chinese-phones-be-banned-in-india

ದೇಶ ಮತ್ತು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರಕಾರ ಈ ಹಿಂದೆ ಹಲವಾರು ಚೀನಾ ಮೂಲದ ಅಫ್ಲಿಕೆಶನ್ ಗಳನ್ನು ಬ್ಯಾನ್ ಮಾಡಿತ್ತು. ಕೇವಲ ಮೊಬೈಲ್ ಅಫ್ಲಿಕೆಶನ್ ಗಳಿಗೆ ಮಾತ್ರ ಸೀಮಿತವಾಗದೆ ಕೇಂದ್ರ ಇನ್ನು ಚೀನಾ ಮೂಲದ ಮೊಬೈಲ್ ಹ್ಯಾಂಡ್ ಸೆಟ್ಗಳನ್ನ ಸಹ ಬ್ಯಾನ್ ಮಾಡುವುದೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಡಿಜಿಟಲ್ ಸಂವಹನ ಕ್ಷೇತ್ರದಲ್ಲಿ ಗ್ರಾಹಕರ ಗೌಪ್ಯತೆ ಮತ್ತು ಭದ್ರತೆಗೆ ದಕ್ಕೆ ಬರದಂತೆ ತಡೆಯುವ ಬೃಹತ್ ಸಂಸ್ಥೆ TRAI ಸದಾ ಇವುಗಳ ಮೇಲೆ ಕಣ್ಣಿಡುತ್ತದೆ. ಅಂತಹ ಸಂಸ್ಥೆ ಗ್ರಾಹಕ ಡೇಟಾಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಈ ಹಿಂದೆಯೇ ಹೇಳಿತ್ತು. ಅದರಂತೆ ಸೆಪ್ಟೆಂಬರ್ 19 ರಂದು ನಡೆಯಲಿರುವ ಸಭೆಯಲ್ಲಿ ಗೌಪ್ಯತೆ ಮತ್ತು ಭದ್ರತೆಗೆ ದಕ್ಕೆ ತರುವ ಇಂತಹ ಕಂಪನಿಗಳಿಗೆ TRAI ಅನುಮೋದನೆ ನೀಡುವುದು ಅನುಮಾನವಾಗಿದೆ.

TRAI ಹೇಳುವಂತೆ ಅಫ್ಲಿಕೆಶನ್ ಗಳು, ಆಪರೇಟಿಂಗ್ ಸಿಸ್ಟಮ್ ಮತ್ತು ಹ್ಯಾಂಡ್ ಸೆಟ್ಟುಗಳು ಗ್ರಾಹಕರ ಡೇಟಾಗಳು ಸೋರಿಕೆಯಾಗದಂತೆ ರಕ್ಷಿಸಬೇಕು. ಇದಕ್ಕಾಗಿ ಈ ಕಂಪನಿಗಳು ತಮ್ಮ ಸರ್ವರ್ ಗಳನ್ನು ಈ ದೇಶದಲ್ಲಿಯೇ ಸ್ಥಾಪಿಸುವುದು ಅವಶ್ಯವಾಗಿದೆ. ಸರಕಾರ ಅವುಗಳನ್ನು ನಿಯಂತ್ರಿಸುವುದು ಬೇಡ ಬದಲಾಗಿ ಅಗತ್ಯವಿದ್ದಾಗ ಅವುಗಳ ವಿರುದ್ಧ ಕ್ರಮಕೈಗೊಳ್ಳುವಂತಿರಬೇಕು ಎಂದು ಹೇಳಿದೆ. ಈ ಎಲ್ಲ ವಿಚಾರಗಳಿಂದ ಸಭೆಯಲ್ಲಿ ಡಿಜಿಟಲ್ ಸಂವಹನ ಆಯೋಗವು ಅನುಮೋದನೆಯನ್ನು ನಿರಾಕರಿಸಿದಲ್ಲಿ ಕೇಂದ್ರ ಸರಕಾರ ಚೀನಾ ಮೂಲದ ಹ್ಯಾಂಡ್ ಸೆಟ್ ಗಳನ್ನು ಬ್ಯಾನ್ ಮಾಡಲೂಬಹುದು.

ಹಾಗಾದರೆ ಭಾರತದಲ್ಲಿ ಪ್ರಚಲಿತದಲ್ಲಿರುವ ಟಾಪ್ ಹತ್ತು ಮೊಬೈಲ್ ಹ್ಯಾಂಡ್ ಸೆಟ್ ಕಂಪನಿಗಳಾವುವು ?

ಭಾರತದ ಮೊಬೈಲ್ ಮಾರುಕಟ್ಟೆಯನ್ನು ಚೀನಾ ಮೂಲದ ಕಂಪನಿಗಳು ಸುಮಾರು 74 % ನಷ್ಟು ಆಕ್ರಮಿಸಿಕೊಂಡಿದ್ದು, ತಮ್ಮ ವ್ಯಾಪಾರವನ್ನು ಇಲ್ಲಿ ನಡೆಸುತ್ತಿವೆ. ಅಂತಹ ಟಾಪ್ ಹತ್ತು ಮೊಬೈಲ್ ಹ್ಯಾಂಡ್ ಸೆಟ್ ಕಂಪನಿಗಳಾವುವು  ಎಂದು ನೋಡುವುದಾದರೆ..

  • ಒನ್ ಫ್ಲಸ್ ಮೊಬೈಲ್ (OnePlus Mobiles)
  • ಶಿಯೋಮಿ (Xiaomi / Mi)
  • ಲೆನೊವೋ (Lenovo)
  • ಒಪ್ಪೋ ಸ್ಮಾರ್ಟ್ ಫೋನ್ಸ್ (Oppo smartphones)
  • ವಿವೋ (Vivo)
  • ರಿಯಲ್ ಮಿ (Realme)
  • ಕೂಲ್ ಪ್ಯಾಡ್ (Coolpad)
  • ಜಿಯೋನಿ ಸ್ಮಾರ್ಟ್ ಫೋನ್ಸ್ (Gionee smartphones)
  • ಜೋಪೋ (Zopo)
  • ಝಡ್ ಟಿ ಇ (ZTE)

LEAVE A REPLY

Please enter your comment!
Please enter your name here