ಮತ್ತೆ ಕ್ಸಿ ಜಿನ್‌ ಪಿಂಗ್‌ಗೆ ಚೀನಾದ ಚುಕ್ಕಾಣಿ, ಸತತ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಕಮ್ಯುನಿಸ್ಟ್‌ ನಾಯಕ

xi-jinping-s-third-term-world-needs-china-said-jinping-after-securing-historic-third-term

ಬೀಜಿಂಗ್‌: ಚೀನಾದ ನೂತನ ಅಧ್ಯಕ್ಷರಾಗಿ ಸತತವಾಗಿ ಮೂರನೇ ಬಾರಿ ಕ್ಸಿ ಜಿನ್‌ಪಿಂಗ್‌ (Xi Jin ping) ಆಯ್ಕೆಯಾಗಿದ್ದಾರೆ. ಮಾವೋ ಝೆಡಾಂಗ್‌ ಬಳಿಕ ಚೀನಾದ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಈ ಮೂಲಕ ಹೊರಹೊಮ್ಮಿದ್ದಾರೆ.

ಚೀನಾದ ಕಮ್ಯುನಿಸ್ಟ್‌ ಪಕ್ಷದ ಸಂಸ್ಥಾಪಕರಾದ ಮಾವೋ ಝೆಡಾಂಗ್‌ ನಂತರದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿರುವ ಕ್ಸಿ ಜಿನ್‌ಪಿಂಗ್‌ ಅವರ ಮರು ಆಯ್ಕೆಯು ಐತಿಹಾಸಿಕ ದಾಖಲೆಯಾಗಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ದಾಖಲೆಯ ಮೂರನೇ ಅವಧಿಗೆ ಇಂದು ಆಯ್ಕೆಯಾಗಿದ್ದಾರೆ. ನಿವೃತ್ತಿಯ ವಯಸ್ಸಿನ ಮಿತಿ 68 ವರ್ಷ ಆಗಿದ್ದು, ಕ್ಸಿ ಈಗಾಗಲೇ 69 ವರ್ಷ ಪೂರೈಸಿದ್ದಾರೆ. ನಿವೃತ್ತಿಯ ವಯಸ್ಸು ಮೀರಿದ್ದರೂ ಕ್ಸಿ ಜಿನ್ ಪಿಂಗ್ ಆಯ್ಕೆಯು ಆಶ್ಚರ್ಯವನ್ನು ಉಂಟುಮಾಡುತ್ತದೆ.

ಮೂರನೆಯ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿ,”ಜಗತ್ತಿನ ನೆರವು ಇಲ್ಲದೆ ಚೀನಾದ ಅಭಿವೃದ್ಧಿ ಸಾಧ್ಯವಿಲ್ಲ ಹಾಗೆಯೇ ಜಗತ್ತಿಗೂ ಚೀನಾದ ಅವಶ್ಯಕತೆಯಿದೆ. ಸುಧಾರಣೆ ಮತ್ತು ಮುಕ್ತತೆ ಕಡೆಗೆ ತೆರೆದುಕೊಂಡ ಸುಮಾರು 40 ವರ್ಷಗಳ ಸತತ ಪ್ರಯತ್ನದ ಬಳಿಕ ನಾವು ತ್ವರಿತ ಆರ್ಥಿಕ ಪ್ರಗತಿ ಮತ್ತು ದೀರ್ಘಸಮಯದ ಸಾಮಾಜಿಕ ಸ್ಥಿರತೆಗಳೆಂಬ ಎರಡು ಪವಾಡಗಳನ್ನು ಸೃಷ್ಟಿಸಿದ್ದೇವೆʼʼ ಎಂದು ಅವರು ಹೇಳಿದ್ದಾರೆ.

ಚೀನಾದಲ್ಲಿ ಈ ಮೊದಲು ಒಬ್ಬ ಅಧ್ಯಕ್ಷರು ಎರಡು ಬಾರಿಗಿಂತ ಹೆಚ್ಚು ಅಧಿಕಾರವಾದಿಯನ್ನು ಮುಂದುವರೆಸಲು ಅವಕಾಶ ಇರಲಿಲ್ಲ. ಆದರೆ, ಈ ನಿಯಮಯಕ್ಕೆ ಕ್ಸಿ ಜಿನ್‌ಪಿಂಗ್‌ 2018 ರಲ್ಲಿ ತಿದ್ದುಪಡಿಯನ್ನು ಮಾಡಿದ್ದರು. ಈ ಮೂಲಕ ಮೂರನೇ ಅವಧಿಗೆ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾಗುವ ಇವರ ಹಾದಿಯು ಸಲೀಸಾಗಿದೆ.

LEAVE A REPLY

Please enter your comment!
Please enter your name here