ರಾಮ ಮಂದಿರವನ್ನು ಅಯೋಧ್ಯೆಯಲ್ಲಿ ಮತ್ತೆ ನಿರ್ಮಾಣ ಮಾಡಬೇಕೆಂಬುದು ಪ್ರತಿಯೊಬ್ಬ ಹಿಂದೂವಿನ ಆಶಯವಾಗಿದೆ. ಆದರೆ ಇದಕ್ಕೆ ತಡೆಯಾಗಿರುವುದು ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯದೇ ಇರುವುದು. ಈ ವಿವಾದದ ವಿಚಾರಣೆಯನ್ನು ನ್ಯಾಯಾಲಯ ಹಲವು ವರ್ಷಗಳಿಂದ ಪೂರ್ಣಗೊಳಿಸದೆ ಮುಂದೂಡುತ್ತಲೇ ಬಂದಿದೆ. ಇದು ಹಲವಾರು ಭಕ್ತರ ಬೇಸರಕ್ಕೆ ಕಾರಣವಾಗಿದೆ. ಕೇಂದ್ರದಲ್ಲಿ ಜನಪರ ಸರಕಾರ ಇರುವ ಕಾರಣ ಈ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತಂದು ಮೋದಿಯವರೇ ಪ್ರಾರಂಬಿಸಬೇಕು ಎಂಬ ಒತ್ತಡ ಸರಕಾರದ ಮೇಲೆ ಹೇರಲಾಗುತ್ತಿದೆ.

ಈ ಕುರಿತು ಇಂಡಿಯಾ ಟಿವಿ ವರದಿಗಾರರ ಜೊತೆ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಸುಪ್ರೀಕೋರ್ಟ್ ತನ್ನ ಬಲವನ್ನು ಉಪಯೋಗಿಸಿ ನಿರ್ಧಾರ ತೆಗೆದುಕೊಂಡು ಹಿಂದೂಗಳ ಭಾವನೆಯನ್ನು ಎತ್ತಿ ಹಿಡಿಯಬೇಕಿದೆ. ಆದರೆ ಈ ವಿಚಾರದಲ್ಲಿ ಸುಪ್ರೀಕೋರ್ಟ್ ಹಿಂದೆ ಬಿದ್ದಿದ್ದು, ವಿವಾದವನ್ನು ಅನಗತ್ಯವಾಗಿ ಎಳೆಯಲಾಗುತ್ತಿದೆ. ಈ ವಿವಾದವನ್ನು ಬಗೆಹರಿಸಿ ತೀರ್ಪನ್ನು ಬೇಗ ಪ್ರಕಟಿಸಬೇಕೆಂದು ನಾನೂ ಕೂಡಾ ಸುಪ್ರೀಕೋರ್ಟ್ ಬಳಿಯಲ್ಲಿ ಮನವಿ ಮಾಡುತ್ತೇನೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಈ ವಿವಾದವನ್ನು ನಮಗೆ ಒಪ್ಪಿಸಲಿ. ಕೇವಲ 24 ಗಂಟೆಗಳಲ್ಲಿ ಬಗೆಹರಿಸಿ ಮುಗಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿರಿ : ಮೈನಸ್ 30 ಡಿಗ್ರಿ ಚಳಿಯಲ್ಲಿಯೂ ಗಣರಾಜ್ಯೋತ್ಸವ ಆಚರಿಸಿದ ಯೋಧರು..!

ಅಯೋಧ್ಯೆಯ ರಾಮಮಂದಿರದ ತೀರ್ಪನ್ನು ಸುಪ್ರಿಂಕೋರ್ಟ್ ಬೇಗನೆ ಬಗೆಹರಿಸಬೇಕು ಇಲ್ಲದಿದ್ದರೆ ಜನತೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇರುವ ಅಪಾರವಾದ ನಭಿಕೆಗೆ ಚ್ಯುತಿ ಬರುತ್ತದೆ. ತೀರ್ಪು ಬಂದು ಬಹುಬೇಗ ರಾಮಮಂಧಿರ ನಿರ್ಮಾಣವಾಗುವಂತಾಗಲಿ, ಅಪಾರ ರಾಮ ಭಕ್ತರ ಆಸೆ ನೆರವೇರುವಂತಾಗಲಿ ಎಂದು ಹರಸಿದರು. ಅಲ್ಲದೇ ಜನತೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗದಂತೆ
ಸುಪ್ರಿಂಕೋರ್ಟ್ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿರಿ : ಹುತಾತ್ಮ ವೀರ ಯೋಧರ ಕುಟುಂಬಗಳಿಗೆ ನೀವೂ ಸಹಾಯ ಮಾಡಿ..!

LEAVE A REPLY

Please enter your comment!
Please enter your name here