'ಕಾಂತಾರ' ಬೆಡಗಿಯ ಬಿಂದಾಸ್ ಲುಕ್ !

'ಕಾಂತಾರ' ಸಕ್ಸಸ್ ನಂತರ ಇತ್ತೀಚಿಗೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಫೋಟೋ ಶೇರ್ ಮಾಡಿದ್ದಾರೆ.

2020 ರಲ್ಲಿ ತೆರೆಕಂಡ 'ಪಾಪ್​​ಕಾರ್ನ್ ಮಂಕಿ ಟೈಗರ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಎರಡನೆಯ ಚಿತ್ರ 'ಕಾಂತಾರ' ಮೂಲಕ ದೊಡ್ಡ ಯಶಸ್ಸು ಪಡೆದಿದ್ದಾರೆ.

'ಕಾಂತಾರ' ಚಿತ್ರದಲ್ಲಿ ಫಾರೆಸ್ಟ್ ಗಾರ್ಡ್ ಪಾತ್ರ ಮಾಡಿದ್ದು, ಇವರ ನಟನೆಯನ್ನು ಚಿತ್ರಪ್ರೇಮಿಗಳು ಮೆಚ್ಚಿದ್ದಾರೆ.

'ಕಾಂತಾರ' ಸಿನಿಮಾ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಸಪ್ತಮಿ ಗೌಡ ಅವರ ಡಿಮ್ಯಾಂಡ್ ಸಹ ಹೆಚ್ಚಾಗಿದೆ.

ಒಳ್ಳೊಳ್ಳೆ ಚಿತ್ರಗಳು ಅವರನ್ನು ಹುಡುಕಿ ಬರುತ್ತಿದ್ದು, ಅವರ ಮುಂದಿನ ಚಿತ್ರ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ.

ಇತ್ತೀಚಿಗೆ ವಾಹಿನಿಯೊಂದಕ್ಕೆ  ಭೇಟಿ ನೀಡಿದಾಗ ಸೆರೆಹಿಡಿಯಲಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಅತ್ಯುತ್ತಮ ನಟನೆಯ ಮೂಲಕ ಯಶಸ್ಸನ್ನು ಗಳಿಸಲಿ  ಎಂದು ಅಭಿಮಾನಿಗಳು ಹಾರೈಸಿದ್ದಾರೆ.