ಮದುವೆ ಸುದ್ದಿ ವೈರಲ್ ಆಗ್ತಿದ್ದಂತೆ ಗಂಡಿನ ಫೋಟೊ ಶೇರ್ ಮಾಡಿದ ತಮನ್ನಾ !

Image Source: instagram/tamannaahspeaks

ಸೆಲೆಬ್ರೆಟಿಗಳು ಏನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.

ಅಂತಹದರಲ್ಲಿ ತಮನ್ನಾ (Tamannaaha Bhatia) ಮದುವೆ ವಿಚಾರವಾಗಿ ಪದೇ ಪದೆ ಸುದ್ದಿಯಾಗುತ್ತಿದ್ದಾರೆ.

ತಮನ್ನಾ ಮುಂಬೈನ ದೊಡ್ಡ ಉದ್ಯಮಿಯೊಬ್ಬರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಸುದ್ದಿಯಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿರೋ ತಮನ್ನಾ ತಮ್ಮ ಭಾವಿ ಪತಿಯ ಫೋಟೋವನ್ನು ರಿವೀಲ್ ಮಾಡಿದ್ದಾರೆ.

ಮ್ಯಾರೇಜ್ ರೂಮರ್ಸ್ ಗಳಿಗೆ ಸೆಡ್ಡು ಹೊಡೆಯಲು ಎಫ್ 3 ಚಿತ್ರದ ಕ್ಲಿಪಿಂಗ್ ಶೇರ್ ಮಾಡಿದ್ದು, ತಮನ್ನಾ ಹುಡುಗನ ವೇಷ ಧರಿಸಿದ್ದಾರೆ.

ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಮತ್ತೊಮ್ಮೆ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.