ಅಗ್ನಿಸಾಕ್ಷಿ ಧಾರಾವಾಹಿಯ 'ಸನ್ನಿಧಿ' ಎಂದೇ ಖ್ಯಾತಿ ಗಳಿಸಿರುವ ನಟಿ ವೈಷ್ಣವಿ.

ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು.

ಇತ್ತೀಚೆಗಷ್ಟೇ ವೈಷ್ಣವಿ ಹೊಸ ಮನೆಯನ್ನು ಖರೀದಿಸಿ, ಗೃಹ ಪ್ರವೇಶ ಕೂಡ ಮಾಡಿದ್ದರು.

ಹೊಸ ಮನೆ ಖರೀದಿಸಿದ ಬೆನ್ನಲ್ಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ.

ವೈಷ್ಣವಿ ಗೌಡ ವಿದ್ಯಾ ಭರಣ್ ಎನ್ನುವರ ಜೊತೆ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿದ್ಯಾ ಭರಣ್ ಮತ್ತು ವೈಷ್ಣವಿ ಇಬ್ಬರೂ ಮಾಲೆ ಹಾಕಿಕೊಂಡು ನಿಂತಿರುವ ಫೋಟೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.

ಸದ್ಯ ವೈರಲ್ ಆಗಿರುವ ವೈಷ್ಣವಿ ಎಂಗೇಜ್ಮೆಂಟ್ ಫೋಟೋದಲ್ಲಿ ಶಂಕರ್ ಬಿದಿರಿ ಕೂಡ ಇದ್ದಾರೆ.

ಈ ಕುರಿತು ವೈಷ್ಣವಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಫೋಟೋ ಮಾತ್ರ ಜಾಲತಾಣದಲ್ಲಿ ವೈರಲ್ ಆಗಿದೆ.