ಜಾಮಾ ಮಸೀದಿಯ ಮಹಿಳಾ ವಿರೋಧಿ ನಡೆ: ಮಹಿಳೆಯರಿಗೆ ಪ್ರವೇಶ ನಿಷೇಧ !

women-entry-banned-in-jama-masjid

ನವದೆಹಲಿ: ಐತಿಹಾಸಿಕ ಜಾಮಾ ಮಸೀದಿಗೆ ಒಂಟಿಯಾಗಿ ಹುಡುಗಿಯರು ಮತ್ತು ಮಹಿಳೆಯರು ಬರುವುದನ್ನು ನಿಷೇಧಿಸಲಾಗಿದೆ ಎಂದು ಮಸೀದಿಯ ಹೊರಗೆ ಅಂಟಿಸಲಾಗಿದ್ದು ಇದು ವಿವಾದಕ್ಕೆ ಕಾರಣವಾಗಿದೆ.

ಜಾಮಾ ಮಸೀದಿಯ ಪಿಆರ್‌ಒ ಸಬೀವುಲ್ಲಾಖಾನ್ ಮಾತನಾಡಿ, ‘ಇಲ್ಲಿಗೆ ಬರುವ ಒಂಟಿ ಹುಡುಗಿಯರನ್ನು ತಡೆಯಲು ಈ ನಿಷೇಧ ಹೇರಲಾಗಿದೆ. ಅವರು ಇಲ್ಲಿಗೆ ಬಂದು ವಿಡಿಯೊ ಮಾಡುತ್ತಿದ್ದಾರೆ. ‘ನೀವು ಬರುವುದಾದರೆ ನಿಮ್ಮ ಕುಟುಂಬದೊಂದಿಗೆ ಬನ್ನಿ, ಯಾವುದೇ ನಿರ್ಬಂಧಗಳಿಲ್ಲ. ವಿವಾಹಿತ ದಂಪತಿಗಳು ಬರುತ್ತಾರೆ. ಯಾವುದೇ ನಿರ್ಬಂಧಗಳಿಲ್ಲ. ಆದರೆ ಯಾರಿಗಾದರೂ ಇಲ್ಲಿಗೆ ಬರಲು ಸಮಯ ನೀಡುವುದು. ಅದನ್ನು ಮೀಟಿಂಗ್ ಪಾಯಿಂಟ್ ಎಂದು ಪರಿಗಣಿಸುವುದು. ಪಾರ್ಕ್ ಎಂದು ಪರಿಗಣಿಸುವುದು. ಟಿಕ್‌ಟಾಕ್ ವೀಡಿಯೊಗಳನ್ನು ಮಾಡುವುದು ನೃತ್ಯ ಮಾಡುವುದು. ಇದು ಯಾವುದೇ ಧಾರ್ಮಿಕ ಸ್ಥಳಕ್ಕೂ ಸೂಕ್ತವಲ್ಲ. ಅದು ಮಸೀದಿ, ಮಂದಿರ ಅಥವಾ ಗುರುದ್ವಾರವೇ ಆಗಿರಲಿ ಎಂದು ಹೇಳಿದ್ದಾರೆ.

ಜಾಮಾ ಮಸೀದಿಯ ಮೂರು ಬಾಗಿಲುಗಳ ಬಳಿಯಲ್ಲಿಯೂ ಈ ರೀತಿಯಲ್ಲಿ ಬರೆದಿರುವ ಬೋರ್ಡ್ಗಳನ್ನು ನೇತುಹಾಕಲಾಗಿದ್ದು, ಒಂಟಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕುರಿತು ಮಸೀದಿಯ ಇಮಾಮ್ ಗೆ ನೋಟಿಸ್ ನೀಡಲು ದೆಹಲಿ ಮಹಿಳಾ ಆಯೋಗ ನಿರ್ಧರಿಸಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲಾ ಟ್ವಿಟ್ ಮಾಡಿ, ‘ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ತಡೆಯುವ ನಿರ್ಧಾರ ಸಂಪೂರ್ಣವಾಗಿ ತಪ್ಪು. ಪುರುಷನಿಗೆ ಪೂಜೆ ಮಾಡುವ ಹಕ್ಕು ಎಷ್ಟು ಇದೆಯೋ ಅಷ್ಟೇ ಹಕ್ಕು ಮಹಿಳೆಗೂ ಇದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ವರಾಹರೂಪಂ ವಿವಾದ ಹೊಂಬಾಳೆ ಫಿಲಮ್ಸ್ ಗೆ ಹಿನ್ನಡೆ; ಮೇಲ್ಮನವಿ ವಜಾಗೊಳಿಸಿದ ಕೇರಳ ಹೈಕೋರ್ಟ್‌

LEAVE A REPLY

Please enter your comment!
Please enter your name here