ಕೊಂಕಣ ರೈಲ್ವೆ ಕೊರ್ಪೊರೇಷನ್ ಲಿಮಿಟೆಡ್ (KRCL) ನಲ್ಲಿ ಕಾಲಿ ಇರುವ ವಿವಿಧ 12 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಸಲ್ಲಿಸಲು ಕೊನೆಯ ದಿನಾಂಕ 01 ಜುಲೈ 2021.
ಹುದ್ದೆಗಳ ವಿವರ:
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ (ಫೈನಾನ್ಸ್) – 1
ಅಸಿಸ್ಟಂಟ್ ಅಕೌಂಟ್ಸ್ ಆಫೀಸರ್ – 2
ಸೆಕ್ಷನ್ ಆಫೀಸರ್ – 2
ಅಕೌಂಟ್ಸ್ ಅಸಿಸ್ಟಂಟ್ – 7
ವಿದ್ಯಾರ್ಹತೆ:
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ ಮತ್ತು ಅಸಿಸ್ಟಂಟ್ ಅಕೌಂಟ್ಸ್ ಆಫೀಸರ್ ಹುದ್ದೆಗೆ ಸಿಎಂಎ / ಸಿಎ ಮಾಡಿರಬೇಕು. ಸೆಕ್ಷನ್ ಆಫೀಸರ್ ಮತ್ತು ಅಕೌಂಟ್ಸ್ ಅಸಿಸ್ಟಂಟ್ ಹುದ್ದೆಗಳಿಗೆ ಬಿ.ಕಾಂ ಉತ್ತೀರ್ಣರಾಗಿರಲೇಬೇಕು ಎಂದು ತಿಳಿಸಲಾಗಿದೆ.
ವಯೋಮಿತಿ:
ಅರ್ಜಿಸಲ್ಲಿಸಲು ಅಭ್ಯರ್ಥಿಗಳಿಗೆ 2021 ರ ಜುಲೈ 01 ಕ್ಕೆ 45 ವರ್ಷಗಳು ಮೀರಿರಬಾರದು. ಇದರೊಂದಿಗೆ ಕನಿಷ್ಠ 3 ರಿಂದ 7 ವರ್ಷಗಳವರೆಗೆ ಕಾರ್ಯಾನುಭವವನ್ನು ಹೊಂದಿರಬೇಕೆಂದು ಹೇಳಲಾಗಿದೆ.
ವೇತನ ಶ್ರೇಣಿ :
ರೂಪಾಯಿ 34,200 ರಿಂದ 92,200 ರ ವರೆಗೆ ವೇತನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ :
ನೋಟಿಫಿಕೇಶನ್ನಲ್ಲಿ ನೀಡಲಾದ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಪಿಡಿಎಫ್ಗೆ ಬದಲಾವಣೆ ಮಾಡಿ ಇ-ಮೇಲ್ ವಿಳಾಸ helpdskrectcell@krcl.co.in ಗೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ :
01 ಜುಲೈ 2021
ಹೆಚ್ಚಿನ ಮಾಹಿತಿಗಾಗಿ ಜಾಬ್ ನೋಟಿಫಿಕೇಶನ್ ಅಥವಾ ಕೊಂಕಣ ರೈಲ್ವೆ ವೆಬ್ ಸೈಟ್ ಗೆ ಭೇಟಿನೀಡಿ ಪರಿಶೀಲಿಸಿ.
ಇದನ್ನೂ ಓದಿರಿ: ಕ್ಯಾನ್ಸರ್ ಬರದಂತೆ ಸ್ತನಗಳ ಆರೈಕೆ ಮಾಡುವುದು ಹೇಗೆ ? ತಿಳಿಯಿರಿ