದನ್ ಮಿಗ್ -21 ವಿಮಾನ ಪತನಗೊಂಡ ನಂತರ ಪಾಕಿಸ್ತಾನ ಸೇನೆಯ ಕೈಗೆ ಸಿಕ್ಕಿಬಿದ್ದಿದ್ದರು. ಅಭಿನಂದನ್ ತನ್ನ ಮಿಗ್ -21 ಬೀಳುವ ಮೊದಲು ಪಾಕಿಸ್ತಾನದ ಸುಧಾರಿತ ಯುದ್ಧ ವಿಮಾನ ಎಫ್ -16 ಅನ್ನು ಹೊಡೆದುರುಳಿಸಿ ಸಾಹಸ ಮೆರೆದಿದ್ದರು. ಅಭಿನಂದರನ್ನು ಮಾರ್ಚ್ 1 ರಂದು ಪಾಕಿಸ್ತಾನ ಬಿಡುಗಡೆ ಮಾಡಿತು, ಆದರೆ ವಿಮಾನದಿಂದ ಹಾರಿ ಉಂಟಾದ ಗಾಯದಿಂದಾಗಿ ಸುಮಾರು ಆರು ತಿಂಗಳ ಕಾಲ ವಿಮಾನ ಹಾರಾಟದ ಜವಾಬ್ದಾರಿಯಿಂದ ಹೊರಗಿಡಲಾಗಿತ್ತು. ವೈಮಾನಿಕ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಎಫ್ -16 ವಿಮಾನವನ್ನು ಹೊಡೆದುರುಳಿಸಿದ ಸಾಹಸಕ್ಕೆ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ವೀರ್ ಚಕ್ರ’ ಅವರಿಗೆ ನೀಡಿ ಗೌರವಿಸಲಾಯಿತು.
ಇದನ್ನೂ ಓದಿರಿ: ಚಂದ್ರಯಾನ್ -2: ಆರ್ಬಿಟರ್ನಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್

SPONSORED CONTENT

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here