ಕೋಲಾರ: ಸುದ್ದಿಗಾರರ ಜೊತೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೋಲಾರದಿಂದ ಸ್ಪರ್ಧಿಸುವಂತೆ ಎಲ್ಲಾ ನಾಯಕರು ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೋಲಾರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಚುನಾವಣೆಗೆ ಸ್ಪರ್ದಿಸುವ ಕುರಿತು ಮಾತನಾಡಿದ್ದು, ಬಾದಾಮಿ ಕ್ಷೇತ್ರ ತೊರೆಯುವ ಕುರಿತು ಸೂಚನೆ ನೀಡಿದ್ದಾರೆ. ಬಾದಾಮಿಯಿಂದಲೂ ಸ್ಪರ್ದಿಸುವಂತೆ ಕೇಳಿಕೊಂಡಿದ್ದಾರೆ, ಆದರೆ ಬೆಂಗಳೂರಿನಿಂದ ದೂರದಲ್ಲಿದೆ. ಇದರಿಂದಾಗಿ ಓಡಾಡಲು ತುಂಬಾ ಕಷ್ಟವಾಗುತ್ತದೆ. ಮತದಾರರ ಕಷ್ಟಕ್ಕೆ ಸ್ಪಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ತಂಡವನ್ನು ಮಣಿಸಿ ಟಿ-20 ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಇಂಗ್ಲೆಂಡ್
ಕ್ಷೇತ್ರದಲ್ಲಿ ಮಾತನಾಡುತ್ತ, ಕೋಲಾರದಿಂದ ಸ್ಪರ್ಧಿಸುವಂತೆ ಎಲ್ಲಾ ನಾಯಕರು ಒತ್ತಾಯ ಮಾಡುತ್ತಿದ್ದಾರೆ, ಅವರ ಒತ್ತಾಸೆಗೆ ಚಿರಋಣಿಯಾಗಿದ್ದೇನೆ. ಕೋಲಾರದಿಂದ ಸ್ಪರ್ದಿಸುವ ಕುರಿತು ಕೆ.ಹೆಚ್ ಮುನಿಯಪ್ಪ ಜೊತೆಯೂ ಮಾತನಾಡಿದ್ದೇನೆ. ಸ್ಪರ್ಧಿಸಿದರೇ ಸಪೋರ್ಟ್ ಮಾಡುವುದಾಗಿ ಮುನಿಯಪ್ಪ ಹೇಳಿದ್ದಾರೆ. ಹಾಲಿ ಶಾಸಕ ಶ್ರೀನಿವಾಸಗೌಡ ಸಹ ನನ್ನ ಸ್ಪರ್ಧೆಗೆ ಒತ್ತಾಯಿಸಿದ್ದಾರೆ ಎಂದರು. ಅಲ್ಲದೇ ಕ್ಷೇತ್ರಕ್ಕೆ ಎರಡೇ ದಿನ ಬಂದರೂ ಸಾಕು, ಎಲ್ಲರೂ ಸೇರಿ ಗೆಲ್ಲಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ನಾಮಪತ್ರ ಸಲ್ಲಿಸಲು ಮತ್ತೊಮ್ಮೆ ಬರುತ್ತೇನೆ ಎನ್ನುವ ಮೂಲಕ ಬಾದಾಮಿಯನ್ನು ತೊರೆದು, ಈ ಬಾರಿ ಕೋಲಾರದಲ್ಲಿ ನಿಲ್ಲುವ ಸೂಚನೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಅರಣ್ಯ ಇಲಾಖೆ ನೇಮಕಾತಿ: ವಲಯ ಅರಣ್ಯಾಧಿಕಾರಿ ಹುದ್ದೆಗೆ ಪದವೀಧರರಿಂದ ಅರ್ಜಿ ಆಹ್ವಾನ