
ಸ್ಯಾಂಡಲ್ವುಡ್ನ ಜನಪ್ರೀಯ ತಾರಾಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ವಯಕ್ತಿಕ ಜೀವನದಲ್ಲಿ ಇಂದು ಅತ್ಯಂತ ಪ್ರಮುಖವಾದ ದಿನವಾಗಿದೆ. ಅದೇನು ವಿಶೇಷ ಅಂತ ನೋಡತಾ ಇದೀರಾ ? ಹಾಗಾದರೆ ಸಂಪೂರ್ಣ ವಿಷಯವನ್ನು ತಿಳಿಯಲು ಮುಂದೆ ಓದಿ..
ಅಕ್ಟೋಬರ್ 31 ರಂದು ಯಶ್ ಮತ್ತು ರಾಧಿಕಾ ಅವರ ಎರಡನೇ ಮಗು ಯಥರ್ವ್ ಹುಟ್ಟಿದ ದಿನ. ಇಂದು ಯಥರ್ವ್ನನ ಮೊದಲನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಯಶ್ ಪರಿವಾರ ಇದ್ದು, ಈ ಕುರಿತು ತಾರಾಜೋಡಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ಯಶ್ ಅವರು ತಮ್ಮ ಇಸ್ಟಾಗ್ರಾಮ್ ನಲ್ಲಿ “ಜನ್ಮದಿನದ ಶುಭಾಶಯಗಳು ನನ್ನ ಪುಟ್ಟ ಮರಿ” ಎಂದು ಪುತ್ರ ಯಥರ್ವ್ ನ ಕ್ಯೂಟ್ ಫೋಟೋ ಹಾಕಿ ಮೊದಲ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.
ಇದೇ ರೀತಿಯಲ್ಲಿ ತಮ್ಮ ಮಗನೊಂದಿಗಿನ ಹಲವು ಚಿತ್ರಗಳನ್ನು ಒಂದೆಡೆ ಹಾಕಿ “ಹುಟ್ಟುಹಬ್ಬ ಶುಭಾಶಯಗಳು ನನ್ನ ಪ್ರೀತಿಯ ಮಗನೆ. ಯಾವಾಗಲು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಜನ್ಮದಿನದ ಶುಭಾಶಯವನ್ನು ರಾಧಿಕಾ ಪಂಡಿತ್ ಅವರು ವಿಶ್ ಮಾಡಿದ್ದಾರೆ.
View this post on Instagram
Happy birthday to the one who will always, forever be my baby boy. Love u ❤