ಷೇರು ಮಾರುಕಟ್ಟೆಯಲ್ಲಿ ಉಪಯೋಗಕ್ಕೆ ಬರುವ ಸಪ್ತ ಸೂತ್ರಗಳು! 

ಸಾಲ ಮಾಡಿ ಇಂದಿಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಾರದು

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಯಾವಾಗಲೂ ಸಾಲವನ್ನು ತಂದು ಹಣ ಹೂಡುವುದು ಸರಿಯಲ್ಲ. ಅದೆಷ್ಟೇ ಮೊತ್ತದ ಹಣ ಮರಳಿ ಬರುತ್ತದೆ ಎಂದು ತಿಳಿದಿದ್ದರೂ ಇದು ಸರಿಯಾದ ಕ್ರಮವಲ್ಲ. ಮಾರುಕಟ್ಟೆ ಬಾಹ್ಯ ಕಾರಣಗಳಿಂದಲೂ ಏರಿಳಿತವನ್ನು ಕಾಣಬಹುದು.

ಷೇರು ಮಾಡುಕಟ್ಟೆಯಲ್ಲಿ ಅಧ್ಯಯನ ಮಾತ್ರದಿಂದ ಗೆಲುವು ಸಾಧ್ಯವಿಲ್ಲ

ಷೇರು ಮಾರುಕಟ್ಟೆಯಲ್ಲಿ ಅಧ್ಯಯನ ಮಾತ್ರದಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಅಧ್ಯಯನ ಅಗತ್ಯವಿಲ್ಲ ಎಂದಲ್ಲ. ಆಳವಾದ ಜ್ಞಾನವಿಲ್ಲದಿದ್ದರೆ ಸೋಲು ಖಚಿತ. ಅಧ್ಯಯನದೊಂದಿಗೆ ಪರಿಸ್ಥಿತಿಯನ್ನು ಅರಿಯುವ ಮತ್ತು ಅಂದಾಜಿಸುವ ಗುಣವು ಬಹು ಮುಖ್ಯವಾಗಿದೆ.

ಸದೃಢ, ಉತ್ತಮ ಇತಿಹಾಸ ಹೊಂದಿರುವ ಕಂಪನಿಯ ಷೇರುಗಳನ್ನು ಯೋಗ್ಯ ಬೆಲೆಯಲ್ಲಿ ಖರೀದಿಸಿ, ಉತ್ತಮ ಬೆಳೆಗೆ ಮಾರುವ ತಾಳ್ಮೆ ಅಗತ್ಯ

ತಳಹದಿ ಭದ್ರವಾಗಿರುವ ಕಂಪನಿಯನ್ನು ಆಯ್ಕೆಮಾಡಿ, ಹಣವನ್ನು ಹೂಡಿಕೆ ಮಾಡಿದ ನಂತರ ಯಾವುದೇ ಸಣ್ಣ ಪುಟ್ಟ ಏರಿಳಿತಗಳಿಗೆ ಹೆದರದೆ ತಾಳ್ಮೆಯಿಂದ ಕಾಯುವ ಗುಣವು ಷೇರುಮಾರುಕಟ್ಟೆಯಲ್ಲಿ ಬಹುಮುಖ್ಯವಾಗಿದೆ. ಹೂಡಿಕೆ ಮಾಡಿದ ಷೇರು ಯೋಗ್ಯವಾಗಿದ್ದರೆ ಮತ್ತೆ ಶೀಘ್ರವೇ ಏರಿಕೆ ಕಾಣಬಯುದು

ಹೂಡಿಕೆ ಮಾಡುವಾಗ ಸಂಪೂರ್ಣ ಮೊತ್ತವನ್ನು ಒಂದೇ ಷೇರಿನ ಮೇಲೆ ಸುರಿಯುವುದಕ್ಕಿಂತ, ಬೇರೆ ಬೇರೆ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮ

 ಷೇರು ಮಾರುಕಟ್ಟೆಯು ಬಾಹ್ಯ ಕಾರಣಗಳಿಂದಲೂ ಏರಿಳಿತ ಕಾಣುತ್ತದೆ. ನೀವು ಒಂದೇ ಶೇರಿನಲ್ಲಿ ಹೂಡಿಕೆ ಮಾಡುವುದಕ್ಕಿಂತ ವಿವಿಧ ಸೆಕ್ಟರ್ ನ ಷೇರಿನಲ್ಲಿ ಹಣ ತೊಡಗಿಸಿದ್ದರೆ ನಿಮ್ಮ ಹಣ ಹೆಚ್ಚಿನ ಸುರಕ್ಷತೆಯನ್ನು ಹೊಂದಿರುತ್ತದೆ. ಹಣವನ್ನು ವಿಭಜಿಸಿ ಹೂಡಿಕೆ ಮಾಡುವುದು ಒಂದು ಸುರಕ್ಷತೆಯಾಗಿರುತ್ತದೆ.

ಷೇರು ಮಾರುಕಟ್ಟೆಯ ರೂಲ್ಸ್ ಬೇರೆಯವರಿಂದ ಕೇಳಿಕೊಳ್ಳುವುದಕ್ಕಿಂತ ಸ್ವತಃ ಕಲಿಯುವುದು ಸೂಕ್ತ

ಇಲ್ಲಿ ಹಣವನ್ನು ಗಳಿಸಲು ಸಿದ್ಧ ಸೂತ್ರಗಳು ಯಾವುವು ಇಲ್ಲ. ಅಲ್ಲದೇ ಒಮ್ಮೆ ಯಶಸ್ಸು ತಂದುಕೊಟ್ಟವು ಮತ್ತೊಮ್ಮೆ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಬೇರೆಯವರ ಸೂತ್ರ ಬಳಸುವುದಕ್ಕಿಂತ ನಾವೇ ಕಂಡುಕೊಳ್ಳುವುದು, ಪ್ರಯೋಗ ಮಾಡುತ್ತ ಅನುಭವ ಗಳಿಸುವುದು ಉತ್ತಮ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಷೇರುಗಳ ಕುರಿತು ಅಪ್ಡೇಟ್ ಆಗಿರುವುದು ಅಗತ್ಯ

ಮಾರುಕಟ್ಟೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ ಮೇಲೆ ಅವುಗಳನ್ನು ಆಗಾಗ ಪರಿಶೀಲಿಸುತ್ತ ಇರುವುದು ಅಗತ್ಯವಾಗಿರುತ್ತದೆ. ಹೂಡಿಕೆ ಮಾಡಿ, ನೋಡದೆಯೇ ಇರುವುದರಿಂದ ನಷ್ಟವಾಗಬಹುದು. ಅಲ್ಲದೇ ನಾವು ಹೂಡಿ ಮಾಡಿರುವ ಕಂಪನಿಗಿಂತಲೂ ಅತ್ಯತ್ತಮ ಕಂಪನಿ ಬಂದಿರಹುದಲ್ಲವೇ?

ಯಾರೋ ಹೇಳಿದರು ಎಂದು ವಿಶ್ಲೇಷಿಸದೆ ಖರೀದಿಸುವುದು ದೊಡ್ಡ ಮೂರ್ಖತನ, ಇದನ್ನು ಯಾವತ್ತೂ ಮಾಡಬಾರದು

ಷೇರು ಮಾರುಕಟ್ಟೆಯಲ್ಲಿ ಬೇರೆಯವರ ಸಲಹೆಯನ್ನು ಕಣ್ಣು ಮುಚ್ಚಿ ಪಾಲಿಸುವುದು ಸರಿಯಲ್ಲ. ಸಲಹೆ ನೀಡಿದವರು ಅವರ ಹೂಡಿಕೆಯ ವಿಧಾನದಂತೆ ಈ ಕಂಪನಿಯ ಷೇರು ಉತ್ತಮ ಎನ್ನುತ್ತಾರೆ. ಆದರೆ ನಿಮ್ಮ ಹೂಡಿಕೆಯ ವಿಧಾನಕ್ಕೆ ಅದು ಸರಿಯದಿರಬಹುದು. ಹೀಗಾಗಿ ಹೂಡಿಕೆಗೂ ಮುನ್ನ ವಿಶ್ಲೇಷಣೆ ಅಗತ್ಯ.