ತಮನ್ನಾ ಹ್ಯಾಪಿ ಡೇಸ್ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದರು.

ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುವ ಮೂಲಕ ಬಹುತೇಕ ಎಲ್ಲ ತೆಲುಗು ಸ್ಟಾರ್ ಹೀರೋಗಳ ಜೊತೆಯಲ್ಲಿ ಅಭಿನಯಿಸಿದ್ದಾರೆ

ಇತ್ತೀಚಿಗೆ ಸಾಲು ಸಾಲಾಗಿ ಮೋಸ್ಟ್ ಎಲಿಜಬಲ್ ಬ್ಯಾಚುಲರ್‌ಗಳು ಮದುವೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತಮನ್ನಾ ಅವರ ಮದುವೆಯ ವಿಚಾರ ಸಹ ಮುನ್ನೆಲೆಗೆ ಬಂದಿದೆ

ಹಲವಾರು ಬಾರಿ ಮದುವೆಯ ಸುದ್ದಿ ಕೇಳಿಬಂದಾಗ ತಮನ್ನಾ ತಳ್ಳಿ ಹಾಕುತ್ತಲೇ ಬಂದಿದ್ದಾರೆ

ಈ ಹಿಂದೆ ಇಂಡಸ್ಟ್ರಿಯ ಹುಡುಗನನ್ನು ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿದ್ದು, ತಮನ್ನಾ ಇದನ್ನು ತಳ್ಳಿ ಹಾಕಿದ್ದರು

ಇದೀಗ ತಮನ್ನಾ ಮದುವೆಯ ಕುರಿತಂತೆ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ

ಉದ್ಯಮಿಯೊಂದಿಗಿನ ವಿವಾಹ ಕುರಿತಂತೆ ತಮನ್ನಾ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ