ಅಭಿನಂದನ್ ನಾಳೆ ಭಾರತಕ್ಕೆ : ಮಂಡಿಯೂರಿದ ಪಾಕಿಸ್ತಾನ..!

ಪಾಕಿಸ್ತಾನ ಸರಕಾರ ನಿನ್ನೆಯಷ್ಟೇ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿ ಸಾಹಸ ಮೆರೆದವರಂತೆ ತನ್ನ ದೇಶದವರ ಮುಂದೆ ಪೋಸ್ ಕೊಟ್ಟಿತ್ತು. ಆದರೆ ನರೇಂದ್ರ ಮೋದಿಯವರ ಸರಕಾರ ತನ್ನ ಜಾಣ್ಮೆಯ ನಡೆಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಬೆಂಬಲ ಗಳಿಸುವಲ್ಲಿ ಶಕ್ತವಾಯಿತು. ಇದರ ಪರಿಣಾಮವಾಗಿ ಅಭಿನಂದನ್ ಬಿಡುಗಡೆಗಾಗಿ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿತು. ಕೇಂದ್ರ ಸರಕಾರ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದೆ ಹೋದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಡಕ್ ಎಚ್ಚರಿಕೆಯನ್ನು ರವಾನಿಸಿತ್ತು. ಇವೆಲ್ಲದರ ಪರಿಣಾಮವಾಗಿ ಇಂದು ಪಾಕಿಸ್ತಾನ ಭಾರತದ ಎದುರು ಮಂಡಿಯೂರಿ ಕುಳಿತಿದೆ.

ಇಂದು ಪಾಕಿಸ್ತಾನದ ಸಾಧನದಲ್ಲಿ ಅಭಿನಂದನ್ ಅವರನ್ನು ಮರಳಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದು, ಶಾಂತಿ ಮಾತುಕತೆಯ ಮೂಲಕ ಎಲ್ಲವನ್ನು ಬಗೆಹರಿಸಿಕೊಳ್ಳೋಣ ಎನ್ನುವ ತನ್ನ ನಿರ್ಧಾರವನ್ನು ಮುಂದಿಟ್ಟಿದೆ. ಅಲ್ಲದೇ ಭಾರತ ಎಲ್ಲ ವೈಮಸ್ಸನ್ನು ಬದಿಗಿರಿಸಿ ಶಾಂತಿ ಮಾತುಕತೆಗೆ ಮುಂದಾಗಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

Image Copyright: google.com

LEAVE A REPLY

Please enter your comment!
Please enter your name here