National Youth Festival: ಯುವಕರಿಗೆ ನಾಧನೆ ಮಾಡಲು ಇದು ಸಕಾಲ-ಪ್ರಧಾನಿ ನರೇಂದ್ರ ಮೋದಿ

yuva-shakti-indias-driving-force-says-pm-modi-1

ಹುಬ್ಬಳ್ಳಿ: ಯುವ ಭಾರತ ಮುಂದಿನ ಭವಿಷ್ಯವನ್ನು ನಿರ್ಮಾಣ ಮಾಡುವತ್ತ ಗಮನವನ್ನು ಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹುಬ್ಬಳ್ಳಿಯ ರಾಷ್ಟ್ರೀಯ ಯುವಜನೋತ್ಸವದಲ್ಲಿ ಹೇಳಿದ್ದಾರೆ.

ಭಾರತವು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಯುವಜನತೆಯೇ ಕಾರಣ. ಸ್ವಾಮಿ ವಿವೇಕಾನಂದರು ಒಂದು ಮಾತನ್ನು ಹೇಳಿದ್ದರು, ಸಂಘಟಿತ ಯುವ ಶಕ್ತಿಯು ಎಲ್ಲಿರುತ್ತದೆಯೋ ಅಲ್ಲಿ ಇಂತಹದೇ ಸಾಧನೆಯನ್ನು ಬೇಕಾದರೂ ಮಾಡಲು ಸಾಧ್ಯ ಎಂದು.

ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ, ಮೂರೂ ಸಾವಿರಮಠ, ಸಿದ್ಧಾರೂಢ ಮಠ ಇಂತಹ ಸಾವಿರ ಮಠಗಳ ನಾಡಿಗೆ ನನ್ನ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಮೋದಿ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ, ಪಂಡಿತ ಬಸವರಾಜ ರಾಜಗುರು, ಪಂಡಿತ ಮಲ್ಲಿಕಾರ್ಜುನ್ ಮನ್ಸೂರ್, ಭಾರತರತ್ನ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅವರ ಸೇವೆಯನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ.

ಇದನ್ನೂ ಓದಿರಿ: ಆಂಧ್ರದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಲಿದ್ದ ‘ವಂದೇ ಭಾರತ್ ರೈಲಿ’ನ ಮೇಲೆ ಕಲ್ಲು ತೂರಾಟ

ಸಿದ್ಧೇಶ್ವರ ಶ್ರೀಗಳನ್ನು ನೆನಪಿಸಿಕೊಳ್ಳುತ್ತಾ, ಸ್ವಾಮೀಜಿಯವರಿಗೆ ಶೃದ್ಧಾಂಜಲಿ ಸಲ್ಲಿಸಿದರು. ಕರ್ನಾಟಕಕಕ್ಕೂ ಹಾಗು ಸ್ವಾಮಿ ವಿವೇಕಾನಂದರಿಗೂ ಅವಿನಾಭಾವ ಸಂಬಂಧವಿದೆ. ಅವರು ಈ ನಾಡಿನಲ್ಲಿ ಸಂಚರಿಸಿದ್ದಾರೆ ಅಲ್ಲದೇ ಅವರ ಶಿಕಾಗೋ ಪ್ರಯಾಣಕ್ಕೆ ಮೈಸೂರಿನ ಅರಸರು ಸಹಾಯ ಮಾಡಿದವರಲ್ಲಿ ಒಬ್ಬರಾಗಿದ್ದರು ಎಂದು ಹೇಳಿದರು. ಇದೇ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಈ ನೆಲದ ವಿವಿಧ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯಲು ಮರೆಯಲಿಲ್ಲ.

ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿಯೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯುವಕರಿಗೆ ದೇಶದಲ್ಲಿ ರನ್ ವೇ ಸಿದ್ಧಪಡಿಸಿದ್ದೇವೆ. ನೀವು ಟೇಕಾಫ್ ಆಗುವುದೊಂದೇ ಬಾಕಿಯಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಇದನ್ನೂ ಓದಿರಿ: ಆಂಧ್ರದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಲಿದ್ದ ‘ವಂದೇ ಭಾರತ್ ರೈಲಿ’ನ ಮೇಲೆ ಕಲ್ಲು ತೂರಾಟ

ಭಾರತವು ಎಲ್ಲ ರಂಗಗಳಲ್ಲಿಯೂ ಸಕಾರಾತ್ಮಕ ಅಭಿವೃದ್ಧಿಯನ್ನು ಕಾಣುತ್ತಿದ್ದು, ಸ್ಟಾರ್ಟ್ ಅಪ್ ಗಳಿಗೆ ಹಣ ಹರಿದು ಬರುತ್ತಿವೆ. ದೇಶವು ದೊಡ್ಡ ಆರ್ಥಿಕತೆಯಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತವು ಜಾಗತಿಕವಾಗಿ 5 ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಮುಂದಿನ ದಿನದಲ್ಲಿ ಮೊದಲ 3 ಸ್ಥಾನಗಳಲ್ಲಿ ಇರಲು ನಾವು ಬಯಸುತ್ತೇವೆ ಎಂದು ಹೇಳಿದರು.

ಮಹಿಳಾ ಶಕ್ತಿ ರಾಷ್ಟ್ರಶಕ್ತಿಯನ್ನು ಜಾಗೃತವಾಗಿ ಇಟ್ಟಿದೆ ಎಂದೂ ಮೋದಿ ಹೇಳಿದ್ದು ಭಾರತದ ಮಹಿಳೆಯರು ಫೈಟರ್ ಜೆಟ್ ಹಾರಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನದಲ್ಲಿ ನಮ್ಮ ಹೆಣ್ಣುಮಕ್ಕಳು ಉನ್ನತ ಸಾಧನೆ ಮಾಡಿದ್ದಾರೆ. 21ನೇಯ ಶತಮಾನವನ್ನು ಭಾರತದ ಶತಮಾನ ಮಾಡಬೇಕಿದೆ ಎಂದು ಮೋದಿ ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here