The state government has allowed school enrollment till August 16

ಬೆಂಗಳೂರು: ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಅಕ್ಟೋಬರ್ 16 ರ ವರೆಗೆ ದಾಖಲಾತಿಗೆ ಅವಕಾಶ ನೀಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಮಕ್ಕಳ ದಾಖಲಾತಿಗೆ ಸೆಪ್ಟೆಂಬರ್ 30 ರ ವರೆಗೆ ಕಾಲಾವಕಾಶವನ್ನು ಈ ಹಿಂದೆ ನೀಡಿತ್ತು. ಆದರೆ ದಾಖಲಾತಿಯ ಪ್ರಮಾಣ ಕಡಿಮೆಯಾದ ಕಾರಣಗಳಿಂದ ಶಿಕ್ಷಣ ಸಂಸ್ಥೆಗಳ ಮನವಿಯ ಮೇರೆಗೆ ಕಾಲಾವಕಾಶವನ್ನು ಹೆಚ್ಚಿಸಿ ಅಕ್ಟೋಬರ್ 16 ರ ವರೆಗೆ ವಿಸ್ತರಣೆ ಮಾಡಿಕೊಟ್ಟಿದೆ.

ಈ ಮೂಲಕ ದಾಖಲಾತಿಯಿಂದ ಹೊರಗುಳಿದಿದ್ದ ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದ್ದು, ಅನೇಕ ಕಾರಣಗಳಿಂದ ಮಕ್ಕಳ ಶಾಲಾ ದಾಖಲಾತಿಯನ್ನು ಮಾಡಿಸಲು ಸಾಧ್ಯವಾಗದ ಪೋಷಕರಿಗೆ ಉಪಯೋಗವಾಗಲಿದೆ. ಇದರಿಂದಾಗಿ ಕೊರೋನಾ ಸಂಕಷ್ಟದ ಈ ಸಮಯದಲ್ಲಿಯೂ ಮಕ್ಕಳ ವಿದ್ಯಾಭ್ಯಾಸ ಯಾವುದೇ ಅಡೆತಡೆಯಿಲ್ಲದೆ ಸಾಗಲು ಸಾಧ್ಯವಾಗಲಿದೆ.

 The state government has allowed school enrollment till August 16

LEAVE A REPLY

Please enter your comment!
Please enter your name here