ಆಯ್ರಾ, ಯಥರ್ವ್ ಗೂ ವೆಕೇಶನ್: ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ರಾಧಿಕಾ, ಯಶ್ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.

ತಂದೆ ತಾಯಿಯಂತೆ ಮಕ್ಕಳಾದ ಆಯ್ರಾ ಹಾಗೂ ಯಥರ್ವ್​​ಗೂ ದೊಡ್ಡ ಅಭಿಮಾನಿ ಬಳಗವೇ ಇದೆ. 

ಸದ್ಯ ರಾಧಿಕಾ ಮತ್ತು ಯಶ್ ಜೊತೆಯಲ್ಲಿ ವೆಕೇಶನ್​ ಹೊರಟಿದ್ದು, ಮಕ್ಕಳಾದ ಆಯ್ರಾ, ಯಥರ್ವ್ ಇಬ್ಬರೂ ಎಂಜಾಯ್ ಮಾಡುತ್ತಿದ್ದಾರೆ.

ಸಮುದ್ರ ತೀರದಲ್ಲಿರುವ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.

ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಕೂಡ ಸಮುದ್ರದ ದಡದಲ್ಲಿ ಸಖತ್ತಾಗೆ ಎಂಜಾಯ್ ಮಾಡಿದ್ದಾರೆ.

ಆಯ್ರಾ ಹಾಗೂ ಯಥರ್ವ್​ ಇಬ್ಬರೂ ರಾಧಿಕಾ ಜತೆ ರಜೆಯ ಮಜ ಕಳೆಯುತ್ತಿರುವ ಫೋಟೋ ವೈರಲ್ ಆಗಿದೆ.