ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಿಪಾಶಾ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ

ಬಿಪಾಶಾ ಮತ್ತು ಕರಣ್ ದಂಪತಿ ತಮ್ಮ ಮೊದಲ ಮಗುವಿನ ಆಗಮನದ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಬಿಪಾಶಾ ಬಸು  ಮತ್ತು ಕರಣ್ ಸಿಂಗ್ ಗ್ರೋವರ್ 2016 ಏಪ್ರಿಲ್ 30 ರಂದು ವಿವಾಹವಾಗಿದ್ದರು

ಈ ವರ್ಷದ ಆಗಸ್ಟ್ ನಲ್ಲಿ ಬಿಪಾಶಾ ಬಸು, ತಾನು ಗರ್ಭಿಣಿಯಾಗಿರುವುದನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು

ಶುಕ್ರವಾರ ಇನ್ಸ್ಟಾಗ್ರಾಮ್ ನಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡು, ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ  

'ಎಲ್ಲಾ ಸಮಯದಲ್ಲೂ ನಿಮ್ಮನ್ನು ನೀವು ಪ್ರೀತಿಸಿ, ನೀವು ಜೀವಿಸುವ ದೇಹವನ್ನು ಪ್ರೀತಿಸಿ' ಎಂದು ಬರೆದುಕೊಂಡಿದ್ದಾರೆ

ಶೀಘ್ರದಲ್ಲಿಯೇ ನಮ್ಮ ಮಗು ನಮ್ಮ ಕೈ ಸೇರಲಿದೆ, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೇಳಿಕೊಂಡಿದ್ದಾರೆ