why-pm-narendra-modi-visited-leh-and-what-message-he-conveyed-to-china

ಲಡಾಖ್: ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ಲಡಾಖ್ ಗಡಿ ಪ್ರದೇಶಕ್ಕೆ, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರ್ವಾನೆ ಅವರೊಂದಿಗೆ ಬೇಟಿ ನೀಡಿದ್ದಾರೆ. ಚೀನಾದ ಆಕ್ರಮಣಕಾರಿ ಪೀಪಲ್ ಲಿಬರೇಷನ್ ಆರ್ಮಿಯ ವಿರುದ್ಧ ಗಡಿಯಲ್ಲಿ ಭಾರತದ ಸನ್ನದ್ಧತೆ ಕುರಿತು ಪ್ರತ್ಯಕ್ಷವಾಗಿ ವೀಕ್ಷಿಸುವ ಜೊತೆಗೆ ಉತ್ಸಾಹ ಭರಿತ ಸೈನಿಕರ ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಸಲುವಾಗಿ ತೆರಳಿದ್ದಾರೆ ಎನ್ನಲಾಗಿದೆ.

ಲಡಾಖ್ ಪ್ರದೇಶಕ್ಕೆ ಮೋದಿಯವರು ತೆರಳುವ ನಿರ್ಧಾರವನ್ನು ಗುರುವಾರ ಸಂಜೆಯೇ ಅಂತಿಮಗೊಳಿಸಲಾಗಿತ್ತು. ಈ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಬಿಪಿನ್ ರಾವತ್ ಅವರೊಂದಿಗೆ ಚರ್ಚಿಸಿದ್ದರು. ಪ್ರಧಾನಿಯವರ ಈ ನಡೆಯು ಚೀನಾಗೆ ಖಡಕ್ ಸಂದೇಶವನ್ನು ರವಾನಿಸಿದೆ.

ಸಮುದ್ರ ಮಟ್ಟದಿಂದ 11,000 ಅಡಿಗಳಷ್ಟು ಎತ್ತರದ ನೀಮು ಪ್ರದೇಶಕ್ಕೆ ಬೇಟಿನೀಡಿದ ಸಂದರ್ಭದಲ್ಲಿ ಉತ್ತರ ಸೇನಾ ಕಮಾಂಡರ್ ಲೆಪ್ಟಿನೆಂಟ್ ಜನರಲ್ ವೈ.ಕೆ. ಜೋಷಿ ಮತ್ತು ಲೇಹ್ ನಲ್ಲಿರುವ 14 ಕಾರ್ಫ್ಸ್ ಕಮಾಂಡರ್ ಲೆಪ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೀಮು ಆರ್ಮಿಯ ಪ್ರಧಾನ ಕಚೇರಿಯಲ್ಲಿನ ಪರಿಸ್ಥಿತಿಯ ಕುರಿತಾಗಿ ಸಂಪೂರ್ಣ ವಿವರಣೆ ನೀಡಿದರು. ಇದೇ ಸಮಯದಲ್ಲಿ ಸೈನಿಕರನ್ನು ಪ್ರಧಾನಿಗಳು ಬೇಟಿ ಮಾಡಿದರು.

ಇದನ್ನೂ ಓದಿರಿ: ಲಡಾಖ್ ನಲ್ಲಿ ಚೀನಾ-ಭಾರತ ಸಂಘರ್ಷ: ಇದ್ದಕ್ಕಿದ್ದಂತೆ ಗಲ್ವಾನ್ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಪೂರ್ವ ಲಡಾಖ್ ಪ್ರದೇಶದಲ್ಲಿ ಬೀಡುಬಿಟ್ಟಿರುವ ಭಾರತೀಯ ಸೈನಿಕರ ಉತ್ಸಾಹವನ್ನು ಇಮ್ಮಡಿಗೊಳಿಸುವ ಸಲುವಾಗಿ ಪ್ರಧಾನಿ ಮತ್ತು ಸೇನೆಯ ಉನ್ನತ ಅಧಿಕಾರಿಗಳು ಬೇಟಿ ನೀಡಿರುವುದು ಒಂದು ಉತ್ತಮ ಹೆಜ್ಜೆಯಾಗಿದೆ. ಖುದ್ದು ಪ್ರಧಾನಿಗಳೇ ಲೇಹ್ ಗೆ ತೆರಳಿದ್ದು ಚೀನಾಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿದೆ. ಚೀನಾದ ಉದ್ವೇಗ ಮತ್ತು ಅಸಹ್ಯಕರ ವರ್ತನೆಯನ್ನು ಭಾರತ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದನ್ನು ಎತ್ತಿ ತೋರಿಸಿದೆ.

ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಗುರುವಾರ ಗಡಿಯಲ್ಲಿನ ಉದ್ವಿಗ್ನತೆಯನ್ನು ಕೊನೆಗೊಳಿಸುವಂತೆ ಚೀನಾಕ್ಕೆ ಮನವಿ ಮಾಡಿದ್ದಾರೆ. ಆದರೆ ಚೀನಾ ಗಡಿಯಲ್ಲಿನ ತನ್ನ ಸೇನೆಯನ್ನು ಹಿಂತೆಗೆಯಲು ಸಮಯ ತೆಗೆದುಕೊಳ್ಳುತ್ತಿದೆ. ಏಕೆಂದರೆ ಚೀನಾ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಮನಸ್ಥಿತಿಯನ್ನು ತೋರುತ್ತಿಲ್ಲ. ಶಾಂತಿ ಮಾತನಾಡುತ್ತಿದ್ದರೂ, ಗಲ್ವಾನ್, ಗೋಗ್ರಾ, ಹಾಟ್ ಸ್ಟ್ರಿಂಗ್, ಪಾಂಗಾಂಗ್ ಸರೋವರದ ಬಳಿಯಲ್ಲಿರುವ ಸೇನೆಯನ್ನು ಹಿಂತೆಗೆಯಲು ಸಮಯ ತೆಗೆದುಕೊಳ್ಳುತ್ತಿದೆ. ಮಿಲಿಟರಿ ಕಮಾಂಡರ್ ಗಳ ವರದಿಯ ಪ್ರಕಾರ ಸೇನೆ ಹಿಂತೆಗೆದಂತೆ ಮಾಡಿದರು, ಕ್ಯಾಂಪ್ ಗಳಲ್ಲಿ ಶಸ್ತ್ರಾಸ್ತ್ರ ಮತ್ತು ಮೂಲ ಸೌಕರ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಗಡಿಯಲ್ಲಿ ಚೀನಾದ ಪ್ರತಿಕ್ರೀಯೆಗೆ ಭಾರತವು ಪ್ರಭಲವಾಗಿ ಪ್ರತಿರೋಧವನ್ನು ಒಡ್ಡುತ್ತಿದೆ. ಯಾವುದೇ ಆಕ್ರಮಣ ಅಥವಾ ಪ್ರತಿರೋಧವನ್ನು ತಡೆಯಲು ಸೇನೆ ಮತ್ತು ವಾಯುಪಡೆ ಸಕಲ ಸನ್ನದ್ಧವಾಗಿದೆ. ಈ ಸಂಬಂಧ ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, “ಸೈನಿಕರು ಮತ್ತು ಅಧಿಕಾರಿಗಳ ಉತ್ಸಾಹ ತುಂಬಾ ಹೆಚ್ಚಾಗಿದೆ. ವಿಶೇಷವಾಗಿ ಜೂನ್ 15 ರ ಘಟನೆಯ ನಂತರ ನಮ್ಮ ಶಕ್ತಿ ಇನ್ನಷ್ಟು ಭಲವಾಗಿದೆ. ಆದರೆ ನಾವು ಯಾವುದೇ ಚಕಮಕಿಯನ್ನು ಪ್ರಾರಂಭಿಸಲು ಬಯಸುವುದಿಲ್ಲ. ಮುಂಭಾಗದಿಂದ ಬರುವ ಆಕ್ರಮಣಗಳಿಗೆ ಸರಿಯಾದ ಉತ್ತರ ನೀಡುತ್ತೇವೆ” ಎಂದಿದ್ದಾರೆ.

LEAVE A REPLY

Please enter your comment!
Please enter your name here