‘ವರಾಹ ರೂಪಂʼ ಹಾಡು ಹೊಂಬಾಳೆ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಿಂದ ಡಿಲೀಟ್‌ !

ವರಾಹ ರೂಪಂ ಹಾಡಿನ ಪ್ರಸಾರಕ್ಕೆ ಕೇರಳದ ಕಲ್ಲಿಕೋಟೆಯ ಸೆಷನ್ಸ್‌ ಕೋರ್ಟ್ ತಡೆ ನೀಡಿತ್ತು

ತಾವು ಐದು ವರ್ಷಗಳ ಹಿಂದೆ ಮಾಡಿದ್ದ ಮ್ಯೂಸಿಕ್ ಕಾಪಿ ಮಾಡಲಾಗಿದೆ ಎಂದು ತೈಕುಡಂ ಬ್ರಿಡ್ಜ್ ಎಂಬ ಸಂಸ್ಥೆ ಕೋರ್ಟ್‌ ಮೊರೆ ಹೋಗಿತ್ತು

ಆ ನಂತರ ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಕೋರ್ಟ್ ಕದತಟ್ಟಿದ್ದು, ಪಾಲಕ್ಕಾಡ್ ಕೋರ್ಟ್ ಸಹ ಪ್ರಸಾರಕ್ಕೆ ತಡೆ ನೀಡಿದೆ

ಈ ಪ್ರಕರಣ ಕುರಿತಂತೆ ರಿಷಬ್ ಮಾತನಾಡಿ, “ನಾವು ಈ ಹಾಡನ್ನು ಎಲ್ಲಿಂದಲೂ ಕದ್ದಿಲ್ಲ ಎಂದಿದ್ದಾರೆ”

“ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ನಾವು ಇದನ್ನು ಸಾಬೀತುಪಡಿಸುತ್ತೇವೆ” ಎಂದು ಹೇಳಿದ್ದಾರೆ

ಸದ್ಯ ಹೊಂಬಾಳೆ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಿಂದ ಹಾಡನ್ನು ಡಿಲೀಟ್ ಮಾಡಲಾಗಿದೆ

ಮುಂದೆ ಚಿತ್ರತಂಡ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ