ಯಕ್ಷಗಾನ ಕಲಾವಿದ ತಿಮ್ಮಪ್ಪ ಭಾಗವತರು ಕಾರು ಅಪಘಾತದಲ್ಲಿ ನಿಧಾನ

Yakshagana artiste Thimmappa Bhagavatar no more

ಉತ್ತರ ಕನ್ನಡ: ಯಕ್ಷಗಾನ ಭಾಗವತಿಗೆ ಹಾಗೂ ಸಂಗೀತದಲ್ಲಿ ಅಪಾರ ಜ್ಞಾನ ಹೊಂದಿದ್ದ ತಾಲೂಕಿನ ತಿಮ್ಮಪ್ಪ ಭಾಗವತ ಬಾಳೆಹದ್ದ (59) ಎರಡು ಕಾರುಗಳ ನಡುವಿನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ತಾಲೂಕಿನ ಶಿರಸಿ – ಯಲ್ಲಾಪುರ ರಾಜ್ಯಹೆದ್ದಾರಿಯ ಹಿತ್ಲಳ್ಳಿ ಕ್ರಾಸ್ ಬಳಿ ಅವರಿದ್ದ ಕಾರಿಗೆ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಅವರನ್ನು ತಕ್ಷಣ ಶಿರಸಿಯ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಮಧ್ಯರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಯಕ್ಷಗಾನ ಮತ್ತು ರಾಗಗಳಲ್ಲಿ ವಿಶೇಷ ಪರಿಣಿತರಾಗಿದ್ದ ಕಲಾವಿದನನ್ನು ಕಳೆದುಕೊಂಡು ಯಕ್ಷಲೋಕ ತುಂಬಲಾರದ ನಷ್ಟ ಅನುಭವಿಸಿದೆ. ಪ್ರಸಿದ್ಧ ಭಾಗವತರಾಗಿದ್ದ ತಂದೆ ಕೃಷ್ಣ ಭಾಗವತರ ಬಳಿ ಭಾಗವತಿಗೆ ಕಲಿತ ಇವರು, ಶ್ರೀಪಾದ ಹೆಗಡೆ ಕಪ್ಲಿ ಇವರ ಬಳಿಯಲ್ಲಿ ಸಂಗೀತ ಕಲಿತಿದ್ದರು.

ಇದನ್ನೂ ಓದಿರಿ: ಮಂಗಳೂರು ಕುಕ್ಕರ್‌ ಸ್ಫೋಟ: ಶಾರಿಕ್‌ ನನ್ನು ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ -ಡಿಕೆಶಿ ಪ್ರಶ್ನೆ

ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದ ಇವರು ಸೋಂದಾದ ಯಕ್ಷಗಾನ ಬಳಗದಲ್ಲಿ ಗುರುತಿಸಿಕೊಂಡಿದ್ದರು.ರಂಗಭೂಮಿಗೆ ಸಂಗೀತ ನೀಡುತ್ತಿದ್ದ ಇವರು ರಂಗಾಯಣದ ಮೂಲಕ ಖೈದಿಗಳಿಗೆ ನಾಟಕ ಕಲಿಸುವ ತಂಡದಲ್ಲಿ ಸಕ್ರಿಯರಾಗಿದ್ದರು.

ಮೃತರು ತಂದೆ, ತಾಯಿ, ಓರ್ವ ಪುತ್ರ ಮತ್ತು ಪುತ್ರಿ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಯಕ್ಷಲೋಕ ಇವರ ದಾರುಣ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಶಾರೀಖ್ ಕುರಿತು ಡಿಕೆಶಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ 

LEAVE A REPLY

Please enter your comment!
Please enter your name here