ಚೆನ್ನೈ: ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎರಡು ದಿನದ ಭಾರತ ಪ್ರವಾಸಕ್ಕಾಗಿ ಚೆನ್ನೈನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆ ನಂತರ ಸಂಜೆಯ ಸುಮಾರಿಗೆ ಕಡಲ ತೀರದ ಮಾಮಲ್ಲಪುರಂ ದೇವಾಲಯದ ಬೇಟಿಯನ್ನು ಮಾಡಿದರು. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ದಕ್ಷಿಣದ ಪಂಚೆ ಶಲ್ಯ ತೊಟ್ಟು ಮಿಂಚಿದರು.
ಸಂಜೆ ಮಾಮಲ್ಲಪುರಂ ಬೇಟಿಯ ವೇಳೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬಿಳಿ ಅಂಗಿ ಹಾಗೂ ಪ್ಯಾಂಟ್ ತೊಟ್ಟು ಬಂದಿದ್ದರೆ, ಮೋದಿ ತೇಟ್ ದಕ್ಷಿಣದ ಶೈಲಿಯಲ್ಲಿ ಪಂಚೆ ಬಿಳಿ ಅಂಗಿ ಮತ್ತು ಶಲ್ಯ ತೊಟ್ಟು ಮಿಂಚಿದರು. ಅಧ್ಯಕ್ಷ ಕ್ಸಿ ಅವರು ಬಂದಿಳಿಯುತ್ತಿದ್ದಂತೆ ಆತ್ಮೀಯವಾಗಿ ಸ್ವಾಗತಿಸಿದ ಮೋದಿ, ಅಲ್ಲಿನ ಐತಿಹಾಸಿಕ ಹಾಗೂ ಪಾರಂಪರಿಕ ಮಹತ್ವಗಳ ಕುರಿತು ವಿವರಿಸಿದರು.

ಐತಿಹಾಸಿಕ ಸ್ಥಳವನ್ನು ನೋಡುತ್ತಾ ಹುಲ್ಲು ಹಾಸಿನ ಮೇಲೆ ಸ್ವಲ್ಪ ಸಮಯ ಕಾಲ ಕಳೆದರು. ಅಲ್ಲದೇ ಇಲ್ಲಿನ ಕಲ್ಲು ರಥದ ಸಮುಚ್ಚಯದ ಬಳಿಯಲ್ಲಿ ಎಳನೀರು ಸೇವಿಸಿ, ಉಬಯ ಕುಶಲೋಪರಿಯಲ್ಲಿ ತೊಡಗಿಕೊಂಡರು. ಪಲ್ಲವ ವಾಸ್ತುಶಿಲ್ಪವನ್ನು ಒಳಗೊಂಡಿರುವ ಮಹಾಬಲಿಪುರಂನ ಶೋರ್ ದೇವಾಲಯ ಸಮುಚ್ಚಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದಕ್ಷಿಣದ ಸಂಸ್ಕೃತಿಯನ್ನು ಸಾರುವ ನೃತ್ಯ ಕಲಾಪ್ರದರ್ಶನ ನೀಡಲಾಯಿತು. ಇವುಗಳ ನಡುವೆ ದಕ್ಷಿಣ ಭಾರತದ ಖ್ಯಾತ ನೃತ್ಯ ಕಲಾ ಪ್ರಕಾರ ಯಕ್ಷಗಾನಕ್ಕೆ ಚೀನಾ ಅಧ್ಯಕ್ಷರಿಂದ ಮೆಚ್ಚುಗೆ ವ್ಯಕ್ತವಾಯಿತು.
ಇದನ್ನೂ ಓದಿರಿ: ವಿಜಯದಶಮಿಯಂದೇ ಭಾರತಕ್ಕೆ ಸಿಕ್ತು ರಫೇಲ್ ಎಂಬ ಬ್ರಹ್ಮಾಸ್ತ್ರ..!

ಸುಮಾರು 30 ನಿಮಿಷಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಭರತನಾಟ್ಯ, ಯಕ್ಷಗಾನ, ಕಥಕ್ಕಳಿ ಸೇರಿದಂತೆ ಹಲವು ಬಗೆಯ ಕಲಾ ಪ್ರದರ್ಶನ ನಡೆಯಿತು. ಚೀನಾ ಅಧ್ಯಕ್ಷರು ಕುತೂಹಲದಿಂದ ಕಾರ್ಯಕ್ರಮ ವೀಕ್ಷಿಸಿದರೆ, ಮೋದಿ ಪಕ್ಕದಲ್ಲಿ ಕುಳಿತು ವಿವರಣೆಯನ್ನು ನೀಡುತ್ತಿದ್ದರು.
#WATCH Prime Minister Narendra Modi and Chinese President Xi Jinping visit group of temples at Mahabalipuram. The group of monuments at Mahabalipuram is prescribed by UNESCO as a world heritage site. #TamilNadu pic.twitter.com/Yf8mHXCxh5
— ANI (@ANI) October 11, 2019