ಸದ್ಯ ದೇಶದಲ್ಲಿ ಕೊರೊನಾದಿಂದಾಗಿ ಲಾಕ್ ಡೌನ್ ಪರಿಸ್ಥಿತಿ ಅನುಭವಿಸುವಂತಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಕುಳಿತು ತುಂಬಾ ಬೇಸರ ಉಂಟಾಗುತ್ತಿದೆ. ಇದರಿಂದಾಗಿ ಹಲವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಎನ್ನುವ ವಿಚಾರವನ್ನು ನಾವಿಲ್ಲಿ ಗಮನಿಸಲೇ ಬೇಕಾಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಾವು ಮಾಡುವ ಪ್ರತಿಯೊಂದು ಕಾರ್ಯದ ಸೆಲ್ಪಿತೆಗೆದು ಸಾಮಾಜಿಕ ತಾಣಗಳಲ್ಲಿ ಹರಿಬಿಡುವುದು ರೂಡಿಯಾಗಿಬಿಟ್ಟಿದೆ. ಅದೇ ರೀತಿ ನಮ್ಮ ನಾದಬ್ರಹ್ಮ ಹಂಸಲೇಖ ಅವರೂ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಟೋ ಈಗ ವೈರಲ್ ಆಗಿದೆ. ಹಾಗಾದರೆ ಈ ಲಾಕ್ ಡೌನ್ ಸಮಯದಲ್ಲಿ ನಮ್ಮ ಸಂಗೀತ ನಿರ್ದೇಶಕ ಹಂಸಲೇಕ ಅವರು ಏನು ಮಾಡಿದ್ದಾರೆ ಎಂದು ಯೋಚಿಸುತ್ತಿದೀರಾ..? ಈ ಬಾರಿ ಅವರು ಯಾವುದೇ ಸಂಗೀತ ಕ್ಷೇತ್ರದ ಸಾಧನೆಯನ್ನು ಮಾಡಿ ಹೆಸರಾಗಿಲ್ಲ…. ಬದಲಾಗಿ ಬೇರೊಂದು ಕೆಲಸವನ್ನು ಮಾಡಿ ವೈರಲ್ ಆಗಿದ್ದಾರೆ. ಅದೇನೆಂದು ತೀಳಿಯಲು ಮುಂದೆ ಓದಿ…
ಸಂಗೀತ ದಿಗ್ಗಜ ಹಂಸಲೇಖ ಅವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ತಮ್ಮ ಮನೆಯನ್ನು ಹೊಂದಿದ್ದಾರೆ. ಇಲ್ಲಿನ ಮನೆಯ ಮುಂದೆ ಬಿಬಿಎಂಪಿ ಅವರು ನೀರಿನ ಪೈಪೋ ಏನನ್ನೋ ಹಾಕಲು ರಸ್ತೆಯಲ್ಲಿ ಕಾಲುವೆ ತೋಡಿ ಡಾಂಬರು ಹಾಕದೆ ಹಾಗೆಯೇ ಮಣ್ಣು ಮುಚ್ಚಿ ಹೋಗಿದ್ದರು. ಸದ್ಯ ಲಾಕ್ ಡೌನ್ ಸಮಯ ಇದ್ದಿದ್ದರಿಂದ ಹಂಸಲೇಖ ಅವರು ಸಮಯವನ್ನು ಸಾರ್ಥಕ ಮಾಡಿಕೊಳ್ಳಲು ಕಾಂಕ್ರೀಟ್ ಹಾಕುವ ಕಾರ್ಯಕ್ಕೆ ತಾವೇ ಇಳಿದಿದ್ದಾರೆ. ಹೌದು… ಸ್ನೇಹಿತರೆ ಒಮ್ಮೆ ತಾವು ಆಚರ್ಯಗೊಂದರೂ ಇದು ಸತ್ಯ..!
ಇದನ್ನೂ ಓದಿರಿ: ಮಹಿಳಾ ದಿನಕ್ಕೆ ‘ನಿರ್ಭಯ ಸಮಾಜ ಕಟ್ಟೋಣ’ ಎಂದ ಪವರ್ ಸ್ಟಾರ್ ಪುನೀತ್..!
ರಸ್ತೆಯಲ್ಲಿ ಆಗಿರುವ ಹಳ್ಳವನ್ನು ನೋಡಿದ ಅವರು ಸ್ವತಃ ಜಲ್ಲಿ ಮತ್ತು ಸಿಮೆಂಟ್ ಕಲಸಿ ಈ ಹಳ್ಳಕ್ಕೆ ಅವರೇ ಕಾಂಕ್ರೀಟ್ ಹಾಕುವ ಮೂಲಕ ಗುಂಡಿಯನ್ನು ಮುಚ್ಚಿದ್ದಾರೆ. ಈ ಮೂಲಕ ಲಾಕ್ ಡೌನ್ ನ ಸಮಯವನ್ನು ಈ ಕಾರ್ಯದಲ್ಲಿ ತೊಡಗಿಸುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿಸಿದ್ದಾರೆ.