ಬೆಂಗಳೂರು: ಕೊರೊನಾ ಕಾರಣಗಳಿಂದ ಹಲವು ಶಾಸಕರು‌ ಸದನಕ್ಕೆ‌ ಹಾಜರಾಗದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದರು. ವಿಧಾನಸಭೆಯಲ್ಲಿ ಇಂದು‌ ವಿಶ್ವಾಸ ಮತವನ್ನು ಗೆಲ್ಲುವ ಮೂಲಕ‌ ತಮ್ಮ ಸಾಮರ್ಥ್ಯವನ್ನು ಯಡಿಯೂರಪ್ಪ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಸರಕಾರ ಕೊರೊನಾ ಸಮಯದಲ್ಲಿ ರಾಜ್ಯದ ಜನತೆಗೆ ಸರಿಯಾಗಿ ಸಹಕರಿಸಿಲ್ಲ. ಈ ಸರಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಆರೋಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅವಿಶ್ವಾಸ ನಿರ್ಣಯವನ್ನು ಕೈಗೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಧ್ವನಿ ಮತಕ್ಕೆ ಹಾಕಿದರು. ಆಡಳಿತ ಪಕ್ಷದ ಪರವಾಗಿ ಅಗತ್ಯ ಮತಗಳು ಚಲಾವಣೆಗೊಂಡಿದ್ದು, ಮುಖ್ಯಮಂತ್ರಿಗಳು ಸುಲಭವಾಗಿ ಬಹುಮತವನ್ನು ಸಾಬೀತು ಮಾಡಿದ್ದಾರೆ.

ಈ ಮೂಲಕ ಸುಲಭವಾಗಿ ಬಹುಮತವನ್ನು ಸಾಬೀತು ಮಾಡಿರುವ ಬಿ ಎಸ್ ಯಡಿಯೂರಪ್ಪ ತಮ್ಮ ಸರಕಾರವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ರೀತಿಯಾಗಿ ಅವಿಶ್ವಾಸ ಮಂಡಿಸಿದ ವಿಪಕ್ಷಗಳಿಗೆ ಮುಕಭಂಗ ಉಂಟಾದಂತಾಗಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here