ಪಾಕ್ ಸಂಸತ್ತಿನಲ್ಲಿ  ಮೋದಿ…  ಮೋದಿ… ಘೋಷಣೆ, ಇಷ್ಟಕ್ಕೂ ಅಲ್ಲಿ ನಡೆದದ್ದೇನು ?  

were-modi-modi-chants-really-raised-in-pakistan-parliament

ಇಸ್ಲಾಮಾಬಾದ್: ಪಾಕ್ ಸಂಸತ್ತಿನಲ್ಲಿ ಬಲೂಚಿಸ್ತಾನ್ ಸಂಸದರು ಮೋದಿ…  ಮೋದಿ… ಘೋಷಣೆ ಕೂಗಿದ್ದಾರೆ ಎನ್ನುವ ವಿಚಾರ ವೈರಲ್ ಆಗುತ್ತಿದ್ದು, ಈ ವಿಚಾರ ಪಾಕಿಸ್ತಾನಕ್ಕೆ ಮುಜುಗರ ಉಂಟುಮಾಡಿದೆ. ಹಾಗಾದರೆ ಮೋದಿ…  ಮೋದಿ… ಘೋಷಣೆ ಕೂಗಿದ್ದು ಎಷ್ಟು ನಿಜ ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಕೆಲದಿನಗಳಿಂದ ಪಾಕಿಸ್ತಾನ ಒಂದಾದ ಮೇಲೊಂದರಂತೆ ಅವಮಾನಗಳನ್ನು ಅನುಭವಿಸುತ್ತಲೇ ಇದೆ. ಈ ಮೂಲಕ ಅಂತರಾಷ್ತ್ರೀಯ ಮಟ್ಟದಲ್ಲಿ ತನ್ನ ಮಾನವನ್ನು ಹರಾಜು ಹಾಕಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಪ್ರಪಂಚದ ವಿವಿಧ ದೇಶಗಳ ಕಡೆಗಣನೆಗೆ ಗುರಿಯಾಗಿ ಅವನತಿಯ ಹಾದಿಯನ್ನು ಹಿಡಿದಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯದ  ಬೇಡಿಕೆ ಇಟ್ಟಿರುವ ಬಲೂಚಿಗಳು ಭಾರತದ ಕಡೆಗೆ ಹೆಚ್ಚಿನ ಒಲವನ್ನು ತೋರುತ್ತಿರುವುದು ಪಾಕಿಸ್ತಾನಕ್ಕೆ ತಲೆನೋವಾಗಿ ಪರಿಣಮಿಸಿದೆ.

ಫ್ರಾನ್ಸ್ ನಲ್ಲಿ ಚಾರ್ಲಿ ಹೆಬ್ಡೋ ಕಾರ್ಟೂನ್ ಗೆ ಪ್ರತಿಯಾಗಿ ಹತ್ಯೆ ನಡೆದಾಗ ಅಲ್ಲಿ ಇಸ್ಲಾಮಿಕ್ ದೇಶದ ಹಲವು ಸಂಘಟನೆ ಮತ್ತು ಇಸ್ಲಾಮಿಕ್ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲಾಯಿತು. ಇದರಿಂದ ಹಲವು ಇಸ್ಲಾಮಿಕ್ ಸಂಘಟನೆಗಳು ಸಮಸ್ಯೆಗೆ ಗುರಿಯಾದವು. ಇದಕ್ಕೆ ಪ್ರತಿಯಾಗಿ ನಾವೂ  ಫ್ರಾನ್ಸ್ ದೇಶದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಪಾಕಿಸ್ತಾನದ ಸಂಸತ್ತಿನಲ್ಲಿ ಘನವಾದ ಚರ್ಚೆ ನಡೆಯುತ್ತಿತ್ತು. ಇದೆ ಸಮಯದಲ್ಲಿ ಬಲೂಚಿಸ್ತಾನ್ ಸ್ವತಂತ್ರ ಹೋರಾಟಗಾರ ಸಚಿವರ ಪೈಕಿ ಒಬ್ಬರು ಜೋರಾಗಿ ನರೇಂದ್ರ ಮೋದಿಯ ಕುರಿತು ಘೋಷಣೆಯನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಹಲವರಿಂದ ಬೆಂಬಲವೂ ದೊರೆಯಿತು. ಈ ಮೂಲಕ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಷಾ ಮಹಮ್ಮದ್ ಖುರೇಷಿ ಭಾಷಣಕ್ಕೆ ಅಡ್ಡಿಯನ್ನು ಉಂಟುಮಾಡಿದರು.

ಪಾಕಿಸ್ತಾನದ ಸಂಸತ್ತಿನಲ್ಲಿ ಮೋದಿ ಘೋಷಣೆಯು ಕೆಲ ಸಮಯ ಹಾಗೆಯೆ ಮುಂದುವರೆಯಿತು. ಇದರಿಂದ ವಿಚಲಿತರಾದ ಷಾ ಮಹಮ್ಮದ್ ಖುರೇಷಿ, ಬಲೂಚಿಸ್ತಾನದ ಸಂಸದರ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ಹೆಚ್ಚಾಗಿದೆ. ಇವರು ಮೋದಿ ಮತ್ತು ಭಾರತದ ವಿಚಾರಧಾರೆಯನ್ನ ಇಲ್ಲಿ ಹರಡಲು ಪ್ರಯತ್ನಿಸುತ್ತಿದ್ದಾರೆ. ರಾಷ್ತ್ರೀಯತೆಯನ್ನು ಮರೆತು ಬೇರೊಂದು ದೇಶದ ಘೋಷಣೆ ಮಾಡುತ್ತಿದ್ದಾರೆ. ಬಲೂಚಿಸ್ತಾನ್ ಸ್ವಾತಂತ್ರ್ಯದ  ಸಲುವಾಗಿ ಸಂಸದರ ಭಾರತದ ಒಲವಿಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ. ಇದಲ್ಲದೆ ಮೋದಿ ಪರ ಘೋಷಣೆಗಳನ್ನು ಕೂಗುವ ಸಂಸದರೆಲ್ಲ ದೇಶ ವಿರೋಧಿಗಳು ಎಂದು ಹೇಳಿದ್ದಾರೆ. ಸಂಸದರ ಈ ನಡೆಯಿಂದ ಕೋಪಗೊಂಡ ವಿದೇಶಾಂಗ ಮಂತ್ರಿ ಷಾ ಮಹಮ್ಮದ್ ಖುರೇಷಿ ಸಭಾತ್ಯಾಗ ಮಾಡಿದ್ದಾರೆ.

ಪಾಕಿಸ್ತಾನದ ಸಂಸತ್ತಿನಲ್ಲಿ ನಡೆದ ಈ ವಿಚಾರದ ವಿಡಿಯೋಗಳು ತುಂಬಾನೇ ವೈರಲ್ ಆಗಿದ್ದು, ಪಾಕಿಸ್ತಾನದ ಮಾನ ಮೂರು ಕಾಸಿಗೆ ಹರಾಜಾಗಿದೆ. ಈ ಮೂಲಕ ಇಮ್ರಾನ್ ಖಾನ್  ಸರಕಾರ ಮುಜುಗರಕ್ಕೆ ಒಳಗಾಗಿದ್ದು, ಅವಮಾನ ತಾಳಲಾರದೆ ಕೈ ಕೈ ಹಿಸುಕಿಕೊಳ್ಳುತ್ತಿದೆ.

LEAVE A REPLY

Please enter your comment!
Please enter your name here