will-be-able-to-manufacture-supply-10-crore-covishield-doses-in-june-serum-institute-to-centre

ನವದೆಹಲಿ : ಜೂನ್ 10 ರ ನಂತರ 10 ಕೋಟಿ ಕೋವಿಶೀಲ್ಡ್ ಡೋಸ್ ಉತ್ಪಾದಿಸಿ ಪೂರೈಸಲು ಸಾಧ್ಯವಾಗುತ್ತದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸರಕಾರಕ್ಕೆ ಮಾಹಿತಿಯನ್ನು ನೀಡಿದೆ.

ದೇಶದಲ್ಲಿ ಲಸಿಕೆಯ ಕೊರತೆ ಹಿನ್ನೆಲೆಯಲ್ಲಿ ಜನಸಾಮಾನ್ಯರಿಂದ ದೂರುಗಳು ಬರುತ್ತಿರುವ ಬೆನ್ನಲ್ಲೆ ಈ ಪ್ರಕಟಣೆ ಹೊರಬಿದ್ದಿದೆ. ಈ ಸಾಂಕ್ರಾಮಿಕ ರೋಗದ ನಡುವೆಯೂ ನಮ್ಮ ಉದ್ಯೋಗಿಗಳು 24 ಗಂಟೆಗಳೂ ಕೆಲಸವನ್ನು ಮಾಡುತ್ತಿದ್ದಾರೆ. ಮೇ ತಿಂಗಳಲ್ಲಿ ನಮ್ಮ ಲಸಿಕೆ ಉತ್ಪಾದನೆ 6.5 ಕೋಟಿ ಡೋಸೇಜ್‌ಗೆ ತಲುಪಿದೆ. ಜೂನ್ ತಿಂಗಳಲ್ಲಿ ಒಂಬತ್ತರಿಂದ ಹತ್ತು ಕೋಟಿ ಡೋಸೇಜ್‌ ತಯಾರಿಸಿ ಪೂರೈಕೆ ಮಾಡಲು ಸಾಧ್ಯವಾಗಲಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅಮಿತ್ ಷಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ಲಾಕ್ ಡೌನ್ ವಿಸ್ತರಣೆ: ಇಲ್ಲಿದೆ ನಿಮಗಾಗಿ ಬಹುಮುಖ್ಯ ಮಾಹಿತಿ

ಭಾರತ ಸರ್ಕಾರದ ಬೆಂಬಲ ಮತ್ತು ಮಾರ್ಗದರ್ಶನದಲ್ಲಿ, ಮುಂಬರುವ ತಿಂಗಳಲ್ಲಿ ನಮ್ಮ ಕೋವಿಶೀಲ್ಡ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಮ್ಮ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.” ಎಂದು ಸೀರಮ್ ಇನ್ಸಿಟ್ಯೂಟ್ ಹೇಳಿದೆ.

ಇದನ್ನೂ ಓದಿರಿ: ಕ್ಯಾನ್ಸರ್ ಬರದಂತೆ ಸ್ತನಗಳ ಆರೈಕೆ ಮಾಡುವುದು ಹೇಗೆ ? ತಿಳಿಯಿರಿ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here