ಟರ್ಕಿ: ಕೇವಲ 72 ಸೆಂಟಿಮೀಟರ್ (2.5 ಅಡಿ) ಎತ್ತರವಿದ್ದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎಂದು ಗಿನ್ನಿಸ್ ದಾಖಲೆ ಹೊಂದಿದ್ದ, ಪ್ರಪಂಚದ ಮಾಜಿ ಕುಬ್ಜ ಮಹಿಳೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಟರ್ಕಿಯ ಕದರ್ಲಿ ಪಟ್ಟಣದಲ್ಲಿ ವಾಸವಾಗಿದ್ದ, ವಿಶ್ವದ ಮಾಜಿ ಕುಬ್ಜ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದ 33 ವರ್ಷದ ಎಲಿಫ್ ಕೊಕಾಮನ್ ಎಂಬ ಮಹಿಳೆ ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಕಳೆದ ಮಂಗಳವಾರ ಅನಾರೋಗ್ಯಕ್ಕೀಡಾಗಿದ್ದ ಕೊಕಾಮನ್ ಅವರನ್ನ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಸಾಗಿತ್ತು. ಜೊತೆಗೆ ನ್ಯುಮೋನಿಯಾದಿಂದ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದರು ಎಂದು ತಿಳಿದುಬಂದಿದೆ. ವಿಶ್ವದ ಅತಿ ಕುಬ್ಜ ಯುವತಿ ಎಂಬ ದಾಖಲೆಗೆ ಪಾತ್ರವಾಗಿದ್ದ ಕೊಕಾಮನ್ 2010ರಲ್ಲಿ ಗಿನ್ನೆಸ್ ದಾಖಲೆ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿರಿ: ಕೋವಿಡ್-19: ದೇಶಾದ್ಯಂತ ಕೊರೊನಾ ಆತಂಕ; ಕಳೆದ 24 ಗಂಟೆಗಳಲ್ಲಿ 27 ಸಾವಿರ ಹೊಸ ಸೋಂಕಿತರು ಪತ್ತೆ