ಕೆಂಪೇಗೌಡ ವಿಮಾನ ನಿಲ್ದಾಣ ಟರ್ಮಿನಲ್-2 ರ ಸೊಬಗು ಹೇಗಿದೆ ಗೊತ್ತೇ ?

ನೋಡಲು ಉದ್ಯಾನವನ ದಂತೆ ಕಂಡುಬರುತ್ತಿದ್ದು, ಕಲಾತ್ಮಕವಾಗಿ ಬಿದಿರಿನ ಬಳಕೆ ಮಾಡಲಾಗಿದೆ.

ಟರ್ಮಿನಲ್ ನಲ್ಲಿ ಚಾವಣಿ, ಕಂಬಗಳು ಮತ್ತು ರೇಲಿಂಗ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬಳಕೆ ಮಾಡಲಾಗಿದೆ.

ಇಲ್ಲಿ ಸುಮಾರು 923 ಕಿ.ಮೀ. ಉದ್ದದ ಬಿದಿರು ಬಳಕೆ ಮಾಡಲಾಗಿದೆ.

ನೈಸರ್ಗಿಕ ಬೆಳಕು ಪ್ರವೇಶಿಸುವಂತಹ ತಂತ್ರಜ್ಞಾನ ಮತ್ತು ಸೌರ ಫಲಕಗಳ ಬಳಕೆ ಮಾಡಲಾಗಿದ್ದು, ಶೇ. 24.9 ರಷ್ಟು ವಿದ್ಯುತ್ ಉಳಿತಾಯವಾಗಲಿದೆ.

ತೊಗಲು ಗೊಂಬೆಗಳು, ಬೋರ್ಡಿಂಗ್ ಪಿಯರ್ ಕಲಾಕೃತಿಗಳು ಸೇರಿದಂತೆ ಹಲವು ಕಲಾಕೃತಿಗಳನ್ನು ಅಲಂಕಾರಿಕವಾಗಿ ಬಳಕೆ ಮಾಡಲಾಗಿದೆ.

800 ವರ್ಷಗಳ 3600 ಕ್ಕೂ ಹೆಚ್ಚು ಜಾತಿಯ 6 ಲಕ್ಷ ಸಸ್ಯಗಳನ್ನು ಸುತ್ತುವರಿದ ಸೊಂಪಾದ ತೋಟದಲ್ಲಿ ಬಳಕೆ ಮಾಡಲಾಗಿದೆ.

ಟರ್ಮಿನಲ್ ಪ್ರವೇಶ ದ್ವಾರದಲ್ಲಿ ವಿಷ್ಣುವಿನ ವಾಹನ ಗರುಡ ಮತ್ತು 14 ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.