ನವದೆಹಲಿ: ಚಂದ್ರಯಾನ -2 ಸಾಪ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಕೆಲವು ತಾಂತ್ರಿಕ ತೊಂದರೆಗಳಿಂದ ಸಂಪರ್ಕ ಕಳೆದುಕೊಂಡಿತ್ತು. ವಿಜ್ಞಾನಿಗಳ ಮೊದಲ ಪ್ರಯತ್ನದಲ್ಲಿಯೇ ಶೇ. 95ರಷ್ಟು ಯಶಸ್ಸು ಪಡೆದು ಹಲವು ದೇಶಗಳು ಹುಬ್ಬೇರಿಸುವಂತೆ ಮಾಡಿದ್ದರು. ಈ ಸಮಯದಲ್ಲಿ ದೇಶದ ಜನತೆ ವಿಜ್ಞಾನಿಗಳ ಬೆನ್ನಿಗೆ ನಿಂತಿರುವುದನ್ನು ಮರೆಯಲು ಸಾಧ್ಯವಿಲ್ಲ.
ಇಂತಹ ಅಭೂತಪೂರ್ವ ಜಯದೊಂದಿಗೆ ಸಾಗುತ್ತಿರುವ ಸಂಸ್ಥೆ ಮತ್ತೊಮ್ಮೆ ಈ ಪ್ರಯತ್ನಕ್ಕೆ ಕೈ ಹಾಕುವುದೇ ಎನ್ನುವ ಪ್ರಶ್ನೆ
ಜನರ ಮುಂದೆ ಬರುವುದು ಸುಳ್ಳಲ್ಲ. ಇಂತಹ ಪ್ರಶ್ನೆಯನ್ನೇ ಅಧ್ಯಕ್ಷ ಕೆ. ಶಿವನ್ ಅವರ ಮುಂದೆ ಪತ್ರಕರ್ತರು ಇಟ್ಟಿದ್ದು, ಅವರ ಉತ್ತರ ಕೇಳಿ ದೇಶದ ಜನತೆ ಹರ್ಷಗೊಂಡಿದ್ದಾರೆ. ಈ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತ, ಕಂಡಿತ ಚಂದ್ರನ ದಕ್ಷಿಣ ದ್ರುವದಲ್ಲಿ ಮತ್ತೊಮ್ಮೆ ವಿಕ್ರಮ್ ಲ್ಯಾಂಡರ್ ಇಳಿಸುವ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.
ವಿಕ್ರಮ್ ಲ್ಯಾಂಡರ್ ವಿಚಾರದಲ್ಲಿ ನಮ್ಮ ತಂತ್ರಜ್ಞಾನವನ್ನು ಇನ್ನೂ ಉತ್ತಮಗೊಳಿಸಬೇಕಿದೆ. ಸಾಪ್ಟ್ ಲ್ಯಾಂಡಿಂಗ್ ವಿಚಾರದಲ್ಲಿ ನಾವು ಎಡವಿದ್ದೇವೆ. ಅದನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ 300 ಮೀ. ವರೆಗೆ ಸರಿಯಾಗಿ ಕೆಲಸ ನಿರ್ವಹಿಸುತ್ತ ಇತ್ತು, ಆದರೆ ಅದರ ಸಾಪ್ಟ್ ಲ್ಯಾಂಡಿಂಗ್ ನಲ್ಲಿ ತೊಂದರೆ ಉಂಟಾಗಿದೆ. ಸಾಪ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಇನ್ನೂ ಉತ್ತಮಗೊಳಿಸಿ ಅದರಲ್ಲಿ ಯಶಸ್ವಿಯಾಗಲು ಇಸ್ರೋ ತನ್ನೆಲ್ಲ ಶಕ್ತಿಯನ್ನು ದಾರೆಯೇರೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ರಾಷ್ಟ್ರೀಯ ಏಕತಾ ದಿವಸ್: ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಪ್ರಧಾನಿ ಮೋದಿಯವರಿಂದ ಪುಷ್ಪ ನಮನ