ಅಮೂಲ್ಯ ಅವಳಿ ಮಕ್ಕಳ ನಾಮಕರಣಕ್ಕೆ ಸ್ಯಾಂಡಲ್ ವುಡ್ ತಾರೆಯರ ರಂಗು

Image source: Instagram/nimmaamulya

ನಟಿ ಅಮೂಲ್ಯ ಸದ್ಯಕ್ಕೆ ತಾಯ್ತನದ ಖುಷಿಯಲ್ಲಿದ್ದು, ಇಬ್ಬರು ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ

ಖಾಸಗಿ ಹೋಟೆಲ್ ವೊಂದರಲ್ಲಿ ಅದ್ಧೂರಿಯಾಗಿ ಅವಳಿ ಮಕ್ಕಳ ನಾಮಕರಣ ಕಾರ್ಯಕ್ರಮ ಜರುಗಿದ್ದು, ಸೆಲೆಬ್ರೆಟಿಗಳ ದಂಡೇ ಬಂದಿತ್ತು 

ಅಮೂಲ್ಯ, ಜಗದೀಶ್ ದಂಪತಿ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂಬ ವಿಭಿನ್ನ ಹೆಸರನ್ನು ಇಟ್ಟಿದ್ದಾರೆ

ಇನ್ನೂ ಈ ಅದ್ದೂರಿ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರು, ಆಪ್ತರು ಸಾಕ್ಷಿಯಾಗಿದ್ದಾರೆ

ದರ್ಶನ, ಶಿವರಾಜ್ ಕುಮಾರ್,ಗಣೇಶ್, ಸೃಜನ್ ಲೋಕೇಶ್, ಪ್ರೇಮ್, ಪ್ರಿಯಾಂಕಾ ಉಪೇಂದ್ರ, ಮೇಘನಾ ಗಾಂವ್ಕಾರ್ ಸೇರಿದಂತೆ ತಾರೆಯರ ದಂಡೇ ಭಾಗಿಯಾಗಿತ್ತು

ಈ ಕಾರ್ಯಕ್ರಮದಲ್ಲಿ ಆಪ್ತರು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಹಲವಾರು ಭಾಗಿಯಾಗಿದ್ದರು

ನೆಚ್ಚಿನ ನಟಿ ಮತ್ತೆಯಾವಾಗ ತೆರೆಮೇಲೆ ಕಾಣಲಿದ್ದಾರೆ, ಯಾವಾಗ ಬಣ್ಣ ಹಚ್ಚಲಿದ್ದಾರೆ ಎಂದು ಅಭಿಮಾನಿಗಳು ಕೇಳುತ್ತಲಿದ್ದಾರೆ