ವಾರ್ಸಾ: ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಪೋಲೆಂಡ್ ಓಪನ್ ಕುಸ್ತಿ ಟೂರ್ನಿಯ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಮೊದಲ ಪಂದ್ಯದಲ್ಲಿ 2019 ರ ವಿಶ್ವ ಕಂಚು ವಿಜೇತೆ ಏಕ್ತಾರಿನಾ ಅವರ ವಿರುದ್ಧ ಜಯಗಳಿಸಿದರು. ಮುಂದಿನ ಸುತ್ತಿನಲ್ಲಿ ಅಮೇರಿಕಾದ ಏಮಿ ಆನ್ ವಿರುದ್ಧ ಭರ್ಜರಿ ಜಯ ಗಳಿಸಿದರು. ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಉಕ್ರೇನ್ ನ ಕ್ರೈಸ್ಟಿಯಾನ ಬ್ರಿಜಾ ಅವರ ವಿರುದ್ಧ 8-0 ಅಂಕಗಳೊಂದಿಗೆ ಜಯ ಸಾಧಿಸಿ ಚಿನ್ನದ ಪದಕ ಗಳಿಸಿದರು.
WRESTLING: #Tokyo2020 bound Vinesh Phogat rules the 53kg category with a 🥇 medal at the #PolandOpen after defeating her Uzbek counterpart Khrystyna Bereza 8-0 in the final! 🇮🇳 #WrestleWarsaw #BetterEverday
— JSW Sports (@jswsports) June 11, 2021
ಇದನ್ನೂ ಓದಿರಿ: ರಾಜ್ಯದಲ್ಲಿ ಇಂದು ಕೊರೋನಾಗೆ 144 ಮಂದಿ ಸಾವು; ಬೆಂಗಳೂರಿನಲ್ಲಿ 2,454 ಸೇರಿ 9,785 ಹೊಸ ಪ್ರಕರಣ ಪತ್ತೆ