‘ಚಿಲುಮೆ ಸಂಸ್ಥೆ’ ಮುಖ್ಯಸ್ಥ ರವಿಕುಮಾರ್ ಪೋಲಿಸ್ ವಶಕ್ಕೆ

voter-id-scam-chilume-founder-ravikumar-arrested

ಬೆಂಗಳೂರು: ಓಟರ್ ಐಡಿ ಅವ್ಯವಹಾರ ಪ್ರಕರಣ ಕುರಿತಂತೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ‘ಚಿಲುಮೆ ಸಂಸ್ಥೆ’ ಮುಖ್ಯಸ್ಥ ರವಿಕುಮಾರ್ ಅವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮತದಾರರ ದತ್ತಾಂಶ ಕಳುವು ಪ್ರಕರಣದಲ್ಲಿ ರವಿಕುಮಾರ್ ಮುಖ್ಯ ಸೂತ್ರಧಾರಿ ಎನ್ನಲಾಗಿದ್ದು, ಕಳೆದ ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಇಂದು ನಗರದ ಹೊರವಲಯದಲ್ಲಿ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಲಸೂರು ಗೆಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರು ದೂರು ನೀಡುತ್ತಿದ್ದಂತೆ ರವಿಕುಮಾರ್ ಅವರು ತಲೆಮರೆಸಿಕೊಂಡಿದ್ದರು. ಕಚೇರಿಯಲ್ಲಿದ್ದ ದಾಖಲೆಗಳನ್ನು ಮನೆಗೆ ಸಾಗಿಸಿ ಬೀಗ ಹಾಕಿ ಪರಾರಿಯಾಗಿದ್ದರು.

ಇದನ್ನೂ ಓದಿರಿ: ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಮೋದಿ ಸರಕಾರ – ಮಲ್ಲಿಕಾರ್ಜುನ್ ಖರ್ಗೆ

LEAVE A REPLY

Please enter your comment!
Please enter your name here