zika-virus-cases-in-kerala-karnataka-issues-guidelines-to-prevent-zika-virus-in-state

ಬೆಂಗಳೂರು: ಕೇರಳದಲ್ಲಿ ಝೀಕಾ (zika virus) ವೈರಸ್ ಹಾವಳಿ ಹೆಚ್ಚಾಗಿದ್ದು, ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಸೂಚನೆಯನ್ನು ನೀಡಿದೆ. ಕೇರಳ- ಕರ್ನಾಟಕ ಗಡಿಭಾಗದ ಚೆಕ್ಪೋಸ್ಟ್ ನಲ್ಲಿ ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ.

ಕೇರಳದಲ್ಲಿ ಸುಮಾರು 15 ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯಕ್ಕೆ ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಜಿಲ್ಲೆಯ ಗುಡ್ಲುಪೇಟೆ ತಾಲೂಕಿನ ಮೂಲೆಹೊಳೆ ಅರಣ್ಯ ಪ್ರದೇಶ ಕೇರಳ ಗಡಿಗೆ ಹೊಂದಿಕೊಂಡಿರುವುದರಿಂದ ಮೂಲೆಹೊಳೆ ಚೆಕ್ಪೋಸ್ಟ್ ನಲ್ಲಿ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಕೇರಳದಿಂದ ಬರುವವರು 48 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಅವಶ್ಯವಾಗಿದೆ.

ಏನಿದು ಝೀಕಾ (zika virus) ವೈರಸ್ ಸೋಂಕು ?

ಝೀಕಾ (zika virus) ವೈರಸ್ ಈಡಿಸ್ ಈಜಿಪ್ಟ್ ಸೊಳ್ಳೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದಲ್ಲದೇ ರಕ್ತ ವರ್ಗಾವಣೆ, ಲೈಂಗಿಕ ಕ್ರಿಯೆ, ದೇಹದ ದ್ರವಗಳ ವಿನಿಮಯದಿಂದ ಹರಡುತ್ತದೆ ಎಂದು ಹೇಳಲಾಗಿದೆ. ಸಣ್ಣ ಜ್ವರ, ಸಣ್ಣ ಗುಳ್ಳೆಗಳು, ಕಣ್ಣಿನಲ್ಲಿ ನೀರು ಸೋರುವುದು ಮತ್ತು ಸಂಧಿವಾತ ಇವು ಝೀಕಾ ವೈರಸ್ ನಾ ಲಕ್ಷಣವಾಗಿದೆ. ಇದು ಮಾರಣಾಂತಿಕ ಕಾಯಿಲೆಯಲ್ಲದಿದ್ದರೂ ಗರ್ಭಿಣಿಯರು, ಅಸ್ವಸ್ಥರು, ಕಡಿಮೆ ರೋಗನಿರೋಧಕತೆಯನ್ನು ಹೊಂದಿರುವವರು ತೊಂದರೆಗೆ ಉಂಟಾಗಬಹುದು. ದುರ್ಬಲರು ಈ ವೈರಸ್ ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಝೀಕಾ (zika virus) ವೈರಸ್ ನ್ನು ನಿಯಂತ್ರಿಸುವುದು ಹೇಗೆ ?

ಈಗಾಗಲೇ ಡೆಂಗ್ಯೂ, ಚಿಕನ್ ಗುನ್ಯಾ ಸೋಂಕು ಹರಡದಂತೆ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ಈಗಲೂ ಅನುಸರಿಸಬೇಕು. ಮನೆಯ ಸುತ್ತ ಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸ್ವಚ್ಛತೆ ಕೈಗೊಳ್ಳಿ. ಈಗ ಮಳೆಗಾಲವಾಗಿದ್ದರಿಂದ ಅಲ್ಲಲ್ಲಿ ನೀರು ಶೇಖರಣೆಯಾಗುತ್ತದೆ, ಅವುಗಳನ್ನು ತಡೆಗಟ್ಟಿ. ಜ್ವರ ತಲೆನೋವು, ಮೈಕೈನೋವು ಬಂದವರು ತಕ್ಷಣ ವೈದ್ಯರನ್ನು ಬೇಟಿಮಾಡಿ. ಸಂಜೆ 6 ಗಂಟೆಯ ನಂತರ ಮನೆಯ ಕಿಟಕಿಗಳನ್ನು ಮುಚ್ಚಿ 8 ರ ನಂತರ ತೆರೆಯಿರಿ, ಇದರಿಂದ ಮನೆಯೊಳಗೇ ಸೊಳ್ಳೆಗಳ ಪ್ರವೇಶ ಕಡಿಮೆಯಾಗುತ್ತದೆ. ಮಲಗುವಾಗ ಸೊಳ್ಳೆಪದರದೆಗಳನ್ನು ಬಳಸುವುದು ಉತ್ತಮ.

ಝೀಕಾ (zika virus) ವೈರಸ್ ನಿಯಂತ್ರಣಕ್ಕೆ ಸರಕಾರದ ಸುತ್ತೋಲೆ:

ಪ್ರಮುಖವಾಗಿ ಝೀಕಾ ವೈರಸ್ ಸೊಳ್ಳೆಗಳ ಮೂಲಕ ಹರಡುವುದರಿಂದ ಸೊಳ್ಳೆಗಳ ನಿರ್ಮೂಲನೆಗೆ ಹೆಚ್ಚಿನ ಒಟ್ಟು ನೀಡಬೇಕು. ಇದಲ್ಲದೇ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪರಣೆ, ಚರಂಡಿಗಳ ಸ್ವಚ್ಛತೆ, ಫಾಗಿಂಗ್ ಮಾಡುವ ಮೂಲಕ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಆಡಳಿತಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

ಇದನ್ನೂ ಓದಿರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಹೈಕೋರ್ಟ್

LEAVE A REPLY

Please enter your comment!
Please enter your name here